ಕರ್ನಾಟಕದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚಳ: ಒಂದೇ ದಿನದಲ್ಲಿ 424 ಪ್ರಕರಣ ದಾಖಲು

ದಿನದಿಂದ ದಿನಕ್ಕೆ ಡೆಂಗ್ಯೂ ಓಟ ಹೆಚ್ಚುತ್ತಲೇ ಇದೆ. ಅದರಲ್ಲೂ ಮಕ್ಕಳನ್ನೇ ಟಾರ್ಗೆಟ್‌ ಮಾಡುತ್ತಿದೆ. ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 424 ಡೆಂಗ್ಯೂ ಕೇಸ್ ದಾಖಲಾಗಿವೆ. ಬೆಂಗಳೂರಲ್ಲಿ ಒಂದೇ ದಿನಕ್ಕೆ 202 ಡೆಂಗ್ಯೂ ಕೇಸ್​ಗಳು ದಾಖಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚಳ: ಒಂದೇ ದಿನದಲ್ಲಿ 424 ಪ್ರಕರಣ ದಾಖಲು
ಕರ್ನಾಟಕದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚಳ: ಒಂದೇ ದಿನದಲ್ಲಿ 424 ಪ್ರಕರಣ ದಾಖಲು
Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2024 | 8:53 PM

ಬೆಂಗಳೂರು, ಜುಲೈ 13: ಡೆಂಗ್ಯೂ (Dengue) ಹೆಮ್ಮಾರಿ ರಾಜ್ಯದಲ್ಲಿ ತನ್ನ ಡೆಡ್ಲಿ ಆಟವನ್ನು ಮುಂದುವರೆಸಿದ್ದು, ಇಂದು ವಿದ್ಯಾರ್ಥಿನಿಯನ್ನು ಬಲಿ ಪಡೆದಿದೆ. ಜೊತೆಗೆ ಮಕ್ಕಳನ್ನೇ ಟಾರ್ಗೆಟ್‌ ಮಾಡುತ್ತಿದೆ. ರಾಜ್ಯದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚುತ್ತಿವೆ. ಕಳೆದ 24 ಗಂಟೆಯಲ್ಲಿ 424 ಡೆಂಗ್ಯೂ ಕೇಸ್ ದಾಖಲಾಗಿದ್ದು, ಬೆಂಗಳೂರಲ್ಲಿ 24 ಗಂಟೆಯಲ್ಲಿ 202 ಡೆಂಘೀ ಕೇಸ್ ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಡೆಂಗ್ಯೂ ಕೇಸ್​ಗಳ ಸಂಖ್ಯೆ 9,082ಕ್ಕೆ ಏರಿಕೆ ಆಗಿದೆ.

ಡೆಂಗ್ಯೂಗೆ ಕಾಲೇಜ್‌ ವಿದ್ಯಾರ್ಥಿನಿ ಸಾವು

ಹಾಸನ, ಹಾವೇರಿ, ಚಿಕ್ಕಮಗಳೂರು ಕೆಲ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಡೆಂಗ್ಯೂಗೆ ಮತ್ತಷ್ಟು ಶಕ್ತಿ ನೀಡಿದಂತ್ತಾಗಿದೆ. ಹೀಗಿರುವಾಗಲೇ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ಶಂಕಿತ ಡೆಂಗ್ಯೂಗೆ ವಿದ್ಯಾರ್ಥಿ ಸಾವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ವ್ಯಕ್ತಿ ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಪಡ್ನೂರಿನ ಯತೀಶ್ (50) ಮೃತ ವ್ಯಕ್ತಿ. ಮೂಲತಃ ಬಂಟ್ವಾಳ ತಾಲೂಕಿನ ಶಂಭೂರು ನಿವಾಸಿ. ಜು.10 ರಂದು ಯತೀಶ್​ಗೆ ಜ್ವರ ಕಾಣಿಸಿಕೊಂಡಿತ್ತು. ವಿಪರೀತ ಜ್ವರದಿಂದ ಬಳಲುತ್ತಿದ್ದ ಯತೀಶ್​ರನ್ನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ: BPL ಕಾರ್ಡ್‌ದಾರರಿಗೆ ಉಚಿತ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ

ಪ್ರಥಮ ವರ್ಷದ ಪದವಿ ಓದುತ್ತಿದ್ದ ಅಶ್ವಿನಿ ಜ್ವರ ಅಂತಾ ಆಸ್ಪತ್ರೆ ಸೇರಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್‌ ಪಡೆಯುತ್ತಿದ್ದ ಅಶ್ವಿನಿ, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.

ಡೆಂಗ್ಯೂಗೆ ಹಾಸನದಲ್ಲೇ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದುವರೆಗೆ 15 ವರ್ಷದೊಳಗಿನ 6 ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಗದಗ ಜಿಲ್ಲೆಯಲ್ಲೂ ಇಬ್ಬರು ಮಕ್ಕಳು ಡೆಂಗ್ಯೂಯಿಂದಲೇ ಸಾವಿನ ಮನೆ ಸೇರಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಇಬ್ಬರು ಮಕ್ಕಳು ಬಲಿ ಆಗಿರೋದು ಗೊತ್ತಾಗಿದೆ. ಹಾವೇರಿಯಲ್ಲಿ ಇಬ್ಬರು ಮಕ್ಕಳು ಹೆಮ್ಮಾರಿಗೆ ಮೃತಪಟ್ಟಿದ್ದರೆ, ಚಿಕ್ಕಮಗಳೂರಿನಲ್ಲಿ 1 ಮಗು ಡೆಂಗ್ಯೂ ಕಾರಣಕ್ಕೆ ಪ್ರಾಣ ಬಿಟ್ಟಿದೆ. ಬೆಂಗಳೂರಿನಲ್ಲೂ ಒಂದು ಮಗು ಡೆಂಗ್ಯೂಯಿಂದಲೇ ಉಸಿರು ನಿಲ್ಲಿಸಿರೋದು ಗೊತ್ತಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರಿದ ಡೆಂಗ್ಯೂ ಅಬ್ಬರ: 24 ಗಂಟೆಯಲ್ಲಿ 293 ಜನರಿಗೆ ಸೋಂಕು ದೃಢ

ಡೆಂಗ್ಯೂ ಹಾವಳಿ ತಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿಯನ್ನು ಇತ್ತೀಚೆಗ ಹೊರಡಿಸಿತ್ತು. ಡೆಂಗ್ಯೂ ನಿರ್ವಹಣೆಯ ಎಲ್ಲಾ ಗೈಡ್ ಲೈನ್ಸ್​ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮತ್ತು ಡಿಹೆಚ್​ಒಗಳಿಗೆ ಸೂಚನೆ ನೀಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:27 pm, Sat, 13 July 24