ಬಿಜೆಪಿ ಸರ್ಕಾರದ ಕೊರೊನಾ ಹಗರಣದ ಮತ್ತಷ್ಟು ಸ್ಫೋಟಕ ಅಂಶ ಬೆಳಕಿಗೆ: ಬಿಎಸ್​ವೈ, ಶ್ರೀರಾಮುಲುಗೆ ಕುತ್ತು!

ಕೊರೊನಾ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ್ದ ವೈರಸ್. ಕೊವಿಡ್ ಕಾಲದಲ್ಲಿ ಸಾಲುಸಾಲು ಹೆಣಗಳು ಉರುಳಿದ್ದವು. ಜನ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ರು. ತುತ್ತು ಕೂಳಿಗೂ ಕಂಗಾಲಾಗಿದ್ದ ಕಾಲವದು. ಆದ್ರೆ ಅದೇ ಹೊತ್ತಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿತ್ತು ಎನ್ನುವ ಮಹಾ ಆರೋಪವೊಂದು ಕೇಳಿ ಬಂದಿದೆ.. ಕೊರೊನಾ ವೇಳೆ RTPCR ಟೆಸ್ಟ್ ಮಾಡಿಸಿಕೊಂಡವರೆಲ್ಲಾ ಶಾಕ್ ಆಗೋ ಮಾಹಿತಿಯೊಂದನ್ನ ಇವತ್ತಿನ ಇನ್​ಸೈಡ್ ಸುದ್ದಿಯಲ್ಲಿ ಹೊತ್ತು ತಂದಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಬಿಜೆಪಿ ಸರ್ಕಾರದ ಕೊರೊನಾ ಹಗರಣದ ಮತ್ತಷ್ಟು ಸ್ಫೋಟಕ ಅಂಶ ಬೆಳಕಿಗೆ: ಬಿಎಸ್​ವೈ, ಶ್ರೀರಾಮುಲುಗೆ ಕುತ್ತು!
ಶ್ರೀರಾಮುಲು, ಬಿಎಸ್ ಯಡಿಯೂರಪ್ಪ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 12, 2024 | 4:44 PM

ಬೆಂಗಳೂರು, (ನವೆಂಬರ್ 12): ಬಿಜೆಪಿ ವಿರುದ್ಧ ಕೊರೊನಾಸ್ತ್ರ ಹೂಡಿದ್ದ ಕಾಂಗ್ರೆಸ್, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ನಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿದ್ದು, ಈ ಆಯೋಗ ಮಧ್ಯಂತರ ವರದಿ ನೀಡಿದೆ. ಈ ವರದಿ ಆಧರಿಸಿ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿದೆ. ಸರ್ಕಾರ ಸ್ಥಳೀಯ ಕಂಪನಿಗಳಿಂದ ಬರೀ 446 ರೂಪಾಯಿ ಪಿಪಿಇ ಕಿಟ್ ಖರೀದಿ ಮಾಡಿತ್ತು. ಆದ್ರೆ ಚೀನಾ ಕಂಪನಿಗಳಿಗೆ ಮಾತ್ರ 2 ಸಾವಿರದ 117 ರೂಪಾಯಿ ಕೊಟ್ಟಿತ್ತು. 2 ಕಂಪನಿಗಳ ಪಿಪಿಇ ಕಿಟ್ ಕೂಡ ಒಂದೇ ಗುಣಮಟ್ಟದ್ದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಈ ಮಾಹಿತಿಯನ್ನೆಲ್ಲಾ ಇದೇ ಇನ್​ಸೈಡ್ ಸುದ್ದಿಯಲ್ಲಿ ನಿಮ್ಮ ಮುಂದಿಟ್ಟಿದ್ವಿ. ಆದ್ರೆ ಈಗ ಮಧ್ಯಂತರ ವರದಿಯಲ್ಲಿರುವ ಮತ್ತೊಂದು ಸ್ಫೋಟಕ ಟಿವಿ9ಗೆ ಸಿಕ್ಕಿದೆ.

ಮಧ್ಯಂತರ ವರದಿಯಲ್ಲಿರೋದೇನು?

ಬಿಎಸ್​ವೈ, ರಾಮುಲು ಕಾರ್ಯವೈಖರಿಗೆ ಸಮಿತಿ ಅಕ್ಷೇಪ ವ್ಯಕ್ತಪಡಿಸಿದೆ. ಖಾಸಗಿ ಲ್ಯಾಬ್​ಗಳಿಗೆ 6.93ಕೋಟಿ ಹಣ ಸಂದಾಯವಾಗಿದೆ. ಆದ್ರೆ 14 ಲ್ಯಾಬ್​ಗಳು ICMRನಿಂದ ಮಾನ್ಯತೆ ಪಡೆದಿಲ್ಲ. ಈ ICMR ಲ್ಯಾಬ್​ಗಳು ಅಧಿಕೃತ ಅಲ್ಲ ಎಂದು ಜಾನ್ ಮೈಕೆಲ್ ಡಿ ಕುನ್ಹಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. RTPCR ಟೆಸ್ಟ್​ಗೆ ಲ್ಯಾಬ್​ಗಳ ಸಾಮರ್ಥ್ಯ, ಕ್ಷಮತೆ ಗುರುತಿಸಿಲ್ಲ. ಸಾಮರ್ಥ್ಯ, ಕ್ಷಮತೆ ಪರಿಶೀಲಿಸದೆ ಲ್ಯಾಬ್​ಗಳಿಗೆ ಅನುಮತಿ ನೀಡಲಾಗಿದೆ. 6 ಖಾಸಗಿ ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಲಾಗಿದೆ. ಅನಧಿಕೃತವಾಗಿ ಲ್ಯಾಬ್​ಗಳಿಗೆ ಹಣ ಸಂದಾಯದ ಬಗ್ಗೆ ಮಧ್ಯಂತರ ವರದಿ ನೀಡಲಾಗಿದೆ. 8 ಲ್ಯಾಬ್​ಗಳಿಗೆ ಅನುಮತಿ ಪಡೆಯದೆ 4.28 ಕೋಟಿ ಹಣ ನೀಡಲಾಗಿದೆ. ಕಾರ್ಯಾದೇಶವಿಲ್ಲದೆ ಖಾಸಗಿ ಲ್ಯಾಬ್​ಗಳು ಬಿಲ್ ನೀಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಕೊರೊನಾ ಹಗರಣ: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು

