ನೌಕರಿ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ -ನೆಟ್ಟಾರು ಗ್ರಾಮಕ್ಕೆ ಭೇಟಿ ನೀಡಿ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಿ.ವೈ.ವಿಜಯೇಂದ್ರ
ಇಂತಹ ಕೃತ್ಯಗಳು ಬೇರೆಲ್ಲೂ ಆಗಕೂಡದು. ಈ ಕೃತ್ಯದ ಹಿಂದೆ ಇರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ. ಈ ಕುಟುಂಬಕ್ಕೆ ಬಂದ ಸ್ಥಿತಿ ಶತ್ರುಗಳಿಗೂ ಬರಬಾರದು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ನೆಟ್ಟಾರು ಗ್ರಾಮಕ್ಕೆ ಬಿ.ವೈ.ವಿಜಯೇಂದ್ರ(BY Vijayendra) ಭೇಟಿ ನೀಡಿ ಪ್ರವೀಣ್(Praveen Nettar) ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಪ್ರವೀಣ್ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ಸಿಎಂ, ಗೃಹ ಮಂತ್ರಿ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ. SDPI, PFI ಯಾರೇ ಇದ್ರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಇಂತಹ ಕೃತ್ಯಗಳು ಬೇರೆಲ್ಲೂ ಆಗಕೂಡದು. ಈ ಕೃತ್ಯದ ಹಿಂದೆ ಇರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ. ಈ ಕುಟುಂಬಕ್ಕೆ ಬಂದ ಸ್ಥಿತಿ ಶತ್ರುಗಳಿಗೂ ಬರಬಾರದು. ಪ್ರವೀಣ್ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು. ಈ ವೇಳೆ ನಿನ್ನೆ ಬೆಳ್ಳಾರೆಯಲ್ಲಿ ಲಾಠಿಚಾರ್ಜ್ ನಡೆದ ವಿಚಾರವಾಗಿ ಪ್ರಶ್ನಿಸಿದಾಗ, ಉತ್ತರಿಸಿದ ಬಿ.ವೈ.ವಿಜಯೇಂದ್ರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಬಾರದಿತ್ತು. ಲಾಠಿ ಚಾರ್ಜ್ ಮಾಡದೆಯೆ ಪರಿಸ್ಥಿತಿ ನಿಯಂತ್ರಿಸಬಹುದಿತ್ತು ಎಂದರು.
ಈ ಹತ್ಯೆ ಕರಾವಳಿ ಮಾತ್ರವಲ್ಲ ಕರ್ನಾಟಕಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜಸ್ಥಾನದಲ್ಲಿ ಆದಂತಹ ಕೃತ್ಯದಂತೆ ಇದೂ ಇದೆ. ಈ ಕೃತ್ಯದಿಂದ ನಾವು ಕೂಡ ತಲೆಎತ್ತಿ ಓಡಾಡದಂತಾಗಿದೆ. ಪ್ರವೀಣ್ ಪತ್ನಿಗೆ ಉದ್ಯೋಗ ಕೊಡಿಸಲು ಸಿಎಂ ಮನವೊಲಿಸುತ್ತೇವೆ. ಪ್ರವೀಣ್ ಕುಟುಂಬಕ್ಕೆ ವಸತಿ ಕಲ್ಪಿಸಲು ನಾವೆಲ್ಲರೂ ಪ್ರಯತ್ನಿಸುತ್ತೇವೆ. ಕೃತ್ಯದ ಹಿಂದೆ SDPI PFI ಯಾರೇ ಇದ್ರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
Published On - 3:42 pm, Thu, 28 July 22