ಮಂಗಳೂರು ಏರ್‌ಪೋರ್ಟ್ನಲ್ಲಿದ್ದ ಸಿಐಎಸ್‌ಎಫ್ ಡಿಟೆಕ್ಟಿವ್ ಶ್ವಾನ ಸಾವು, ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ
ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಜೂನ್ 1 ರಿಂದ ಏರ್ಪೋರ್ಟ್ ಭದ್ರತಾ ಸೇವೆಯಿಂದ ಲೀನಾ ಮುಕ್ತಗೊಂಡು ಸಿಐಎಸ್‌ಎಫ್ ಪಡೆಯ ಆರೈಕೆಯಲ್ಲಿತ್ತು. ಆದ್ರೆ ನವೆಂಬರ್ 21ರ ಸಂಜೆ ಕೊನೆಯುಸಿರೆಳೆದಿದೆ.
ಮಂಗಳೂರು: ಮಂಗಳೂರು ಏರ್‌ಪೋರ್ಟ್ ಆವರಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ಶ್ವಾನ ಮೃತಪಟ್ಟಿದೆ. 8 ವರ್ಷದಿಂದ ಸಿಐಎಸ್‌ಎಫ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೀನಾ ಹೆಸರಿನ ಲ್ಯಾಬ್ರಡಾರ್ ನಾಯಿ ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದೆ. ಸಕಲ ಗೌರವದೊಂದಿಗೆ ಮಂಗಳೂರು ಹಳೇ ಏರ್‌ರ್ಪೋರ್ಟ್ ಆವರಣದಲ್ಲೇ ಅಂತ್ಯಕ್ರಿಯೆ ನಡೆಯಲಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಜೂನ್ 1 ರಿಂದ ಏರ್ಪೋರ್ಟ್ ಭದ್ರತಾ ಸೇವೆಯಿಂದ ಲೀನಾ ಮುಕ್ತಗೊಂಡು ಸಿಐಎಸ್‌ಎಫ್ ಪಡೆಯ ಆರೈಕೆಯಲ್ಲಿತ್ತು. ಲಿನಾಗೆ ಆಹಾರ ಮತ್ತು ಔಷಧಿಗಳ ವೆಚ್ಚದಂತಹ ಎಲ್ಲಾ ಅಗತ್ಯ ಸೌಕರ್ಯಗಳನ್ನು ವಿಮಾನ ನಿಲ್ದಾಣದ ನಿರ್ವಾಹಕರು ಒದಗಿಸಿದ್ದಾರೆ ಎಂದು ಪ್ರಕಟಣೆಯೊಂದರಲ್ಲಿ ತಿಳಿದು ಬಂದಿದೆ. ಲಿನಾ ನಿರಂತರವಾಗಿ ಪಶುವೈದ್ಯರ ನಿಗಾದಲ್ಲಿತ್ತು. ನವೆಂಬರ್ 16 ರಿಂದ ಲಿನಾ ಸಾಮಾನ್ಯ ಆಹಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ ಅದಕ್ಕೆ ಗ್ಲೂಕೋಸ್ ನೀಡಲಾಗುತಿತ್ತು. ಆದ್ರೆ ನವೆಂಬರ್ 21ರ ಸಂಜೆ ಕೊನೆಯುಸಿರೆಳೆದಿದೆ. ಸ್ಫೋಟಕ ಪತ್ತೆ ಬಗ್ಗೆ ತರಬೇತಿ ಪಡೆದಿದ್ದ ಲೀನಾ ಮಂಗಳೂರು ಏರ್‌ಪೋರ್ಟ್ ನಲ್ಲಿ 2020 ರ ಜನವರಿ 20ರಂದು ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆ ಮಾಡಿತ್ತು.
ಮಂಗಳೂರಿನ ಸಿಐಎಸ್‌ಎಫ್ ಕಚೇರಿ ಆವರಣದಲ್ಲಿ ಡಿಟೆಕ್ಟಿವ್ ಲೀನಾಗೆ ಅಧಿಕಾರಿಗಳಿಂದ ಅಂತಿಮ ನಮನ ಸಲ್ಲಿಸಲಾಗಿದ್ದು ಸಿಐಎಸ್‌ಎಫ್ ಸಕಲ ಗೌರವದೊಂದಿಗೆ ಮಂಗಳೂರು ಹಳೆ ಏರ್ಪೋರ್ಟ್ ಆವರಣದಲ್ಲಿ ಲೀನಾ ಅಂತ್ಯಕ್ರಿಯೆ ನೆರವೇರಿದೆ.
ಇದನ್ನೂ ಓದಿ: India vs New Zealand: ಕಿವೀಸ್ ಕಿವಿ ಹಿಂಡಿದ ರೋಹಿತ್ ಪಡೆ: ಭಾರತೀಯರ ಮಾರಕ ದಾಳಿಗೆ ದಂಗಾದ ನ್ಯೂಜಿಲೆಂಡ್
Published On - 7:34 am, Mon, 22 November 21