ದಕ್ಷಿಣ ಕನ್ನಡ: ಕಾರು ಹೊಳೆಗೆ ಬಿದ್ದ ಪ್ರಕರಣ; ಕಾರಿನಲ್ಲಿದ್ದ ಇಬ್ಬರಿಗಾಗಿ ಮುಂದುವರೆದ ಶೋಧ ಕಾರ್ಯಾ
ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಹೊಳೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಇಬ್ಬರಿಗಾಗಿ ಶೋಧ ಕಾರ್ಯಾ ಮುಂದುವರೆದಿದೆ.
ದಕ್ಷಿಣ ಕನ್ನಡ: ಸೇತುವೆ (Bridge) ತಡೆಗೋಡೆಗೆ ಡಿಕ್ಕಿಯಾಗಿ ಕಾರು ಹೊಳೆಗೆ (River) ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಇಬ್ಬರಿಗಾಗಿ ಶೋಧ ಕಾರ್ಯಾ ಮುಂದುವರೆದಿದೆ. ಬಂಟ್ವಾಳ (Bantwal) ತಾಲೂಕಿನ ಕುಂಡಡ್ಕ ಗ್ರಾಮದ 25 ವರ್ಷದ ಧನುಷ್, ಕನ್ಯಾನ ಗ್ರಾಮದ 26 ವರ್ಷದ ಧನುಷ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇಬ್ಬರೂ ಸಂಬಂಧಿಕರಾಗಿದ್ದು, ಟೈಲ್ಸ್ ಮತ್ತು ಟಿಂಬರ್ ಕೆಲಸ ಮಾಡುತ್ತಿದ್ದರು. ಸದ್ಯ ಎಸ್‌ಡಿಆರ್‌ಎಫ್ (SDRF) ಸಿಬ್ಬಂದಿ ಕೊಚ್ಚಿಹೋಗಿದ್ದ ಕಾರನ್ನು ಪತ್ತೆ ಹಚ್ಚಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು ಬಳಿ ತಡರಾತ್ರಿ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಹೊಳೆಗೆ ಬಿದ್ದಿದೆ. ಮಧ್ಯರಾತ್ರಿ ವೇಳೆ ಭಾರೀ ವೇಗವಾಗಿ ಬಂದ ಕಾರು ಉಕ್ಕಿ ಹರಿಯುವ ಹೊಳೆಗೆ ಬಿದ್ದಿದೆ. ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಅಪಘಾತದ ವೇಗಕ್ಕೆ ಸೇತುವೆಯ ತಡೆ ಬೇಲಿ ಜಖಂ ಆಗಿದೆ. ಮೂರು ಕಬ್ಬಿಣ ಕಂಬಗಳು ಮುರಿದು ನೇತಾಡುತ್ತಿವೆ. ಕಾರು ಮತ್ತು ಕಾರಿನಲ್ಲಿದ್ದವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
Published On - 3:07 pm, Sun, 10 July 22