Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಹತ್ತಿರ ಬರ್ತಿದ್ದಂತೆ ಶಾಕ್, ವಿವಾದ ಸೃಷ್ಟಿಸಿದ ಶಿಕ್ಷಣ ಇಲಾಖೆ ಸುತ್ತೋಲೆ

ಕಳೆದ ವರ್ಷ ಮಂಗಳೂರು ವಿಶ್ವ ವಿದ್ಯಾನಿಲಯದದಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ದೊಡ್ಡ ವಿವಾದವೇ ಆಗಿತ್ತು. ಇದೀಗ ಮತ್ತೆ ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದ್ದು, ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಮಂಗಳೂರಿನಲ್ಲಿ ಭಾರೀ ವಿವಾದ ಸೃಷ್ಟಿಸಿದೆ.

ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಹತ್ತಿರ ಬರ್ತಿದ್ದಂತೆ ಶಾಕ್, ವಿವಾದ ಸೃಷ್ಟಿಸಿದ ಶಿಕ್ಷಣ ಇಲಾಖೆ ಸುತ್ತೋಲೆ
ಮಂಗಳೂರು ಶಿಕ್ಷಣ ಇಲಾಖೆ ಸುತ್ತೋಲೆ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on:Jul 18, 2024 | 6:04 PM

ಮಂಗಳೂರು, (ಜುಲೈ 18): ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಹಬ್ಬ ಸಮೀಪಿಸುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಾದ ಸೃಷ್ಟಿಯಾಗಿದೆ.  ಶಾಲೆಗಳ ಮೈದಾನಗಳನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ  ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕಕರು ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ. ಇದು ಮಂಗಳೂರಿನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದು, ಈ ಬಾರಿ ಮಂಗಳೂರಿನ ಶಾಲಾ ಮೈದಾನಗಳಲ್ಲಿ ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಅಚರಣೆಗೆ ಬ್ರೇಕ್ ಬೀಳುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಶಾಲಾ ಮೈದಾನ, ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ-ಉದ್ದೇಶಗಳಿಗೆ ಬಳಸಬಾರದು ಎಂದು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕಕರು ಸುತ್ತೋಲೆ ಹೊರಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸಬಾರದು ಎಂದು ಖಡಕ್​ ಸೂಚನೆ ಸಹ ನೀಡಿದೆ. ಗಣೇಶೋತ್ಸವ ಹಾಗೂ ಶ್ರೀಕೃಷ್ಣ ಕೃಷ್ಣ ಜನ್ಮಾಷ್ಟಮಿ ಸಮೀಪಿಸುತ್ತಿದ್ದಂತೆಯೇ ಈ ಸುತ್ತೋಲೆ ಹೊರಡಿಸಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಖಾರಣವಾಗಿದೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್​ ಇಲಾಖೆಯಿಂದ “ಸೇಫ್​​ ಕನೆಕ್ಟ್​​” ಆರಂಭ, ಇಲ್ಲಿದೆ ವಿಶೇಷತೆ

ಸುತ್ತೋಲೆಯಲ್ಲೇನಿದೆ?

ಶೈಕ್ಷಣಿಕೇತರ ಚಟುವಟಿಕೆಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಮರೇ ಹೊಣೆಗಾರರಾಗುತ್ತಾರೆಂದು ದಕ್ಷಿಣ ಕನ್ನಡ ಡಿಡಿಪಿಐ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಇಲಾಖೆ ಆದೇಶ ಬೆನ್ನಲ್ಲೇ ಗಣೇಶೋತ್ಸವ, ಅಷ್ಟಮಿ ಆಚರಣೆಗೆ ಅನುನತಿ ನೀಡಲು ಶಾಲಾಡಳಿತ ಮಂಡಳಿ ನಿರಾಕರಿಸಿದೆ. ಹೀಗಾಗಿ ಗ್ರಾಮದ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ನಡೆಸಿಕೊಂಡು ಬರುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ.

ಆದ್ರೆ, ಈ ಸುತ್ತೋಲೆಗೆ ಬಿಜೆಪಿ‌ ಮತ್ತು ಹಿಂದೂ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ದ‌‌ಕ್ಷಿಣ ಕನ್ನಡ ಜಿಲ್ಲೆಯ ಹಲವು ಸರ್ಕಾರಿ ಶಾಲಾ ಮೈದಾನಗಳಲ್ಲಿ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರಿ, ಅನುದಾನಿತ ಶಾಲೆಗಳ ಮೈದಾನ ಬಳಸಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಆದರೆ ಈ ಬಾರಿ ಶಿಕ್ಷಣ ಇಲಾಖೆ ಹೊಸ ಆದೇಶದಿಂದ ಗಣೇಶೋತ್ಸವ ಅಚರಣೆಗೆ ಬ್ರೇಕ್ ಹಾಕಲು ಮುಂದಾಗಿದೆ. ಸರ್ಕಾರ ಈ ಕೂಡಲೇ ಆದೇಶ ಹಿಂಪಡೆಯುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಒತ್ತಾಯಿಸಿದ್ದಾರೆ.

ಸದ್ಯ ಈ ಸುತ್ತೋಲೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿವೆ.  ಇದು ರಾಜಕೀಯ ಜಟಾಪಟಿಗೆ ಕಾರಣವಾಗು ಸಾಧ್ಯತೆಗಳಿದ್ದು, ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುಬೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:51 pm, Thu, 18 July 24

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು