Kambala in Palace Grounds: ಕಂಬಳ ಸಂಭ್ರಮಕ್ಕೆ ಸಜ್ಜಾದ ರಾಜಧಾನಿ ಬೆಂಗಳೂರು, 125 ಜೋಡಿ ಕೋಣಗಳು-ಜಾಕಿಗಳು ಸ್ಪರ್ಧಿಸುವ ನಿರೀಕ್ಷೆ

ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ 6 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, 6 ರಿಂದ 7 ಲಕ್ಷ ಜನ ಸೇರಲಿದ್ದಾರೆ. ವಿಜೇತ ಜಾಕಿಗೆ ಎರಡು ಚಿನ್ನದ ಪದಕ ಮತ್ತು ರನ್ನರ್ ಅಪ್ ಜಾಕಿ ಒಂದು ಚಿನ್ನದ ಪದಕ ಪಡೆಯುತ್ತಾರೆ. ಸುಮಾರು 125 ಜೋಡಿ ಕೋಣಗಳು-ಜಾಕಿಗಳು ರಾಜಧಾನಿಗೆ ಆಗಮಿಸುವ ಅಂದಾಜಿದೆ. ಬೆಂಗಳೂರಿನ ಈ ಈವೆಂಟ್ ನವೆಂಬರ್ 25 ಮತ್ತು 26 ರಂದು (ಶನಿವಾರ-ಭಾನುವಾರದ ವಾರಾಂತ್ಯದಲ್ಲಿ) ಅರಮನೆ ಮೈದಾನದಲ್ಲಿ ನಡೆಯಲಿದೆ.

Kambala in Palace Grounds: ಕಂಬಳ ಸಂಭ್ರಮಕ್ಕೆ ಸಜ್ಜಾದ ರಾಜಧಾನಿ ಬೆಂಗಳೂರು, 125 ಜೋಡಿ ಕೋಣಗಳು-ಜಾಕಿಗಳು ಸ್ಪರ್ಧಿಸುವ ನಿರೀಕ್ಷೆ
ಕಂಬಳ ಸಂಭ್ರಮಕ್ಕೆ ಸಜ್ಜಾದ ರಾಜಧಾನಿ ಬೆಂಗಳೂರು
Follow us
ಸಾಧು ಶ್ರೀನಾಥ್​
|

Updated on:Oct 18, 2023 | 6:26 PM

ಇತ್ತೀಚಿನ ವರ್ಷಗಳಲ್ಲಿ, ಕಂಬಳವು (Kambala) ಪ್ರಾದೇಶಿಕವಾಗಿ ಸಾಂಸ್ಕೃತಿಕ ಕ್ಯಾಲೆಂಡರ್‌ನಲ್ಲಿ ಪ್ರಮುಖ ಹಬ್ಬವಾಗಿ ಪರಿವರ್ತನೆಯಾಗಿದೆ. ಈ ಹಿಂದೆ ವಿಜೇತರಿಗೆ ಹಣ್ಣು ಮತ್ತು ತರಕಾರಿಗಳನ್ನು ಬಹುಮಾನವಾಗಿ ನೀಡಲಾಗುತ್ತಿತ್ತು, ಆದರೆ ಈಗ ಕಾಲ ಬದಲಾದಂತೆ ವಿಜೇತರಿಗೆ ಚಿನ್ನ ಮತ್ತು ನಗದು ಬಹುಮಾನ ನೀಡಿ ಗೌರವಿಸುವಷ್ಟರ ಮಟ್ಟಿಗೆ ದೊಡ್ಡದಾಗಿದೆ. ಕೋಣ ರೇಸಿಂಗ್ ಕ್ರೀಡೆಯಾದ ಕಂಬಳ ಈ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ (Palace Grounds) ಆಯೋಜಿಸಲಾಗಿದೆ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು ಜಿಲ್ಲೆಯಿಂದ ಸುಮಾರು 125 ಜೋಡಿ ಕೋಣಗಳು (125 pairs of buffaloes) ಮತ್ತು ಅಷ್ಟೇ ಸಂಖ್ಯೆಯ ಜಾಕಿಗಳು ( jockeys ) ರಾಜಧಾನಿಗೆ ಆಗಮಿಸುವ ಅಂದಾಜಿದೆ. ಬೆಂಗಳೂರಿನ ಈ ಈವೆಂಟ್ ನವೆಂಬರ್ 25 ಮತ್ತು 26 ರಂದು ಎರಡು ದಿನಗಳ ಕಾಲ ಶನಿವಾರ-ಭಾನುವಾರದ ವಾರಾಂತ್ಯದಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿದೆ.

