ಧರ್ಮಸ್ಥಳ ಬುರುಡೆ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬಿಗ್ ರಿಲೀಫ್
ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಮಾಸ್ಕ್ಮ್ಯಾನ್ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಎಸ್ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಚಾರ್ಜ್ ಸೀಟ್ ಸಲ್ಲಿಕೆ ಮಾಡಿತ್ತು. ಆ ನಡುವೆಯೂ ಚಿನ್ನಯ್ಯ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಮಂಗಳೂರು, ನವೆಂಬರ್ 24: ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಮಾಸ್ಕ್ಮ್ಯಾನ್ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 1 ಲಕ್ಷದ ಬಾಂಡ್ ಒದಗಿಸುವುದು ಸೇರಿ 12 ಷರತ್ತುಗಳನ್ನ ನ್ಯಾಯಾಲಯ ವಿಧಿಸಿದೆ. ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಎಸ್ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು ಎಂಬುದಿಲ್ಲಿ ಗಮನಾರ್ಹ.
ಚಿನ್ನಯ್ಯನಿಗೆ ಕೋರ್ಟ್ ಹಾಕಿರುವ ಷರತ್ತುಗಳು
- ಮುಂದೆ ಇದೇ ರೀತಿಯ ಅಪರಾಧಕ್ಕೆ ಕೈ ಹಾಕಬಾರದು
- ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಓಡಿಹೋಗುವುದು, ಸ್ಥಳ ಬಿಟ್ಟು ಮರೆಮಾಡಿಕೊಳ್ಳುವುದು ಬೇಡ
- Prosecution witnesses ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವ ಕೆಲಸ ಮಾಡಬಾರದು
- ಕೇಸಿಗೆ ಸಂಬಂಧಿಸಿದ ದಾಖಲೆ ಅಥವಾ ಪುರಾವೆಗಳನ್ನು ಅಳಿಸುವುದು / ನಾಶಗೊಳಿಸುವುದು ಬೇಡ
- IO (Investigating Officer) ಕರೆ ಮಾಡಿದಾಗ ಹಾಜರಾಗಬೇಕು, ತನಿಖೆಗೆ ತೊಂದರೆ ಕೊಡಬಾರದು
- ಕೋರ್ಟ್ ದಿನಾಂಕಗಳಿಗೆ ತಪ್ಪದೇ ಹಾಜರಾಗಬೇಕು. ಕೋರ್ಟ್ ಮನ್ನಿಸಿದಾಗ ಮಾತ್ರ ಹಾಜರಾಗದೇ ಇರಬಹುದು
- ಚಿನ್ನಯ್ಯ ಹಾಗೂ ಜಾಮೀನಾದರೂ ಕೂಡ ಆಧಾರ್, ಮತದಾರರ ಗುರುತಿನ ಚೀಟಿಯ ಪುರಾವೆ ಕೊಡಬೇಕು
- ವಿಳಾಸದಲ್ಲಿ ಬದಲಾವಣೆ ಬಂದರೆ ಕೋರ್ಟ್‌ಗೆ ತಿಳಿಸಬೇಕು
- ಮೊಬೈಲ್ ನಂಬರ್ / ವಾಟ್ಸ್ಯಾಪ್ / ಇಮೇಲ್ ಮಾಹಿತಿ ಕೊಡಬೇಕು
- Court jurisdictionnನಿಂದ ಹೊರಗೆ ಹೋಗಬಾರದು
- ಕೇಸ್ ಬಗ್ಗೆ ಮಾಧ್ಯಮಕ್ಕೆ ಮಾತನಾಡಬಾರದು
- ಬೇಲ್ ಮೇಲೆ ಬಿಡುಗಡೆ ಆದ ನಂತರ ಬದಲಿ ದಿನಗಳಲ್ಲಿ (ದಿನ ಬಿಟ್ಟು ದಿನ) ಪೊಲೀಸ್ ಠಾಣೆಗೆ ಹಾಜರಾಗಬೇಕು
ಇದನ್ನೂ ಓದಿ: ಧರ್ಮಸ್ಥಳ ಕೇಸ್: ಚಾರ್ಜ್ಶೀಟ್ ಸಲ್ಲಿಕೆ, ಕೋರ್ಟ್‌ಗೆ ಎಸ್ಐಟಿ ಮಹತ್ವದ ಮನವಿ
ಈಗಾಗಲೇ ಚಾರ್ಜ್ಶೀಟ್ ಸಲ್ಲಿಸಿರೋ SIT
ಶವ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದ ತಂಡ 7 ಫೈಲ್ಗಳುಳ್ಳ 3,932 ಪುಟಗಳ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿಯನ್ನ ಕೋರ್ಟ್‌ಗೆ ಸಲ್ಲಿಸಿದೆ. ಆರಂಭದಲ್ಲಿ ಚಿನ್ನಯ್ಯನ ಹೇಳಿಕೆ, ಮಹಜರು, 17 ಹೆಚ್ಚು ಜಾಗದಲ್ಲಿ ನಡೆದಿದ್ದ ಸಮಾಧಿ ಶೋಧ, ಆತನ ಸಂಪರ್ಕದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಸೇರಿ ಎಲ್ಲರ ಹೇಳಿಕೆಗಳನ್ನ ವರದಿಯಲ್ಲಿ ಉಲ್ಲೇಖಿಸಿದೆ. ಕೆಲ ಆರೋಪಿಗಳ ವಿಚಾರಣೆ ಇನ್ನು ಬಾಕಿ ಇದೆ. ಜೊತೆಗೆ ಲ್ಯಾಬ್ ರಿಪೋರ್ಟ್ ಕೂಡ ಇನ್ನು ಬಂದಿಲ್ಲ. ಆದ್ದರಿಂದ ತನಿಖೆ ಮುಂದುವರೆಸಲು ಇನ್ನು ಕಾಲಾವಕಾಶ ಬೇಕು ಅಂತಾ ಕೇಳಿದ್ದು, ಸಂಪೂರ್ಣ ತನಿಖೆ ಬಳಿಕ ಪೂರ್ಣ ಪ್ರಮಾಣದ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:47 pm, Mon, 24 November 25
