ಕರಾವಳಿಯಲ್ಲಿ ಆಳವಾಗಿಯೇ ಬೇರೂರಿದೆ ಡ್ರಗ್​ ಮಾಫಿಯಾ: ಕಡಿವಾಣ ಹಾಕುವುದು ಹೇಗೆ?

ಕಾರ್ಕೋಟಕ ವಿಷಕ್ಕಿಂತಲೂ ಅಪಾಯಕಾರಿಯಾದದ್ದು ಈ ಡ್ರಗ್ಸ್ ಜಾಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಿಹರೆಯದ ಯುವಕರನ್ನು ತನ್ನ ಜಾಲದಲ್ಲಿ ಸಿಲುಕಿಸಿ ಅರಿವಿಲ್ಲದಂತೆಯೇ ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ.

ಕರಾವಳಿಯಲ್ಲಿ ಆಳವಾಗಿಯೇ ಬೇರೂರಿದೆ ಡ್ರಗ್​ ಮಾಫಿಯಾ: ಕಡಿವಾಣ ಹಾಕುವುದು ಹೇಗೆ?
ಕರಾವಳಿಯಲ್ಲಿ ಆಳವಾಗಿ ಬೇರೂರಿದೆ ಡ್ರಗ್​ ಮಾಫಿಯಾ- ಕಡಿವಾಣ ಹೇಗೆ?
Follow us
| Updated By: ಸಾಧು ಶ್ರೀನಾಥ್​

Updated on: Jan 04, 2024 | 5:32 PM

ರಾಜ್ಯದೆಲ್ಲೆಡೆ ತನ್ನ ಕಬಂದಬಾಹುಗಳನ್ನು ಚಾಚಿರುವ ಡ್ರಗ್​ ಮಾಫಿಯಾ (Drug mafia) ಕರಾವಳಿಯಲ್ಲಿ (coastal Mangalore) ಸ್ವಲ್ಪ ಆಳವಾಗಿಯೇ ಬೇರೂರಿದೆ. ಕಳೆದ ಒಂದು ವರ್ಷದಲ್ಲಿ ಮಾಫಿಯಾದ ವಿರುದ್ದ ಯುದ್ದ ಸಾರಿದ ಕುಡ್ಲ ಖಾಕಿ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್‌ ಅನ್ನು ವಶಪಡಿಸಿಕೊಂಡಿದೆ. ಈ ಬಾರಿ ವಿಶೇಷ ತಂಡಗಳನ್ನು ರಚಿಸಿಕೊಂಡು ಹೇಗಾದ್ರೂ ಮಾಡಿ ಡ್ರಗ್ಸ್ ಮಾಫಿಯವನ್ನು ಮಟ್ಟ ಹಾಕಲೇಬೇಕು ಎಂಬ ನಿರ್ಧಾರಕ್ಕೆ ಪೋಲಿಸ್ ಇಲಾಖೆ ಬಂದಿದೆ.