ಖ್ಯಾತ ಚಲನಚಿತ್ರ ಸಂಗೀತ ಸಂಯೋಜಕ ಹಾಗೂ ಸಂಘಟನಾ ಸಮಿತಿ ಸದಸ್ಯ ಗುರುಕಿರಣ್ ಅವರು deccanherald.com ಜೊತೆ ಮಾತನಾಡುತ್ತಾ ‘ರೇಸ್‌ಗಾಗಿ ನಾಲ್ಕು ಅಡಿ ಆಳ ಹಾಗೂ 140 ಮೀಟರ್‌ ಉದ್ದದ ಟ್ರ್ಯಾಕ್‌ ಅಗೆದಿದ್ದೇವೆ. ಅದನ್ನು ಪುಡಿ ಮಾಡಿದ ಜಲ್ಲಿ, ಮರಳು ಮತ್ತು ಮಣ್ಣಿನ ಮಿಶ್ರಣದಿಂದ ತುಂಬಲಾಗಿದೆ. ಬೆಂಗಳೂರಿನ ಮಣ್ಣು ನೀರನ್ನು ಹೀರಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಾವು ಅದನ್ನು ಪರೀಕ್ಷಿಸುತ್ತಿದ್ದೇವೆ. ಬಳಕೆಗೆ ತಕ್ಕಂತೆ ನೀರು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಆವರಣದಲ್ಲಿ ಬೋರ್‌ವೆಲ್ ಅನ್ನು ಸಹ ಅಗೆದಿದ್ದೇವೆ ಎಂದು ತಿಳಿಸಿದ್ದಾರೆ.

ಕೋಣಗಳು ಟ್ರಕ್‌ ಮೂಲಕ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ. ಹಾಸನದಲ್ಲಿ ಒಂದು ನಿಲುಗಡೆ ಇರುತ್ತದೆ. ಅವುಗಳ ಪ್ರಯಾಣದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇವೆ ಎಂದು ಕೋಣ ಸಾಗಣೆ ಸವಾಲುಗಳ ಕುರಿತು ಕೋಣಗಳ ಮಾಲೀಕ ಶಕ್ತಿ ಪ್ರಸಾದ್ ಹೇಳುತ್ತಾರೆ.

ಕೋಣಗಳಿಗೆ ಈ ಪ್ರಯಾಣ ದಣಿವಿನಿಂದ ಕೂಡಿರುತ್ತದೆ. ದೈಹಿಕವಾಗಿಯೂ ಅವುಗಳಿಗೆ ನೋವನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಅವುಗಳನ್ನು ಈವೆಂಟ್‌ಗೆ ಎರಡು ದಿನ ಮುಂಚಿತವಾಗಿ ತರಲಾಗುತ್ತದೆ. ಆದ್ದರಿಂದ ಅವು ಕಂಬಳ ಓಟದ ಮೊದಲು ಅಗತ್ಯ ವಿಶ್ರಾಂತಿ ಪಡೆಯುತ್ತವೆ ಎಂದು ಅವರು ತಿಳಿಸುತ್ತಾರೆ.

ಇದನ್ನೂ ಓದಿ: Kambala: ಕಂಬಳದಲ್ಲಿ ಮಹಿಳೆಯರಿಗೂ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ

ಹವಾಮಾನ ಬದಲಾವಣೆಯು ಕೋಣಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದು ಅವರ ನಂಬಿಕೆ/ವಿಶ್ವಾಸ. ಒಮ್ಮೆ ಅವು ಮೈದಾನಕ್ಕೆ ಇಳಿದರೆ ಅದೇನೂ ಸಮಸ್ಯೆಯಾಗುವುದಿಲ್ಲ, ಅವು ಹೊಂದಿಕೊಳ್ಳುತ್ತವೆ ಎಂದು ತಾವು ಭಾವಿಸುವುದಾಗಿ ಅವರು ಹೇಳುತ್ತಾರೆ.

