Mangalore Ayodhya Train: ಮಂಗಳೂರಿನಿಂದ ಅಯೋಧ್ಯೆಗೆ ರೈಲು: ಇಲ್ಲಿದೆ ವೇಳಾಪಟ್ಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 08, 2024 | 10:31 PM

ಮಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ 06517 ಕೊಯಮತ್ತೂರು-ದರ್ಶನ ನಗರ್‌-ಕೊಯಮತ್ತೂರು ಆಸ್ತಾ ವಿಶೇಷ ರೈಲಿನ ಸೌಲಭ್ಯ ಕಲ್ಪಿಸಲಾಗಿದೆ. ಈ ರೈಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಫೆ.8 ಗುರುವಾರ ಸಂಜೆ 5.50ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 6 ಗಂಟೆಗೆ ಅಯೋಧ್ಯೆಗೆ ತೆರಳಲಿದೆ. ಫೆ. 11 ರ ಮುಂಜಾನೆ ಅಯೋಧ್ಯೆಯ ದರ್ಶನ್ ನಗರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ.

Mangalore Ayodhya Train: ಮಂಗಳೂರಿನಿಂದ ಅಯೋಧ್ಯೆಗೆ ರೈಲು: ಇಲ್ಲಿದೆ ವೇಳಾಪಟ್ಟಿ
ಅಯೋಧ್ಯೆಗೆ ರೈಲು
Follow us on

ಮಂಗಳೂರು, ಫೆಬ್ರವರಿ 8: ತಮಿಳುನಾಡಿನ ಕೊಯಮತ್ತೂರಿನಿಂದ ಅಯೋಧ್ಯೆ (Ayodhya) ರಾಮಮಂದಿರಕ್ಕೆ ತೆರಳಲು ವಿಶೇಷ ರೈಲು ಸಂಚಾರ ಗುರುವಾರ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ 06517 ಕೊಯಮತ್ತೂರು-ದರ್ಶನ ನಗರ್‌-ಕೊಯಮತ್ತೂರು ಆಸ್ತಾ ವಿಶೇಷ ರೈಲಿನ ಸೌಲಭ್ಯ ಕಲ್ಪಿಸಲಾಗಿದೆ. ಈ ರೈಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಫೆ.8 ಗುರುವಾರ ಸಂಜೆ 5.50ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 6 ಗಂಟೆಗೆ ಅಯೋಧ್ಯೆಗೆ ತೆರಳಲಿದೆ. ಫೆ. 11 ರ ಮುಂಜಾನೆ ಅಯೋಧ್ಯೆಯ ದರ್ಶನ್ ನಗರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಫೆಬ್ರವರಿ 12 ರಂದು ಬೆಳಿಗ್ಗೆ 8 ಗಂಟೆಗೆ ಅಯೋಧ್ಯೆಯಿಂದ ಹಿಂದಿರುಗುವ ಈ ರೈಲು ಫೆಬ್ರವರಿ 14 ರ ಸಂಜೆ ಮಂಗಳೂರು ಜಂಕ್ಷನ್​ಗೆ ಆಗಮಿಸಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಈಗಾಗಲೇ ಬೆಂಗಳೂರಿನಿಂದ ಅಯೋಧ್ಯೆಗೆ ಕಾಶಿ-ತಮಿಳ್‌ ಸಂಗಮ ಎಕ್ಸ್‌ಪ್ರೆಸ್‌ ಆರಂಭವಾಗಿದೆ. ವಿಶಾಖಪಟ್ಟಣ- ಗೋರಖಪುರ ಎಕ್ಸ್‌ಪ್ರೆಸ್‌, ನಾಗರಕೋಯಿಲ್‌ (ತಮಿಳುನಾಡು)-ಅಯೋಧ್ಯೆ ಎಕ್ಸ್‌ಪ್ರೆಸ್‌ ಆರಂಭ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಅಯೋಧ್ಯೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ನೇರ ಸಂಪರ್ಕ ವ್ಯವಸ್ಥೆ ಇಲ್ಲ. ಕರಾವಳಿ ಭಾಗದವರು ಮುಂಬಯಿಗೆ ತೆರಳಿ ಅಲ್ಲಿಂದ ಅಯೋಧ್ಯೆಗೆ ತೆರಳಬೇಕು.