ಮಂಗಳೂರು ಎಜುಕೇಶನ್ ಹಬ್ ಎಂದು ಕರೆಸಿಕೊಂಡಿರುವ ನಗರ. ದೇಶ ವಿದೇಶಗಳಿಂದ ಇಲ್ಲಿಗೆ ವಿದ್ಯಾರ್ಜನೆಗೆಂದು ಸಾವಿರಾರು ವಿದ್ಯಾರ್ಥಿಗಳು ಬರ್ತಾರೆ. ಆದ್ರೆ ಈ ರೀತಿ ವಿದ್ಯಾರ್ಜನೆಗೆಂದು ಬರುವ ಸ್ಟೂಡೆಂಟ್​​ಗಳನ್ನು ಟಾರ್ಗೆಟ್ ಮಾಡ್ಕೊಂಡು ಡ್ರಗ್​ ಮಾಫಿಯಾ ಕಾರ್ಯಾಚರಣೆ ನಡೆಸುತ್ತಿದೆ. ಆದ್ರೆ ಈ ಮಾಫಿಯಾದ ವಿರುದ್ದ ಮಂಗಳೂರು ಪೊಲೀಸರು ಸಹ ನಿರಂತರವಾಗಿ ಸಮರ ಸಾರುತ್ತಿದ್ದಾರೆ. ಅದೆಷ್ಟರ ಮಟ್ಟೆಗೆ ಅಂದ್ರೆ ಒಂದು ವರ್ಷದಲ್ಲಿ ಕೇವಲ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲೇ 1 ಕೋಟಿ 71 ಲಕ್ಷ ಮೌಲ್ಯದ 11 ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿ 94 ಕೇಸ್‌ನಲ್ಲಿ 199 ಜನರನ್ನು ಬಂಧಿಸಿದ್ದು, ಡ್ರಗ್ಸ್ ಸೇವನೆಗೆ ಸಂಬಂಧಿಸಿ 619 ಪ್ರಕರಣದಲ್ಲಿ 749 ಜನರನ್ನು ಕುಡ್ಲ ಖಾಕಿ ಬಂಧಿಸಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.

Also Read: ಡ್ರಗ್ ಮಾಫಿಯಾದಲ್ಲಿ ಮೆರೆದಾಡಲು ಬಯಸಿದ್ದ ಟ್ಯಾಟೂ ಆರ್ಟಿಸ್ಟ್​ಗಳು ಸಿಸಿಬಿ ಬಲೆಗೆ

ಕಾರ್ಕೋಟಕ ವಿಷಕ್ಕಿಂತಲೂ ಅಪಾಯಕಾರಿಯಾದದ್ದು ಈ ಡ್ರಗ್ಸ್ ಜಾಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಿಹರೆಯದ ಯುವಕರನ್ನು ತನ್ನ ಜಾಲದಲ್ಲಿ ಸಿಲುಕಿಸಿ ಅರಿವಿಲ್ಲದಂತೆಯೇ ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ. ಇಲ್ಲಿವರೆಗೆ ಪತ್ತೆ ಮಾಡಿರುವ ಪ್ರಕರಣಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಗಳೂರು, ಗೋವಾ, ಮುಂಬೈ‌ನಿಂದ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂದು ಗೊತ್ತಾಗಿದೆ.

ಆದ್ರೆ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್‌ಗಳು ನೆರೆಯ ಕೇರಳ ರಾಜ್ಯದಿಂದ ಡ್ರಗ್ಸ್ ಖರೀದಿ ಮಾಡುತ್ತಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಹೀಗಾಗಿ ಸದ್ಯ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಮೂರು ಉಪವಿಭಾಗಗಳಲ್ಲಿ ಎ.ಸಿ.ಪಿ ನೇತ್ರತ್ವದಲ್ಲಿ ಡ್ರಗ್ಸ್ ವಿರುದ್ದದ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲಾಗಿದೆ. ಈ ತಂಡದಲ್ಲಿ ಓರ್ವ ಪಿ.ಎಸ್.ಐ ಮತ್ತು ಸಿಬ್ಬಂದಿಗಳಿದ್ದು ಇವರು ಡ್ರಗ್ಸ್ ವಿರುದ್ದವೇ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಕರಾವಳಿಯ ಡ್ರಗ್ಸ್ ಮಾಫಿಯ ಬೆಂಗಳೂರಿನ ಮಾಫಿಯಾಕ್ಕಿಂತ ಕಡಿಮೆಯೇನಿಲ್ಲ. ಸರಿಯಾದ ಜಾಡು ಹಿಡಿದ್ರೆ ಡ್ರಗ್ಸ್ ಲೋಕವನ್ನು ನಡೆಸುತ್ತಿರುವವರ ಮೂಲವನ್ನೇ ಅಲುಗಾಡಿಸಿ ಇಡೀ ಮಾಫಿಯವನ್ನು ಮಟ್ಟ ಹಾಕಬಹುದಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