ಆದರೆ ಟ್ರ್ಯಾಕ್‌ನ ಸಮತೆಯ ಬಗ್ಗೆ ಅವನು ವಿಶೇಷವಾಗಿ ಗಮನ ಹರಿಸಿದ್ದಾರೆ. ನಾವು ಟ್ರ್ಯಾಕ್ ಅನ್ನು ಪರಿಶೀಲಿಸುತ್ತೇವೆ. ಅದು ಸಮತಲವಾಗಿದ್ದರೆ ಮಾತ್ರ ಕಂಬಳ ನಡೆಸುತ್ತೇವೆ. ನನ್ನ ಜಾಕಿ ಅಥವಾ ಕೋಣಗಳು ಗಾಯಗೊಳ್ಳುವುದನ್ನು ನಾನು ಬಯಸುವುದಿಲ್ಲ ಎಂದು ಅವರು ಕಾಳಜಿ ತೋರಿದ್ದಾರೆ.

ಶ್ರೀನಿವಾಸ್ ಗೌಡ ಅವರು ವೇಗದ ಕಂಬಳ ಓಟದ ದಾಖಲೆಯನ್ನು ಹೊಂದಿದ್ದಾರೆ, ನಮ್ಮ ಶಕ್ತಿಯುತ ಜಾಕಿಗಳಲ್ಲಿ ಅವರೂ ಒಬ್ಬರು. ಬೆಂಗಳೂರು ಈವೆಂಟ್‌ನಲ್ಲಿ ಅವರೂ ಭಾಗವಹಿಸಲಿದ್ದಾರೆ. ನಮ್ಮ ಶಕ್ತಿಯುತ ಎಮ್ಮೆಗಳಾದ ಮಿಜಾರ್ ಪುಟ್ಟ ಮತ್ತು ಮಿಜಾರ್ ಅಪ್ಪು ಆರು ಋತುಗಳಲ್ಲಿ ನಿರಂತರವಾಗಿ ಪದಕಗಳನ್ನು ಗೆದ್ದಿವೆ ಎಂದು ಮಾಲೀಕ ಶಕ್ತಿ ಪ್ರಸಾದ್ ತಿಳಿಸಿದ್ದಾರೆ. ಪಶುವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳು ಸಹ ಈ ಪ್ರಾಣಿಗಳೊಂದಿಗೆ ಪ್ರಯಾಣಿಸುತ್ತವೆ. ಅರಮನೆ ಮೈದಾನದಲ್ಲಿ ಠಿಕಾಣಿ ಹೂಡತ್ತವೆ ಎಂಬುದು ಗಮನಾರ್ಹ.

ಐತಿಹಾಸಿಕವಾಗಿ, ಕಂಬಳ ಹಬ್ಬ ಮತ್ತು ಅದರ ಮುಖ್ಯ ಕಾರ್ಯಕ್ರಮವಾದ ಕೋಣಗಳ ಓಟವನ್ನು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಆದರೆ ಅದನ್ನು ಈ ಬಾರಿ ದೂರದ ಬೆಂಗಳೂರಿನಲ್ಲಿ ಆಯೋಜಿಸುವ ನಿರ್ಧಾರವನ್ನು ಬೆಂಗಳೂರು ಕಂಬಳ ಸಮಿತಿಯ ಸಂಚಾಲಕ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕೈಗೂಡಿಸಿದ್ದಾರೆ.

