ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್ಐಟಿ ತಂಡದ ದಿನದ ಖರ್ಚು ಎಷ್ಟು ಗೊತ್ತಾ?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕನೊಬ್ಬ ದೂರು ನೀಡಿರುವುದು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿದೆ. ಅನಾಮಿಕನ ದೂರಿನ ಬೆನ್ನಲ್ಲೇ ತನಿಖೆಗಾಗಿ ಎಸ್​ಐಟಿ ಕೂಡ ರಚನೆಯಾಗಿತ್ತು. ಕಳೆದ 13 ದಿನಗಳಿಂದ ಎಸ್ಐಟಿ ತಂಡ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ನೂರಾರು ಅಧಿಕಾರಿಗಳು ನಿತ್ಯ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ, ಈ ತನಿಖಾ ಪ್ರಕ್ರಿಯೆಗೆ ತಗಲುವ ಖರ್ಚು-ವೆಚ್ಚ ಎಷ್ಟು? ಇಲ್ಲಿದೆ ಮಾಹಿತಿ.

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್ಐಟಿ ತಂಡದ ದಿನದ ಖರ್ಚು ಎಷ್ಟು ಗೊತ್ತಾ?
Dharmasthala Case
Edited By:

Updated on: Aug 13, 2025 | 8:11 AM

ಮಂಗಳೂರು, ಆಗಸ್ಟ್​ 13: ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣ (Dharmasthala Burials Case) – ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ದೂರು ನೀಡಿರುವ ಪ್ರಕರಣ ತನಿಖೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ದೂರುದಾರ ತೋರಿಸಿದ ಜಾಗವನ್ನೆಲ್ಲಾ ಎಸ್​ಐಟಿ (SIT) ತಂಡ ಅಗೆಯೋ ಕೆಲಸ ಮಾಡುತ್ತಿದೆ. ಕಳೆದ 13 ದಿನಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿರುವ ಎಸ್ಐಟಿ ತಂಡದ ದಿನದ ಖರ್ಚಿನ ಬಗ್ಗೆ ಕೇಳಿದರೆ ನಿಜಕ್ಕೂ ಶಾಕ್​ ಆಗುತ್ತೀರಾ. ಎಸ್​ಐಟಿ ತನಿಖೆಗೆ ನಿತ್ಯ ಅಂದಾಜು 4 ರಿಂದ 5 ಲಕ್ಷ ರೂ. ಖರ್ಚಾಗುತ್ತಿದೆ.

ಎಸ್​ಐಟಿ ತನಿಖೆಗೆ ಲಕ್ಷಾಂತರ ರೂ ಖರ್ಚು

ಕಳೆದ 13 ದಿನಗಳಿಂದಲೂ ಅಸ್ಥಿಪಂಜರಕ್ಕಾಗಿ ಎಸ್​​ಐಟಿ ಶೋಧ ನಡೆಸಿದೆ. ನೇತ್ರಾವತಿ ನದಿ ತಟ, ಬಂಗ್ಲಗುಡ್ಡ, ಕಲ್ಲೇರಿ, ರತ್ನಗಿರಿ ಬೆಟ್ಟದಲ್ಲೂ ಶವ ಶೋಧ ಮಾಡಲಾಗಿದೆ. 6ನೇ ಪಾಯಿಂಟ್​ ಬಿಟ್ಟು ಬೇರೆ ಯಾವ ಸ್ಪಾಟ್​ನಲ್ಲೂ ಅಸ್ಥಿಪಂಜರ ಪತ್ತೆ ಆಗಿಲ್ಲ. ಆದರೆ ಈ ಮಧ್ಯೆ ತನಿಖೆಗೆ ಮಾತ್ರ ನಿತ್ಯ ಲಕ್ಷಾಂತರ ರೂ ಖರ್ಚಾಗುತ್ತಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ

ಇದನ್ನೂ ಓದಿ
ಇವು ಧರ್ಮಸ್ಥಳದಲ್ಲಿ ಸಿಕ್ಕ ಅಸ್ತಿಪಂಜರಗಳೇ?: ವೈರಲ್ ಫೋಟೋದ ಸತ್ಯ ಇಲ್ಲಿದೆ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಕೇಸ್: ಸಹಾಯವಾಣಿ ಆರಂಭ, ಮಾಹಿತಿ ನೀಡಲು ಈ ನಂಬರ್‌ಗೆ ಕರೆ ಮಾಡಿ
ಧರ್ಮಸ್ಥಳ ಕೇಸ್‌ ತನಿಖೆ ನಡೆಯುತ್ತಿರುವಾಗಲೇ SIT ಮುಖ್ಯಸ್ಥ ಕೇಂದ್ರ ಸೇವೆಗೆ

