ಧರ್ಮಸ್ಥಳ ಪ್ರಕರಣ: ಬಂಧನದ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ ಎಂಡಿಗೆ ಬಿಗ್ ರಿಲೀಫ್

ಧರ್ಮಸ್ಥಳ ವಿರುದ್ಧ ಎಐ ವಿಡಿಯೋ ಸೃಷ್ಟಿಸಿ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಎಂಡಿ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಆಗಮಿಸಿದ್ದ ಪೊಲೀಸರು, ಸಮೀರ್ ಮನೆ ಹುಡುಕಾಡಿದ್ದರು. ಆದ್ರೆ, ಪೊಲೀಸರು ಬರುತ್ತಿದ್ದಂತೆ ಎಸ್ಕೇಪ್ ಆಗಿದ್ದ ಸಮೀರ್ ಗೆ ಇದೀಗ ಕೋರ್ಟ್​ ಬಿಗ್ ರಿಲೀಫ್ ನೀಡಿದೆ.

ಧರ್ಮಸ್ಥಳ ಪ್ರಕರಣ: ಬಂಧನದ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ ಎಂಡಿಗೆ ಬಿಗ್ ರಿಲೀಫ್
Smeer Md
Updated By: ರಮೇಶ್ ಬಿ. ಜವಳಗೇರಾ

Updated on: Aug 21, 2025 | 5:30 PM

ಮಂಗಳೂರು (ಆಗಸ್ಟ್ .21):  ಧರ್ಮಸ್ಥಳ ವಿರುದ್ಧ ವಿಡಿಯೋ ಮೂಲಕ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂಡಿಗೆ ಕೋರ್ಟ್ ಜಾಮೀನು ನೀಡಿದೆ. ಧರ್ಮಸ್ಥಳದ ಕುರಿತು ಮಾಡಿದ ಒಂದೇ ಒಂದು ವಿಡಿಯೋದಿಂದ ಯುಟ್ಯೂಬರ್ ಸಮೀರ್ ಎಂಡಿ ಸ್ಟಾರ್ ಆಗಿ ಬದಲಾಗಿದ್ದರು. ಅದೇ ವಿಡಿಯೋದಿಂದ ಸಮೀರ್ ಎಂಡಿಗೆ ಬಂಧನದ ಭೀತಿ ಎದುರಿಸುತ್ತಿದ್ದ. ಯಾವಾಗ ಪೊಲೀಸರು ಅರೆಸ್ಟ್​ ಮಾಡಲು ಮುಂದಾದ್ದರೋ ಸಮೀರ್ ಕೂಡಲೇ ಮಂಗಳೂರು ಕೋರ್ಟ್​ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು (ಆಗಸ್ಟ್ 21) ಈ ಅರ್ಜಿ ವಿಚಾರಣೆ ನಡೆಸಿದ ಮಂಗಳೂರು ಕೋರ್ಟ್​, ಸಮೀರ್ ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಸಮೀರ್ ಬಂಧನದಿಂದ ಪಾರಾಗಿದ್ದಾರೆ.

ಸುಮೊಟೊ ಕೇಸ್ ನಲ್ಲಿ ಏನಿದೆ?

ಧರ್ಮಸ್ಥಳದ ಕುರಿತು ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಿದ್ದ ಸಮೀರ್ ಎಂಡಿ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ್ದ. ಧರ್ಮಸ್ಥಳದಲ್ಲಿ ಸಾವಿರಾರು ಜನರನ್ನ ಅತ್ಯಾಚಾರ, ಕೊಲೆ ಮಾಡಲಾಗಿದೆ. ಇದನ್ನ ಕೇಳಿದರೆ ನಿಮ್ಮ ರಕ್ತ ಕುದಿಯುತ್ತಿಲ್ವಾ? ಕರ್ನಾಟಕದ ಮೂಲೆ ಮೂಲೆಯಲ್ಲಿರುವವರು ಬೀದಿಗಿಳಿದು ಪ್ರತಿಭಟನೆ ಮಾಡಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ತನ್ನ ವಿಡಿಯೋದಲ್ಲಿ ಹೇಳಿದ್ದ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​: ಯೂಟ್ಯೂಬರ್‌ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಸಮೀರ್ ಪರಾರಿ