ಕೋವಿಡ್ ಜಾಹೀರಾತಿನಲ್ಲೂ ಅಕ್ರಮ

ರಾಷ್ಟ್ರೀಯ ಆರೋಗ್ಯ ಮಿಷನ್ ಎಂಡಿ ಪಾರದರ್ಶಕತೆ ಅನುಸರಿಸದೆ ಆಯ್ದ ಲ್ಯಾಬ್​ಗಳಿಗೆ ಅನುಕೂಲ ಮಾಡಿರುವ ಆರೋಪ ಮಾಡಲಾಗಿದೆ. ಈ ಬಗ್ಗೆ ಮುಖ್ಯಕಾರ್ಯದರ್ಶಿಯಿಂದ ತನಿಖೆಗೆ ಶಿಫಾರಸು ಮಾಡಲಾಗಿದೆ. ಇಷ್ಟೇ ಅಲ್ಲ ಕೋವಿಡ್ ಜಾಹೀರಾತಿನಲ್ಲೂ ಅಕ್ರಮ ಎಸಗಿರುವ ಆರೋಪವೂ ಇದೆ. BMTC ಎಂಡಿ ಸಲಹೆ ಮೆರೆಗೆ ಯಾವುದೇ ಅನುಮತಿ ಪಡೆಯದೆ ಖಾಸಗಿ ಸಂಸ್ಥೆಗೆ 8.85ಲಕ್ಷ ಹಣ ಸಂದಾಯ ಮಾಡಲಾಗಿದೆ. 8ಲಕ್ಷ ಹಣ ವಸೂಲಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕೋವಿಡ್ ಆಪ್ತಮಿತ್ರ ಸೇವೆಯಲ್ಲಿ ಗೋಲ್ ಮಾಲ್ ಬಗ್ಗೆ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಅಗ್ರಿಮೆಂಟ್ ಇಲ್ಲದೆ BPO ಸರ್ವಿಸ್ ನೀಡಿರುವ ಆರೋಪದ ಹಿನ್ನೆಲೆ ಎರಡು ಬಿಪಿಒ ಸಂಸ್ಥೆಗಳ ವಿರುದ್ಧ ತನಿಖೆಗೆ ಶಿಫಾರಸು ಮಾಡಲಾಗಿದೆ.

ಇದು ಕೇವಲ ಮಧ್ಯಂತರ ವರದಿ

ಕೊರೊನಾ ಕಾಲದಲ್ಲಿ ಅಕ್ರಮ ಆಗಿದೆ ಎನ್ನುವುದು ಕುನ್ನಾ ಕಮೀಟಿ ವರದಿ ಹೇಳಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ವಿಧಿಸಿ ಖರೀದಿ ಮಾಡಿದ್ದಾರೆ. ಬಿಜೆಪಿ ಹೆಣದ ಮೇಲೆ ಹಣ ಮಾಡಿದೆ. 49 ಕೋಟಿ ವಸೂಲಿ ಮಾಡಲು ಕುನ್ನಾ ಕಮೀಟಿ ವರದಿ ನೀಡಿದೆ. ವೈದ್ಯಕೀಯ ಶಿಕ್ಷಣ,ಆರೋಗ್ಯ ಇಲಾಖೆ ಭಾರಿ ಮೊತ್ತದ ಭ್ರಷ್ಟಾಚಾರ ಆಗಿದೆ. ಪಿಪಿಇ ಕಿಟ್,ಸಿಟಿ ಸ್ಕ್ಯಾನ್,ವೆಂಟಿಲೆಟರ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಈಗಾಗಲೇ ಇಲಾಖೆ ಹಿಂದಿನ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದೇವೆ. ಕಿದ್ವಾಯಿ ಅಸ್ಪತ್ರೆಯ ಆರ್ ಟಿಪಿಸಿಆರ್ ಟೆಸ್ಟಿಂಗ್ ನಲ್ಲಿ 200 ಕೋಟಿಗೂ ಹೆಚ್ಚು ಅವ್ಯವಹಾರ ಮಾಡಿದ್ದಾರೆ. ಇದು ಕೇವಲ ಮಧ್ಯಂತರ ವರದಿ. ಅಂತಿಮ ವರದಿಯಲ್ಲಿ ಇನ್ನು ಬಹಳಷ್ಟು ಭ್ರಷ್ಟಾಚಾರ ಬಯಲಾಗುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