Dredgers Wanted: ಮಂಗಳೂರಿನ ಹಳೆಬಂದರಿನಲ್ಲಿ ಬರೀ ಹೂಳು! ಹೂಳು ಎತ್ತುವವರು ತಕ್ಷಣ ಬೇಕಾಗಿದ್ದಾರೆ!

| Updated By: ಸಾಧು ಶ್ರೀನಾಥ್​

Updated on: Jan 20, 2024 | 1:46 PM

ಸಾಗರಮಾಲ ಕೋಸ್ಟಲ್ ಬರ್ತ್ ಯೋಜನೆಯಡಿ ಕ್ಯಾಪಿಟಲ್ ಡ್ರೆಜ್ಜಿಂಗ್ ಮಾಡಲು ಕರೆದಿರುವ ಟೆಂಡರ್‌ ಸಹ ಆಗದಿರುವ ಕಾರಣ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಹೂಳೆತ್ತಲು ಎಂಟು ಬಾರಿ ಟೆಂಡರ್ ಕರೆದರು ದೇಶದಲ್ಲಿ ಹೂಳೆತ್ತುವ ಟೆಂಡರ್ ಷರತ್ತು ಪಾಲಿಸುವ ಕಂಪೆನಿಗಳ ಕೊರತೆಯಿಂದ ಅದು ರದ್ದಾಗುತ್ತಿದೆ!

Dredgers Wanted: ಮಂಗಳೂರಿನ ಹಳೆಬಂದರಿನಲ್ಲಿ ಬರೀ ಹೂಳು! ಹೂಳು ಎತ್ತುವವರು ತಕ್ಷಣ ಬೇಕಾಗಿದ್ದಾರೆ!
ಮಂಗಳೂರಿನ ಹಳೆಬಂದರಿನಲ್ಲಿ ಬರೀ ಹೂಳು! ಹೂಳೆತ್ತುವವರು ತಕ್ಷಣ ಬೇಕಾಗಿದ್ದಾರೆ!
Follow us on

ಮಂಗಳೂರಿನ ಹಳೆ ಬಂದರು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಆದಾಯ ತಂದು ಕೊಡುವ ಪ್ರಮುಖ ಪೋರ್ಟ್. ಆದ್ರೆ ಇಲ್ಲಿ ಹಲವು ವರ್ಷಗಳಿಂದ ಹೂಳನ್ನು ಎತ್ತದಿರುವ ಕಾರಣ ದೋಣಿ, ಹಡಗುಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದೀಗ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಪ್ರಾರಂಭಕ್ಕೂ ಇದು ಹಿನ್ನಡೆಯಾಗುತ್ತಿದೆ.

ಹೌದು..ದೃಶ್ಯದಲ್ಲಿ ಕಾಣ್ತಿರೋದು ಮಂಗಳೂರಿನ ಹಳೆ ಬಂದರು. ಈ ಹಳೆ ಬಂದರಿನ ಮೂಲಕ ಪ್ರಮುಖವಾಗಿ ಲಕ್ಷದ್ವೀಪಕ್ಕೆ ಪ್ರತಿನಿತ್ಯ ಕೋಟ್ಯಾಂತರ ಮೌಲ್ಯದ ಸರಕುಗಳ ರಫ್ತಾಗುತ್ತಿದೆ. ಆದ್ರೆ ಇಲ್ಲಿ ಸಮುದ್ರದಿಂದ ಫಲ್ಗುಣಿ ನದಿ ಮೂಲಕ ಈ ಬಂದರಿಗೆ ಸಂಪರ್ಕ ಕಲ್ಪಿಸುವ ದಾರಿಯಲ್ಲಿ ಹೂಳು ತುಂಬಿಕೊಂಡಿದೆ. ಹಲವು ಸಮಯದಿಂದ ಡ್ರೆಜ್ಜಿಂಗ್ ಮಾಡಿ ತುಂಬಿರುವ ಹೂಳು ತೆಗೆಯದಿರುವ ಕಾರಣ ಬಂದರಿನಲ್ಲಿ ದೋಣಿ, ಹಡಗುಗಳ ಸುಗಮ ಸಂಚಾರಕ್ಕೆ ಸಂಚಕಾರವಾಗುತ್ತಿದೆ.