ಇದನ್ನ ಗಂಭೀರವಾಗಿ ಪರಿಗಣಿಸಿದ ಧರ್ಮಸ್ಥಳ ಪೊಲೀಸರು ಜುಲೈ 12ರಂದು ಸಮೀರ್​ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಸಾವಿರ ಜನರನ್ನು ಅತ್ಯಚಾರ ಮಾಡಿ ಕೊಲೆ ಮಾಡಲಾಗಿದೆ. ಇದನ್ನು ಕೇಳಿದ್ರೆ ನಿಮ್ಮ ರಕ್ತ ಕುದಿಯಲ್ವಾ? ಕರ್ನಾಟಕದ ಮೂಲೆ ಮೂಲೆಯಿಂದ ಬೀದಿಗಿಳಿದು ಪ್ರತಿಭಟನೆ ಮಾಡಬೇಕು ಎಂದು ದೊಂಬಿಗೆ ಮಾಡುವ ಉದ್ದೇಶದಿಂದ ಜನರಿಗೆ ಉದ್ರೇಕಗೊಳಿಸಿದ ಆರೋಪ. ಸಾರ್ವಜನಿಕ ಕೇಡಿಗೆ ಕಾರಣವಾಗುವ ಸಾಮಾಜಿಕ ನೆಮ್ಮದಿಯ ಹಾಳಾಗುವ ಉದ್ದೇಶವುಳ್ಳ ವಿಡಿಯೋ ಹೇಳಿಕೆ ಆರೋಪ ಹಿನ್ನೆಲೆಯಲ್ಲಿ BNS 240, 192, 353(1)(b) ಅಡಿಯಲ್ಲಿ ಪ್ರಕರಣ‌ ದಾಖಲಾಗಿತ್ತು.

ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂಡಿಯನ್ನ ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಬಂದಿದ್ದರು. ಬನ್ನೇರುಘಟ್ಟದಲ್ಲಿರೋ ನಿವಾಸಕ್ಕೆ ಪೊಲೀಸರು ಎಂಟ್ರಿ ಕೊಡ್ತಿದ್ದಂತೆ ಸಮೀರ್ ಮನೆಯಿಂದ ಪರಾರಿ ಆಗಿದ್ದ.  ಅಲ್ಲದೇ ಇದರ ನಡುವೆ ಬಂಧನದ ಭೀತಿ ಬೆನ್ನಲ್ಲೇ ಸಮೀರ್ ಎಂ.ಡಿ ಕೋರ್ಟ್‌ ಮೊರೆ ಹೋಗಿದ್ದ. ಆಗಸ್ಟ್ 19ರಂದೇ ಸಮೀರ್ ಎಂ.ಡಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ.

ಇನ್ನು FIR ಆದ ಬಳಿಕ‌ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಗೆ ಪತ್ರ ಬರೆದಿದ್ದ ಸಮೀರ್, ಧರ್ಮಸ್ಥಳ ಠಾಣೆಯಲ್ಲಿ ವಿಚಾರಣೆ ಬರಲು ಸಾದ್ಯವಿಲ್ಲ. ಯೂಟ್ಯೂಬರ್ ಗಳ ಮೇಲೆ ಹಲ್ಲೆ ಆಗಿದೆ. ಆದ್ದರಿಂದ ಬೇರೆ ಠಾಣೆ ತೋರಿಸಿ. ವಿಡಿಯೋ ಕಾನ್ಫರೆನ್ಸ್ ಅಥವಾ ಪೊಲೀಸ್ ಭದ್ರತೆ ನೀಡಿ. ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಪತ್ರದಲ್ಲಿ ತಿಳಿಸಿದ್ದರು. ಅಲ್ಲದೇ ವಿಚಾರಣೆಗೆ ಹಾಜರಾಗಲು 15 ದಿನ ಕಾಲವಕಾಶ ಕೋರಿದ್ದ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Thu, 21 August 25