ದಕ್ಷಿಣ ಕನ್ನಡ, ಅ.18: ಮಂಗಳೂರು(Mangaluru) ಮಂಗಳಾದೇವಿ(Mnagaladevi) ದೇವಸ್ಥಾನದಲ್ಲಿ ವ್ಯಾಪಾರ ಧರ್ಮ ದಂಗಲ್ ವಿಚಾರಕ್ಕೆ ಸಂಬಂಧಪಟ್ಟಂತೆ ವಿಶ್ವಹಿಂದೂ ಪರಿಷತ್(VHP) ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ವಿರುದ್ದ ಎಫ್ಐಆರ್(FIR) ದಾಖಲು ಮಾಡಲಾಗಿದೆ. ಹೌದು, ಮುಸ್ಲಿಮರ ಜೊತೆ ವ್ಯಾಪಾರ ಮಾಡದಂತೆ ಕರೆ ಕೊಟ್ಟಿದ್ದು, ಜೊತೆಗೆ ಮಂಗಳಾದೇವಿಯ ಹಿಂದೂಗಳ ಸ್ಟಾಲ್ಗಳಿಗೆ ಭಗವಾನ್ಧ್ಬಜ ಕಟ್ಟಿ, ಭಗವಾನ್ಧ್ಬಜ ಇದ್ದ ಸ್ಟಾಲ್ಗಳಲ್ಲೇ ವ್ಯಾಪಾರ ನಡೆಸಬೇಕು ಎಂದು ಕರೆ ಕೊಟ್ಟಿದ್ದ ಹಿನ್ನಲೆ ಶರಣ್ ಪಂಪ್ ವೆಲ್ ವಿರುದ್ದ ಪಾಂಡೇಶ್ವರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿದ್ದಾರೆ.
ಅ.16ರಂದು ಮಂಗಳಾದೇವಿಯ ರಥಬೀದಿಯ ಹಿಂದೂಗಳ ಸ್ಟಾಲ್ಗಳಿಗೆ ವಿಶ್ವ ಹಿಂದೂ ಪರಿಷತ್ ಭಗವಾನ್ಧ್ಬಜ ಕಟ್ಟಿದ್ದರು. ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ ಪ್ರಕರಣ ದಾಖಲು ಮಾಡಿಕೊಂಡು, ಐಪಿಸಿ 153A, 34 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇಂದು ಜಾತ್ರಾ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳು ಹಾಗೂ ಡಿವೈಎಫ್ಐ, ಎಡಪಂಥೀಯ ಸಂಘಟನೆಗಳ ನಿಯೋಗ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿದ್ದರು. ಸಚಿವ ದಿನೇಶ್ ಗುಂಡೂರಾವ್ ಎದುರು ಡಿವೈಎಫ್ಐ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಶರಣ್ ಪಂಪ್ ವೆಲ್ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಲು ಆಗ್ರಹಿಸಿದ್ದರು. ಆ ಬಳಿಕ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಕರೆದು ಕಾನೂನು ಕ್ರಮಕ್ಕೆ ಗುಂಡೂರಾವ್ ಸೂಚಿಸಿದ್ದರು. ಇದರ ಬೆನ್ನಲ್ಲೇ ಶರಣ್ ಪಂಪ್ ವೆಲ್ ಸೇರಿ ಇನ್ನಿತರ ಕೆಲ ಮುಖಂಡರ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ.
ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿತ್ತು. ಈ ಹಿನ್ನಲೆ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಮಧ್ಯೆ ಪ್ರವೇಶಿಸಿದ ಜಿಲ್ಲಾಡಳಿತ ಹಿಂದೂಯೇತರರಿಗೂ ಅಂಗಡಿ ಇಡಲು ಅನುಮತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಮಂಗಳಾದೇವಿ ದೇವಸ್ಥಾನದ ಎಲ್ಲಾ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮುಂದೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕೇಸರಿ ಧ್ವಜ ಹಾಕಿದ್ದರು. ಬಳಿಕ ಮಾತನಾಡಿದ್ದ ವಿಹೆಚ್‌ಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಕೆ.ಪುರುಷೋತ್ತಮ ದತ್ತನಗರ ‘ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕು. “ಹಬ್ಬದ ಸಂದರ್ಭದಲ್ಲಿ ಹಿಂದೂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದ ಮಂಗಳಾದೇವಿ ದೇವಸ್ಥಾನದ ಆಡಳಿತ ಮಂಡಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಆದರೆ, ಜಿಲ್ಲಾಡಳಿತದ ವತಿಯಿಂದ ಮರು ಹರಾಜಿನಲ್ಲಿ ಹಿಂದೂಯೇತರಗೂ ಮಳಿಗೆಗಳನ್ನು ಹಾಕಲು ಅವಕಾಶ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Wed, 18 October 23