ಸಾಂಪ್ರದಾಯಿಕವಾಗಿ ಭತ್ತದ ಕೊಯ್ಲಿನ ನಂತರ, ಹೊಲಗಳು ನೀರು ಮತ್ತು ಕೆಸರು ತುಂಬಿದ ಹಳ್ಳಗಳಾಗಿ ಮಾರ್ಪಡುತ್ತವೆ. ಪ್ರತಿ ಸುತ್ತಿನಲ್ಲಿ ಎರಡು ಜೋಡಿ ಎಮ್ಮೆಗಳು ಜಾಕಿಯೊಂದಿಗೆ ಸ್ಪರ್ಧಿಸುತ್ತವೆ. ವಿಜೇತರು ನಂತರದ ಮುಂದಿನ ಸುತ್ತುಗಳಿಗೆ ಪ್ರವೇಶ ಪಡೆಯುತ್ತಾರೆ. ವಿಜೇತರನ್ನು ಆ ಜೋಡಿಯ ವೇಗದಿಂದ ನಿರ್ಧರಿಸಲಾಗುತ್ತದೆ. ಅವರು ನೀರನ್ನು ಎಷ್ಟು ಎತ್ತರಕ್ಕೆ ಚಿಮ್ಮಿಸುತ್ತಾರೆ (ಸ್ಪ್ಲಾಶ್) ಎಂಬುದೂ ಮುಖ್ಯವಾಗುತ್ತದೆ.

ಕಂಬಳದ ವಿಧಗಳು

ಕಂಬಳದಲ್ಲಿ ಸ್ಥೂಲವಾಗಿ ಎರಡು ವಿಧಗಳಿವೆ ಎನ್ನುತ್ತಾರೆ ಕಂಬಳ ಅಕಾಡೆಮಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಕಂಬಳ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಗುಣಪಾಲ ಕದಂಬ. “ಸಾಂಪ್ರದಾಯಿಕ ಆವೃತ್ತಿಯನ್ನು ಭತ್ತದ ಗದ್ದೆಗಳಲ್ಲಿ ನಡೆಸಲಾಗುತ್ತದೆ, ಆದರೆ ಆಧುನಿಕ ಕಂಬಳವನ್ನು ಟ್ರ್ಯಾಕ್ಗಳಾಗಿ ಪರಿವರ್ತಿಸಿದ ಮೈದಾನದಲ್ಲಿ ನಡೆಸಲಾಗುತ್ತದೆ. ಇನ್ನು, ಎರಡನೆಯದನ್ನು ಫ್ಲಡ್‌ಲೈಟ್‌ಗಳ ಅಡಿಯಲ್ಲಿ ಮತ್ತು ಲೇಸರ್ ಕಿರಣಗಳು ಮತ್ತು ಇತರ ಆಧುನಿಕ ತಂತ್ರಜ್ಞಾನದೊಂದಿಗೆ ನಡೆಸಲಾಗುತ್ತದೆ” ಎಂದು ಅವರು ಹೇಳುತ್ತಾರೆ. ಸಾಂಪ್ರದಾಯಿಕವಾಗಿ, ಎಮ್ಮೆಗಳ ಪರಿಣತಿಯನ್ನು ಆಧರಿಸಿ ಆರು ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ.

ಸುಪ್ರೀಂ ಕೋರ್ಟ್ ಆದೇಶ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಉಲ್ಲೇಖಿಸಿ 2014 ರಲ್ಲಿ ಸುಪ್ರೀಂ ಕೋರ್ಟ್ ಕಂಬಳವನ್ನು ನಿಷೇಧಿಸಿತು. ಆದರೆ 2017 ರಲ್ಲಿ, ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರ ಒತ್ತಡದ ನಂತರ ಕ್ರೀಡೆಯನ್ನು ಕಾನೂನುಬದ್ಧಗೊಳಿಸಲಾಯಿತು. ಕ್ರೌರ್ಯವನ್ನು ತಪ್ಪಿಸಲು ಮತ್ತು ಪ್ರಾಣಿಗಳನ್ನು ಚೆನ್ನಾಗಿ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸಂಘಟಕರು ಸುಪ್ರೀಂ ಕೋರ್ಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ 6 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, 6 ರಿಂದ 7 ಲಕ್ಷ ಜನ ಸೇರಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ವಿಜೇತ ಜಾಕಿಗೆ ಎರಡು ಚಿನ್ನದ ಪದಕ ಮತ್ತು ರನ್ನರ್ ಅಪ್ ಜಾಕಿ ಒಂದು ಚಿನ್ನದ ಪದಕ ಪಡೆಯುತ್ತಾರೆ ಎಂದು ಅವರು ತಿಳಿಸಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:49 am, Wed, 18 October 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್