ಸಾಗರಮಾಲ ಕೋಸ್ಟಲ್ ಬರ್ತ್ ಯೋಜನೆಯಡಿ ಕ್ಯಾಪಿಟಲ್ ಡ್ರೆಜ್ಜಿಂಗ್ ಮಾಡಲು ಕರೆದಿರುವ ಟೆಂಡರ್‌ ಸಹ ಆಗದಿರುವ ಕಾರಣ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಹೂಳೆತ್ತಲು ಎಂಟು ಬಾರಿ ಟೆಂಡರ್ ಕರೆದರು ದೇಶದಲ್ಲಿ ಹೂಳೆತ್ತುವ ಟೆಂಡರ್ ಷರತ್ತು ಪಾಲಿಸುವ ಕಂಪೆನಿಗಳ ಕೊರತೆಯಿಂದ ಅದು ರದ್ದಾಗುತ್ತಿದೆ ಎನ್ನುತ್ತಾರೆ ಇಮ್ರಾನ್, ಉಪಾಧ್ಯಕ್ಷ-ಹಳೆ ಬಂದರು ಅಸೋಸಿಯೇಶನ್.

ಮಂಗಳೂರಿನ ಹಳೆಬಂದರಿನಲ್ಲಿ ಬರೀ ಹೂಳು! ಬೋಟ್‌ ಸಂಚಾರಕ್ಕೆ ಇದೇ ಸಂಚಕಾರ!

ಸದ್ಯ ಸಮುದ್ರದಿಂದ ಫಲ್ಗುಣಿ ನದಿ ಮೂಲಕ ಈ ಹಳೆ ಬಂದರಿಗೆ 300ರಿಂದ 500 ಟನ್ ಸಾಮರ್ಥ್ಯದ ಸಣ್ಣ ಹಡಗು ಅಂದ್ರೆ ಮಂಜಿ ಮಾತ್ರ ಬರ್ತಿದೆ. ಆದ್ರೆ ಏಳು ಮೀಟರ್ ಆಳಕ್ಕೆ ಹೂಳೆತ್ತಿದ್ರೆ ಕನಿಷ್ಟ ಐದು ಸಾವಿರ ಟನ್ ಸಾಮರ್ಥ್ಯದ ಹಡಗು ಬರಲು ಸಾಧ್ಯವಾಗಲಿದ್ದು ಹತ್ತು ಪಟ್ಟು ಸಾಮರ್ಥ್ಯ ಹೆಚ್ಚಾಗಲಿದೆ.

ಈ ಮೂಲಕ ದೇಶದ ಎಲ್ಲ ಪ್ರಮುಖ ಬಂದರುಗಳಿಂದಲೂ ಹಡಗು ಬರಲಿದ್ದು ಬಂದರಿನ ವಾಣಿಜ್ಯ, ಆರ್ಥಿಕ ಚಟುವಟಿಕೆ ಹೆಚ್ಚಲಿದೆ. ಇದೀಗ ಲಕ್ಷದ್ವೀಪಕ್ಕೆ ತೆರಳುವ ಮಂಜಿಗಳು ಲೋಡ್ ಆಗಿ ಹೊರಗಡೆ ಹೋಗಬೇಕೆನ್ನುವಷ್ಟರಲ್ಲಿ ಹೂಳಿನಿಂದ ಅವಘಡ ಸಂಭವಿಸಿದ್ರೆ ಮತ್ತೆ ವಾಪಾಸು ಬಂದರಿಗೆ ಬಂದು ಸರಕುಗಳನ್ನು ಅನ್‌ಲೋಡ್ ಮಾಡಿ ಮಂಜಿಯನ್ನು ರಿಪೇರಿ ಮಾಡಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಪ್ರಾರಂಭಿಸುವ ದೃಷ್ಟಿಯಿಂದಲು ಶೀಘ್ರ ಹೂಳೆತ್ತುವ ಒತ್ತಾಯ ಕೇಳಿಬಂದಿದೆ.

ಮುಂದೆ ಯಾವುದೇ ದೊಡ್ಡ ಹಡಗು ಬರಬೇಕಾದರೂ ಹೂಳೆತ್ತುವುದು ಅನಿವಾರ್ಯವಾಗಲಿದೆ. ಇದೇ ರೀತಿ ಹೂಳು ಹೆಚ್ಚಾದ್ರೆ ಮೀನುಗಾರಿಕಾ ಬೋಟ್ ಸಂಚಾರಕ್ಕೂ ತೊಂದರೆಯಾಗಲಿದೆ. ಹೀಗಾಗಿ ಶೀಘ್ರ ಹೂಳೆತ್ತುವ ಕೆಲಸಕ್ಕೆ ಬಂದರು ಇಲಾಖೆ ಕ್ರಮವಹಿಸಬೇಕಾಗಿದೆ.