ಮಂಗಳೂರು ಪಬ್​ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿ: ಶಾಸಕ ವೇದವ್ಯಾಸ ಕಾಮತ್​ ಗಮನ ಸೆಳೆದ ಬಜರಂಗದಳ ಕಾರ್ಯಕರ್ತರು

ಮಂಗಳೂರು ಪಬ್​ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ತಡೆದಿರುವ ವಿಚಾರವಾಗಿ ವಿಎಚ್​​ಪಿ‌ ಮುಖಂಡರು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್​ರನ್ನು ಭೇಟಿಯಾಗಿದ್ದಾರೆ.

ಮಂಗಳೂರು ಪಬ್​ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿ: ಶಾಸಕ ವೇದವ್ಯಾಸ ಕಾಮತ್​ ಗಮನ ಸೆಳೆದ ಬಜರಂಗದಳ ಕಾರ್ಯಕರ್ತರು
ಶಾಸಕ ವೇದವ್ಯಾಸ ಕಾಮತ್​
TV9kannada Web Team

| Edited By: Vivek Biradar

Jul 26, 2022 | 2:57 PM

ದಕ್ಷಿಣ ಕನ್ನಡ: ಮಂಗಳೂರು ಪಬ್​ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ತಡೆದಿರುವ ವಿಚಾರವಾಗಿ ವಿಎಚ್​​ಪಿ‌ ಮುಖಂಡರು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್​ರನ್ನು ಭೇಟಿಯಾಗಿದ್ದಾರೆ. ಕರ್ನಾಟಕ ದಕ್ಷಿಣ ಪ್ರಾಂತ ವಿಶ್ವಹಿಂದೂ ಪರಿಷತ್ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಸೇರಿದಂತೆ ಹಿಂದೂ ಮುಖಂಡರು ಭೇಟಿಯಾಗಿದ್ದು, ಘಟನೆ ಸಂಬಂಧ ಶಾಸಕ ವೇದವ್ಯಾಸ ಕಾಮತ್​ ಅವರಿಗೆ ಮುಖಂಡರು ವಿವರಣೆ ನೀಡುತ್ತಿದ್ದಾರೆ.

ಅವಧಿ ಮೀರಿ ಕಾರ್ಯನಿರ್ವಹಿಸುತ್ತಿರುವ ಪಬ್​ಗಳ ಮೇಲೆ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿದ್ದಾರೆ. ಡ್ರಗ್ ಧಂದೆ ಮತ್ತು ಕಾಲೇಜು ವಿದ್ಯಾರ್ಥಿಗಳ ‌ಮೇಲೆ ಕಣ್ಣಿಡಲು ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿ ಪೊಲೀಸ್ ಇಲಾಖೆ ಸೂಚನೆ ನೀಡುವುದಾಗಿ ಶಾಸಕ ಕಾಮತ್ ಭರವಸೆ ನೀಡಿದ್ದಾರೆ.

ಈ ಸಂಬಂಧ ಶಾಸಕ ವೇದವ್ಯಾಸ ಕಾಮತ್  ಮಾತನಾಡಿ ಪಬ್ ದಾಳಿ ಮಾಡುವ ಮನಸ್ಸು ಅವರಿಗೆ ಇರಲಿಲ್ಲ, ಅದನ್ನು ಸಂಘಟನೆ ‌ಮಾಡಿಲ್ಲ. ಪೊಲೀಸ್ ಇಲಾಖೆ ಮೂಲಕ ಅಪ್ರಾಪ್ತ ವಯಸ್ಸಿನವರಿಗೆ ಬುದ್ದಿ ಹೇಳಿದ್ದಾರೆ. ಸಂಘಟನೆಯವರು ಈ ಮೂಲಕ ಪೊಲೀಸ್ ಇಲಾಖೆ ಜೊತೆ ಹೋಗಿದ್ದಾರೆ. ವಿದ್ಯಾರ್ಥಿಗಳು ಯಾವತ್ತೂ ಮನೆಯವರ ಒಪ್ಪಿಗೆ ಜೊತೆ ಈ ಕೆಲಸ ಮಾಡಲ್ಲ‌ ಎಂದರು.

ಮನೆಯವರು ಸಂಘಟನೆಯವರ ಗಮನಕ್ಕೆ ಇಂಥದ್ದನ್ನ ತಂದಿದ್ದಾರೆ. ಹೀಗಾಗಿ ದುಷ್ಟಟಕ್ಕೆ ಬಲಿಯಾದಾಗ ವಿಎಚ್​​ಪಿ ಹೋಗಿ ಮನವಿ ಮಾಡಬೇಕೆಂದಿಲ್ಲ. ಆದರೆ ಜವಾಬ್ದಾರಿಯಿಂದ ವಿಎಚ್​​ಪಿಯವರು ಪೊಲೀಸರ ಮೂಲಕ ಹೋಗಿದ್ದಾರೆ‌. ಅವರು ದಾಳಿ ಮಾಡಬೇಕಿದ್ದಾರೆ ಪೊಲೀಸರಿಗೆ ಮುಂಚಿತವಾಗಿ ತಿಳಿಸ್ತಾ ಇರಲಿಲ್ಲ. ಲವ್ ಜಿಹಾದ್, ಡ್ರಗ್ ಚಟಕ್ಕೆ ಬಲಿಯಾಗೋ ವಾತಾವರಣ ಸೃಷ್ಟಿಯಾಗಬಾರದು ಎಂದು ಸೂಚನೆ ನೀಡಿದರು.

ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಬೇಕು, ಮನೆಯವರ ಕಷ್ಟ ಅರಿಯಬೇಕು‌. ಯಾವುದೇ ಕಾನೂನು ಬಾಹಿರ ಚಟುವಟಿಕೆ ಆದಾಗ ಕಮಿಷನರ್​  ಅವರಿಗೆ ತಿಳಿಸುತ್ತೇನೆ. ಅಪ್ರಾಪ್ತ ವಿದ್ಯಾರ್ಥಿಗಳ ಕಾನೂನು ಬಾಹಿರ ಚಟುವಟಿಕೆ ವಿರುದ್ದ ಪೊಲೀಸರ ಗಮನಕ್ಕೆ ತರ್ತೇನೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಅಮಲಿನಲ್ಲಿ ತೂರಾಡಿದ ವಿಡಿಯೋ ವೈರಲ್; ಎನ್ಎಸ್ ಯುಐ  ಪ್ರತಿಭಟನೆ

ಶಿವಮೊಗ್ಗ: ವಿದ್ಯಾರ್ಥಿಗಳು ಅಮಲಿನಲ್ಲಿ ತೂರಾಡಿದ ವಿಡಿಯೋ ವೈರಲ್ ವಿಚಾರವಾಗಿ ಶಿವಮೊಗ್ಗ ಎನ್ಎಸ್​​ಯುಐ ನೇತೃತ್ವದಲ್ಲಿ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ- ಕಾಲೇಜುಗಳ ಆವರಣದಲ್ಲಿ ಮಾದಕ ವಸ್ತು ಬಳಕೆ ಹೆಚ್ಚಳವಾಗುತ್ತಿದ್ದು, ಇದನ್ನು ನಿಯಂತ್ರಿಸಲು ರಾಜ್ಯ  ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ. ಮಾದಕ ವಸ್ತು ಮಾರಾಟ ಮತ್ತು ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿರುವ ಜೊತೆಗೆ ಗೃಹಸಚಿವರನ್ನು ಸಂಪುಟದಿಂದ ಕೈಬಿಡಲು ಎನ್​​ಎಸ್​ಯುಐ ಆಗ್ರಹಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada