ಅವಘಡ ಸಂಭವಿಸದಂತೆ ಎಚ್ಚರವಹಿಸಿ ರಸ್ತೆಯಲ್ಲಿ ಬಿದ್ದಿದ್ದ ಆಯಿಲ್​ಗೆ ಮರಳು ಹಾಕಿದ ಕಾನ್ಸ್​ಟೇಬಲ್ಸ್​​; ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ‌​

| Updated By: preethi shettigar

Updated on: Sep 26, 2021 | 10:11 AM

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಕುಮಾರ್ ಅವರು ಪೊಲೀಸ್ ಕಾನ್ಸ್​ಟೇಬಲ್​ಗಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ಶಂಕರ್ ಮತ್ತು ಸತೀಶ್ ರನ್ನು ತಮ್ಮ ಕಚೇರಿಗೆ ಕರೆಸಿ ಡಿಸಿಪಿ, ಎಸಿಪಿ ಸೇರಿದಂತೆ ತಮ್ಮ ಸಿಬ್ಬಂದಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದ್ದಾರೆ.

ಅವಘಡ ಸಂಭವಿಸದಂತೆ ಎಚ್ಚರವಹಿಸಿ ರಸ್ತೆಯಲ್ಲಿ ಬಿದ್ದಿದ್ದ ಆಯಿಲ್​ಗೆ ಮರಳು ಹಾಕಿದ ಕಾನ್ಸ್​ಟೇಬಲ್ಸ್​​; ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ‌​
ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ‌
Follow us on

ಮಂಗಳೂರು: ಪೊಲೀಸರು ಕೇವಲ ತಮಗೆ ವಹಿಸಿದ ಕರ್ತವ್ಯವನ್ನು ಸರಿಯಾಗಿ ಮಾಡುತ್ತಾರೆ ಎಂಬ  ವಿಚಾರಗಳನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಆದರೆ ಮಂಗಳೂರಿನ ಈ ಪೊಲೀಸರಿಬ್ಬರು ತಮ್ಮ ಕರ್ತವ್ಯದ ನಡುವೆಯೂ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳು ಸಾಮಾಜಿಕ ಕಳಕಳಿ ಮೆರೆದು ಈಗ ಪೊಲೀಸ್ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಿನ್ನೆ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ ಪೊಲೀಸ್ ಕಾನ್ಸ್​ಟೇಬಲ್​ಗಳಾದ ಶಂಕರ್ ಮತ್ತು ಸತೀಶ್ ಹೋಗುತ್ತಿದ್ದರು. ಈ ವೇಳೆ ಸರ್ಕಲ್​ನಲ್ಲಿ ಇಂಜಿನ್ ಆಯಿಲ್ ಚೆಲ್ಲಿ ಎರಡು ಮೂರು ಬೈಕ್​ಗಳು ಸ್ಕಿಡ್ ಆಗಿ ಬಿದ್ದುದನ್ನು ಗಮನಿಸಿದ್ದಾರೆ‌. ಮುಂದಿನ ಅಪಾಯವನ್ನು ಅರಿತ ಪೊಲೀಸ್ ಕಾನ್ಸ್​ಟೇಬಲ್​ಗಳಿಬ್ಬರು ಅಲ್ಲಿಗೆ ಮರಳನ್ನು ತರಿಸಿ ಹಾಕಿ ಅದನ್ನು ಗುಡಿಸಿ ಆಯಿಲ್ ಹೋಗುವಂತೆ ಮಾಡಿದ್ದಾರೆ‌‌.

ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ‌!
ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಕುಮಾರ್ ಅವರು ಪೊಲೀಸ್ ಕಾನ್ಸ್​ಟೇಬಲ್​ಗಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ಶಂಕರ್ ಮತ್ತು ಸತೀಶ್ ರನ್ನು ತಮ್ಮ ಕಚೇರಿಗೆ ಕರೆಸಿ ಡಿಸಿಪಿ, ಎಸಿಪಿ ಸೇರಿದಂತೆ ತಮ್ಮ ಸಿಬ್ಬಂದಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದ್ದಾರೆ.

ರಸ್ತೆ ಮೇಲೆ ಬಿದ್ದ ಆಯಿಲ್​​ಗೆ ಮರಳು ಹಾಕಿದ ಕಾನ್ಸ್​ಟೇಬಲ್ಸ್

ನಿತ್ಯ ಇಂತಹ ಪ್ರಕರಣದಿಂದ ಅಪಘಾತ‌
ಮಂಗಳೂರಿನ ಹಲವು ಸರ್ಕಲ್​ಗಳಲ್ಲಿ ಆಯಿಲ್ ಲಾರಿಗಳು ಆಯಿಲ್ ಸುರಿಸಿಕೊಂಡು ಹೋಗುವುದರಿಂದ ಬೈಕ್ ಸವಾರರಿಗೆ ನಿತ್ಯ ತಲೆ ನೋವಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಬೈಗಳು ಸ್ಕಿಡ್ ಆಗಿ ಬಿದ್ದು, ಸವಾರರಿಗೆ ಗಾಯಗಳಾಗುವ ವರದಿಗಳು ನಿರಂತರ ಆಗುತ್ತವೆ. ಇಂತಹ ಅದೆಷ್ಟೋ ಘಟನೆಗಳನ್ನು ಪೊಲೀಸರು ನೇರಾವಗಿ ನೋಡುತ್ತಿರುತ್ತಾರೆ‌. ಇಂತಹ ಸಂದರ್ಭಗಳಲ್ಲಿ ಇಬ್ಬರು ಪೊಲೀಸರು ಮಾಡಿದಂತಹ ಈ ಸಾಮಾಜಿಕ ಕಳಕಳಿ ಕೆಲಸವನ್ನು ಸಾರ್ವಜನಿಕರು ಮಾಡಿದರೆ, ಅದೆಷ್ಟೋ ಅಪಘಾತಗಳನ್ನು ತಪ್ಪಿಸಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್‌ ಹೇಳಿದ್ದಾರೆ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ 

ಇದನ್ನೂ ಓದಿ:
ಬೆಂಗಳೂರು ನಗರದಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ; ಪ್ರಚಾರದ ಹುಚ್ಚಿನಿಂದ ಹಲ್ಲೆ ಮಾಡಿರುವುದಾಗಿ ಹೇಳಿಕೆ

ಲುಂಗಿ ಡ್ಯಾನ್ಸ್ ಹಾಡಿಗೆ ಸ್ಟೆಪ್ ಹಾಕಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್; ವಿಡಿಯೋ ವೈರಲ್

Published On - 12:57 pm, Tue, 21 September 21