ಮಂಗಳೂರು ಏರ್ಪೋರ್ಟ್ನಲ್ಲಿ ಆತಂಕ ಸೃಷ್ಟಿಸಿದ ಚಾಟಿಂಗ್: ಆರು ತಾಸು ತಡವಾಗಿ ಹಾರಿತು ವಿಮಾನ
ಮಂಗಳೂರು ಏರ್ಪೋರ್ಟ್ನಲ್ಲಿ ಚಾಟಿಂಗ್ ಅವಾಂತರ ಪ್ರಕರಣ ಹಿನ್ನೆಲೆ ಇಂದು ಕೂಡ ಬಜ್ಪೆ ಪೊಲೀಸರಿಂದ ಯುವಕ ದೀಪಯನ್ ಮಾಜಿ(23), ಯುವತಿ ಸಿಮ್ರಾನ್ ಥಾಮ್(23) ವಿಚಾರಣೆ ಮಾಡಲಿದ್ದಾರೆ.
ಮಂಗಳೂರು: ಮಂಗಳೂರು ಏರ್ಪೋರ್ಟ್ನಲ್ಲಿ ಚಾಟಿಂಗ್ (Chatting) ಅವಾಂತರ ಪ್ರಕರಣ ಹಿನ್ನೆಲೆ ಇಂದು ಕೂಡ ಬಜ್ಪೆ ಪೊಲೀಸರಿಂದ ಯುವಕ ದೀಪಯನ್ ಮಾಜಿ (23), ಯುವತಿ ಸಿಮ್ರಾನ್ ಥಾಮ್(23) ವಿಚಾರಣೆ ನಡೆಯಲಿದೆ. ಇವರ ಅನುಮಾನಾಸ್ಪದ ಚಾಟಿಂಗ್ ಬಗ್ಗೆ ಪ್ರಯಾಣಿಕರೊಬ್ಬರು ಪೊಲೀಸರ ಗಮನ ಸೆಳೆದ ಹಿನ್ನೆಲೆಯಲ್ಲಿ ವಿಮಾನ ಹೊರಡುವುದು ಆರು ತಾಸು ತಡವಾಗಿತ್ತು. ಇಬ್ಬರೂ ಉತ್ತರಪ್ರದೇಶದ ಗಾಜಿಯಾಬಾದ್ ನಿವಾಸಿಗಳಾಗಿದ್ದಾರೆ. 2-3 ದಿನದ ಹಿಂದೆ ಉಡುಪಿ ಮಣಿಪಾಲಕ್ಕೆ ಇಬ್ಬರೂ ಬಂದಿದ್ದರು. ಮಂಗಳೂರು ಏರ್ ಪೋರ್ಟ್ನಲ್ಲಿ ಯುವಕ-ಯುವತಿ ಚಾಟಿಂಗ್ ಮಾಡಿದಕ್ಕೆ ರನ್ ವೇನಲ್ಲಿ ಟೇಕಾಫ್ಗೆ ಸಿದ್ದವಾಗಿದ್ದ ವಿಮಾನ ಸಂಚಾರ ನಿನ್ನೆ ಸ್ಥಗಿತಗೊಳಿಸಲಾಗಿತ್ತು. ಮಂಗಳೂರು ಏರ್ ಪೋರ್ಟ್ನಲ್ಲಿ ಯುವಕ-ಯುವತಿ ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ವಾಟ್ಸಾಪ್ ಚಾಟ್ ಮಾಡಿದ್ದಕ್ಕೆ ಟೇಕಾಫ್ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಂಡಿತ್ತು.
ಯುವತಿ ಮಂಗಳೂರು ಏರ್ ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ಬಂದಿದ್ದಳು. ಯುವಕ ಮಂಗಳೂರು ಏರ್ ಪೋರ್ಟ್ ಮೂಲಕ ಮುಂಬೈಗೆ ತೆರಳಲು ಬಂದಿದ್ದನು. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಬೇರೆ ಬೇರೆ ವಿಮಾನದಲ್ಲಿ ಪ್ರಯಾಣಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಯುವಕ ಕೂತಿದ್ದ ಮುಂಬೈ ವಿಮಾನ ರನ್ ವೇಯಲ್ಲಿ ಟೇಕಾಫ್ಗೆ ಸಿದ್ದವಾಗಿದ್ದವಾಗಿತ್ತು. ಈ ವೇಳೆ ಬೆಂಗಳೂರಿಗೆ ತೆರಳಲು ಏರ್ ಪೋರ್ಟ್ ನಲ್ಲಿ ಕೂತಿದ್ದ ಯುವತಿ ಜೊತೆ ಚಾಟಿಂಗ್ ಮಾಡುತ್ತಿದ್ದನು.
ಚಾಟಿಂಗ್ನಲ್ಲಿ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ಯುವತಿಯ ಚಾಟಿಂಗ್ ಗಮನಿಸಿ ಪ್ರಯಾಣಿಕರೊಬ್ಬರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಭದ್ರತಾ ಸಿಬ್ಬಂದಿ ಮುಂಬೈ ವಿಮಾನ ತಡೆದು ಪ್ರಯಾಣಿಕರನ್ನು ಇಳಿಸಿ ತಪಾಸಣೆ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಸದ್ಯ ಯುವಕ ಮತ್ತು ಯುವತಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಮಾಡಿದ್ದಾಗಿ ಜೋಡಿ ಹೇಳಿಕೆ ನೀಡಿದ್ದಾರೆ.
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಲಿಂಕ್: Flight delayed by six hours
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:22 am, Mon, 15 August 22