ಹವಾಮಾನ ವೈಪರೀತ್ಯ: ದುಬೈನಿಂದ ಮಂಗಳೂರಿಗೆ ಹೊರಟಿದ್ದ ವಿಮಾನ ಕೊಚ್ಚಿಗೆ ಹೋಗಿ ಪುನಃ ಮಂಗಳೂರಿಗೆ ಆಗಮನ

ದುಬೈನಿಂದ ಆಗಮಿಸಿದ್ದ ಸದರಿ ಏರ್ ಇಂಡಿಯಾ ವಿಮಾನ 1XE 384 ರಲ್ಲಿ ಒಟ್ಟು 118 ಪ್ರಯಾಣಿಕರಿದ್ದರು. ಹವಾಮಾನ ಕಾರಣದಿಂದ ಕೊಚ್ಚಿಗೆ ತೆರಳಿದ್ದ ಈ ವಿಮಾನ ಇಂದು ಮಂಗಳೂರಿಗೆ ಮರಳಿ ಬಂದಿದ್ದು ಎಲ್ಲಾ ಪ್ರಯಾಣಿಕರು ಸಹ ಸುರಕ್ಷಿತವಾಗಿ ಬಂದಿಳಿದಿದ್ದಾರೆ.

  • Publish Date - 12:32 pm, Tue, 13 April 21 Edited By: preethi shettigar
ಹವಾಮಾನ ವೈಪರೀತ್ಯ: ದುಬೈನಿಂದ ಮಂಗಳೂರಿಗೆ ಹೊರಟಿದ್ದ ವಿಮಾನ ಕೊಚ್ಚಿಗೆ ಹೋಗಿ ಪುನಃ ಮಂಗಳೂರಿಗೆ ಆಗಮನ
ಸಾಂದರ್ಭಿಕ ಚಿತ್ರ


ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ದುಬೈನಿಂದ ಹೊರಟು ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ನಿನ್ನೆ ತಡರಾತ್ರಿ ಕೊಚ್ಚಿಗೆ ಹೋಗಿ ಇಂದು ಮತ್ತೆ ಮಂಗಳೂರಿಗೆ ಮರಳಿದೆ. ತಡರಾತ್ರಿ ಸುಮಾರು ಎರಡು ಗಂಟೆಯ ವೇಳೆಗೆ ಕೊಚ್ಚಿಗೆ ತೆರಳಿ ಲ್ಯಾಂಡ್ ಆಗಿದ್ದ 1XE 384 ಏರ್ ಇಂಡಿಯಾ ವಿಮಾನ ದುಬೈನಿಂದ ಆಗಮಿಸಿತ್ತು. ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದಾಗ ಭಾರೀ ಮಳೆ ಸುರಿಯುತ್ತಿದ್ದ ಕಾರಣ ವಿಮಾನವನ್ನು ಕೊಚ್ಚಿಗೆ ತಿರುಗಿಸಲಾಗಿತ್ತು.

ದುಬೈನಿಂದ ಆಗಮಿಸಿದ್ದ ಸದರಿ ಏರ್ ಇಂಡಿಯಾ ವಿಮಾನ 1XE 384 ರಲ್ಲಿ ಒಟ್ಟು 118 ಪ್ರಯಾಣಿಕರಿದ್ದರು. ಹವಾಮಾನ ಕಾರಣದಿಂದ ಕೊಚ್ಚಿಗೆ ತೆರಳಿದ್ದ ಈ ವಿಮಾನ ಇಂದು ಮಂಗಳೂರಿಗೆ ಮರಳಿ ಬಂದಿದ್ದು, ಎಲ್ಲಾ ಪ್ರಯಾಣಿಕರು ಸಹ ಸುರಕ್ಷಿತವಾಗಿ ಬಂದಿಳಿದಿದ್ದಾರೆ ಎಂದು ತಿಳಿದುಬಂದಿದೆ.

2025ರೊಳಗೆ ಭಾರತವನ್ನು ಟಿಬಿ ಮುಕ್ತ ದೇಶವನ್ನಾಗಿ ಮಾಡಬೇಕು
ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಆತಂಕ ಸೃಷ್ಟಿಸುತ್ತಿರುವ ನಡುವಿನಲ್ಲೇ ಕೇಂದ್ರ ಸರ್ಕಾರ ಲಕ್ಷದ್ವೀಪ ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಗಳನ್ನು ಟಿಬಿ ರೋಗಮುಕ್ತ ಎಂದು ಘೋಷಿಸಿದೆ. ಈ ಎರಡೂ ಜಿಲ್ಲೆಗಳಲ್ಲಿ ಟಿಬಿ ನಿರ್ಮೂಲನೆ ಆಗಿದ್ದು, 2025ರೊಳಗಾಗಿ ಇಡೀ ದೇಶವನ್ನು ಟಿಬಿ ಮುಕ್ತ ಮಾಡಲು ಕೇಂದ್ರ ಸರ್ಕಾರ ಪಣತೊಟ್ಟಿದೆ ಎಂದು ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

ಇದನ್ನೂ ಓದಿ: 
ವಿಮಾನ ಓಡಿಸುತ್ತಾರೆ ಈ ಕನ್ನಡ ನಟಿ; ಅವರು ಯಾರು ಗೊತ್ತಾ 

Karnataka Weather: ಮುಂದಿನ ನಾಲ್ಕೈದು ದಿನಗಳಲ್ಲಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

(AirIndia Flight emergency landed in Kochi International Airport and later arrived to Mangalore)