ಎಸ್ಐಟಿ ಅಧಿಕಾರಿಗಳೇ ವಿದೇಶಕ್ಕೆ ತೆರಳಿ ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ ದಕ ಕಾಂಗ್ರೆಸ್ ಕಾರ್ಯಕರ್ತೆಯರ ಆಗ್ರಹ

ಎಸ್ಐಟಿ ಅಧಿಕಾರಿಗಳೇ ವಿದೇಶಕ್ಕೆ ತೆರಳಿ ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ ದಕ ಕಾಂಗ್ರೆಸ್ ಕಾರ್ಯಕರ್ತೆಯರ ಆಗ್ರಹ

ಅರುಣ್​ ಕುಮಾರ್​ ಬೆಳ್ಳಿ
|

Updated on: May 06, 2024 | 2:29 PM

ಏತನ್ಮಧ್ಯೆ, ಏಪ್ರಿಲ್ 26 ರಂದು ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ಬಲ್ ರೇವಣ್ಣ ಸದ್ಯಕ್ಕಂತೂ ಸ್ವದೇಶಕ್ಕೆ ವಾಪಸ್ಸಾಗುವ ಕ್ಷಣಗಳಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಲೋಕ ಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ವದೇಶಕ್ಕೆ ಬರಲಿದ್ದಾರೆ ಅಥವಾ ಅವರಿಗೆ ಹಾಗೆ ಸೂಚಿಸಲಾಗಿದೆ.

ಮಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳೂರು ಜಿಲ್ಲಾ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಇಂದು ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಕಚೇರಿ (DK block Congress office) ಮುದೆ ಪ್ರತಿಭಟನೆ ನಡೆಸಿದರು. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಬೇಕು, ಮಹಿಳೆಯರ ಅತ್ಯಾಚಾರವೆಸಗಿ ವಿದೇಶದಲ್ಲಿ ಅಡಗಿ ಕೂತಿರುವ ಪ್ರಜ್ವಲ್ ರೇವಣ್ಣರನ್ನು ವಾಪಸ್ಸು ಕರೆತಂದು ಬಂಧಿಸಿ ಎಂದು ಘೋಷಣೆಗಳನ್ನು ಕೂಗಿದ ಕಾರ್ಯಕರ್ತೆಯರು, ಮಹಿಳೆಯರಿಗೆ ಘನತೆಯ ಬದುಕು ಬೇಕು ಸ್ತ್ರೀ ಕಂಟಕರಿಗೆ ಶಿಕ್ಷೆಯಾಗಲೇಬೇಕು ಎಂದು ಬರೆದ ಪ್ಲಕಾರ್ಡ್ ಗಳನ್ನು ಪ್ರದರ್ಶಿಸಿದರು. ಏತನ್ಮಧ್ಯೆ, ಏಪ್ರಿಲ್ 26 ರಂದು ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ಬಲ್ ರೇವಣ್ಣ ಸದ್ಯಕ್ಕಂತೂ ಸ್ವದೇಶಕ್ಕೆ ವಾಪಸ್ಸಾಗುವ ಕ್ಷಣಗಳಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಲೋಕ ಸಭಾ ಚುನಾವಣೆಯ (Lok Sabha Polls) ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ವದೇಶಕ್ಕೆ ಬರಲಿದ್ದಾರೆ ಅಥವಾ ಅವರಿಗೆ ಹಾಗೆ ಸೂಚಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣಲ್ಲಿ ದೇವೇಗೌಡ ಮತ್ತು ನನ್ನ ವಿರುದ್ಧ ಯಾಕೆ ಮೀಡಿಯ ಟ್ರಯಲ್? ಹೆಚ್ ಡಿ ಕುಮಾರಸ್ವಾಮಿ