ಅಧಿಕಾರಿಗಳ ಊಟ, ತಿಂಡಿ ಮತ್ತು ವಿಶ್ರಾಂತಿಗಾಗಿ ಲಾಡ್ಜ್ ವೆಚ್ಚ ದಿನಕ್ಕೆ 10 ಸಾವಿರ ರೂ., ಗುಂಡಿ ಅಗೆಯುವವರಿಗೆ ಒಬ್ಬೊಬ್ಬರಿಗೂ ದಿನಗೂಲಿ 2 ಸಾವಿರ ರೂ. ಒಟ್ಟು 15 ಜನರಿದ್ದು ದಿನಕ್ಕೆ 30 ಸಾವಿರ ರೂ. ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆ ಖರ್ಚು 20 ಸಾವಿರ ರೂ. ಜಿಪಿಆರ್​ಗೆ 2 ಲಕ್ಷ ರೂ ಬಾಡಿಗೆ ನೀಡಲಾಗುತ್ತಿದೆ.

ಎಸ್​​ಐಟಿ ತಂಡಕ್ಕೆ 5 ಹೊಸ ಕಂಪ್ಯೂಟರ್, 20 ಕುರ್ಚಿ, 3 ಪ್ರಿಂಟರ್​ ಸೇರಿ ಇತ್ಯಾದಿಗಳಿಗೆ 40 ಸಾವಿರ ರೂ. ಫೊರೆನ್ಸಿಕ್ ವೈದ್ಯರ ತಂಡಕ್ಕಾಗಿ ವಿಶೇಷ ಉಪಕರಣಗಳ ಬಳಕೆ ವೆಚ್ಚ ದಿನಕ್ಕೆ 3 ರಿಂದ 4 ಸಾವಿರ ರೂ. ಎಸ್​ಐಟಿಯೊಂದಿಗೆ ಇರುವ ಒಟ್ಟಾರೆ ತಂಡಕ್ಕೆ 3 ಹೊತ್ತು ಊಟ, ತಿಂಡಿಗೆ 10 ಸಾವಿರ ರೂ. ತಾತ್ಕಾಲಿಕ ಟೆಂಟ್​​ಗಳ ವೆಚ್ಚ ದಿನಕ್ಕೆ 3 ರಿಂದ 4 ಸಾವಿರ ರೂ., ಒಟ್ಟಾರೆ ಅಂದಾಜು ದಿನದ ಖರ್ಚು ಒಂದು ಲಕ್ಷದ ಐವತ್ತು ಸಾವಿರ ರೂ. ಎನ್ನಲಾಗುತ್ತಿದೆ.

ಇದನ್ನೂ ಓದಿ: Fact Check: ಇವು ಧರ್ಮಸ್ಥಳದಲ್ಲಿ ಸಿಕ್ಕ ಅಸ್ತಿಪಂಜರಗಳೇ?: ವೈರಲ್ ಫೋಟೋದ ಸತ್ಯ ಇಲ್ಲಿದೆ ನೋಡಿ

ಎಸ್ಐಟಿ ತಂಡದ ಜೊತೆ ಧರ್ಮಸ್ಥಳ ಕೇಸ್ ತನಿಖೆಗೆ 260 ಅಧಿಕಾರಿಗಳು, ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ. ಎಸ್ಐಟಿ ತಂಡದಲ್ಲಿ 26 ಜನ, ಎಫ್​ಎಸ್​ಎಲ್​ನಲ್ಲಿ 5 ಜನ, ಎಸ್​​ಓಸಿಓನಲ್ಲಿ 5 ಜನ, ಪೌರ ಕಾರ್ಮಿಕರು- 15, ಪೊಲೀಸ್ ಸಿಬ್ಬಂದಿ 200, ಎಸಿ ಮತ್ತು ತಹಶೀಲ್ದಾರ್ ತಲಾ ಒಬ್ಬರು, ಸ್ಥಳೀಯಾಡಳಿತ ಅಧಿಕಾರಿಗಳು ಐವರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:58 am, Wed, 13 August 25

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us