ಇದನ್ನೂ ಓದಿ: Palace on Wheels: ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು; 42 ವರ್ಷಗಳ ಬಳಿಕ ರೈಲಿನ ಮಾರ್ಗ ಬದಲಾವಣೆ

ಇಲ್ಲವೇ ಬೆಂಗಳೂರಿಗೆ ತೆರಳಿ ರೈಲುಗಳನ್ನು ಬಳಸಬೇಕು. ಇದರಿಂದ ಸಮಯ ವ್ಯರ್ಥದ ಜತೆಗೆ ವೆಚ್ಚವೂ ಹೆಚ್ಚಳವಾಗಲಿದೆ. ನಾಗರಕೋಯಿಲ್‌ (ತಮಿಳುನಾಡು) -ಅಯೋಧ್ಯೆ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್‌ ನಿಲ್ದಾಣದ ಮೂಲಕ ಹಾದುಹೋಗಲಿದ್ದರೂ ಇದರಿಂದ ಕರಾವಳಿಯ ಪ್ರಯಾಣಿಕರಿಗೆ ಪ್ರಯೋಜನವಿಲ್ಲ.

ಈ ರೈಲು ಕೇರಳ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಹೆಚ್ಚಿನ ಸೀಟುಗಳನ್ನು ಅಲ್ಲಿನವರೇ ಕಾಯ್ದಿರಿಸುವುದರಿಂದ ಕರಾವಳಿಗರಿಗೆ ಸೀಟು ಸಿಗುವುದೇ ಅತ್ಯಲ್ಪ. ಕನಿಷ್ಠ ವಾರದಲ್ಲಿ ಒಂದು ದಿನವಾದರೂ ಕರಾವಳಿ ಭಾಗದಿಂದ ಉಡುಪಿ ಮಾರ್ಗವಾಗಿ ಅಯೋಧ್ಯೆಗೆ ನೇರ ರೈಲು ಸಂಪರ್ಕ ಒದಗಿಸಬೇಕಿದೆ.

ಇದನ್ನೂ ಓದಿ: ಅಯೋಧ್ಯೆ ರೈಲು ನಿಲ್ದಾಣದ ಹೆಸರು ಅಯೋಧ್ಯಾ ಧಾಮ ಎಂದು ಬದಲಾವಣೆ

ಪ್ರಸ್ತುತ ಅಯೋಧ್ಯಾ ಧಾಮ್, ಅಯೋಧ್ಯಾ ಕಂಟೋನ್ಮೆಂಟ್ ಮತ್ತು ಸಲಾರ್‌ಪುರ ನಿಲ್ದಾಣಗಳಲ್ಲಿನ ಯಾರ್ಡ್‌ಗಳನ್ನು ಮರುರೂಪಿಸುತ್ತಿದೆ. ಹೀಗಾಗಿ ಈ ಸ್ಥಳಗಳಿಂದ ಬೆಂಗಳೂರಿಗೆ ತೆರಳುವ ಎರಡು ರೈಲುಗಳನ್ನು ಬೇರೆಡೆಯಿಂದ ಸಂಚರಿಸುವಂತೆ ಮಾಡಲಾಗಿದೆ. ಯಾರ್ಡ್ ಪುನರ್ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ.

ಅಯೋಧ್ಯೆಗೆ ರೈಲುಗಳನ್ನು ಆರಂಭಿಸಿದ ನಂತರ, ಐಆರ್​ಸಿಟಿಸಿಯು ಕರ್ನಾಟಕ ಭಾರತ್ ಗೌರವ್ ಯಾತ್ರಾ ರೈಲುಗಳನ್ನು ನಿಲ್ಲಿಸಲಿದೆ ಎಂದು ಮೂಲಗಳು ತಿಳಿಸಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:30 pm, Thu, 8 February 24