ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ ಮಂಗಳೂರಿನ ಮಹಿಳೆ

ಈ ಹಿಂದೆಯೂ ಅವರು ಇಂತಹುದೇ ರೀತಿಯಲ್ಲಿ ಸಾಹಸದ ಮೂಲಕ ಪ್ರಾಣಿಪ್ರೇಮ ಮೆರೆದಿದ್ದರು.  80 ಅಡಿ ಪಾಳು ಬಾವಿಗೆ ಬಿದ್ದಿದ್ದ ನಾಯಿಯನ್ನು ರಜಿನಿ ಅವರು ರಕ್ಷಿಸಿದ್ದರು. 

ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ ಮಂಗಳೂರಿನ ಮಹಿಳೆ
ಬೆಕ್ಕಿನ ಮರಿಯನ್ನು ರಕ್ಷಿಸಿದ ಮಹಿಳೆ
Edited By:

Updated on: Aug 11, 2021 | 9:49 PM

ಮಂಗಳೂರು: ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯೊಂದನ್ನು ಪ್ರಾಣಿಪ್ರೇಮಿ ಮಂಗಳೂರಿನ ರಜಿನಿ ದಾಮೋದರ ಶೆಟ್ಟಿ ಎಂಬುವವರು ರಕ್ಷಿಸಿದ್ದಾರೆ. ಜೆಪ್ಪು ಬಳಿ ಸಂದೀಪ್ ಎಂಬುವರ ನೀರಿದ್ದ ಬಾವಿಗೆ ಬೆಕ್ಕಿನ ಮರಿ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರಿನ ಪ್ರಾಣಿಪ್ರೇಮಿ ರಜಿನಿ ದಾಮೋದರ ಶೆಟ್ಟಿ. ರಜಿನಿ ಅವರು ತನ್ನ ಪತಿಯೊಂದಿಗೆ ಬಂದು ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದು ಬೆಕ್ಕಿನ ಮರಿ ರಕ್ಷಣೆ ಮಾಡಿದರು.

ಅವರ ಪ್ರಾಣಿಪ್ರೇಮಕ್ಕೆ ಮಂಗಳೂರಿನ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ಮಂಗಳೂರಿನ ರಜಿನಿ ದಾಮೋದರ ಶೆಟ್ಟಿ ಅವರು ಈಗಾಗಲೇ ತಮ್ಮ ಪ್ರಾಣಿಪ್ರೇಮದಿಂದ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಈ ಹಿಂದೆಯೂ ಅವರು ಇಂತಹುದೇ ರೀತಿಯಲ್ಲಿ ಸಾಹಸದ ಮೂಲಕ ಪ್ರಾಣಿಪ್ರೇಮ ಮೆರೆದಿದ್ದರು.  80 ಅಡಿ ಪಾಳು ಬಾವಿಗೆ ಬಿದ್ದಿದ್ದ ನಾಯಿಯನ್ನು ರಜಿನಿ ಅವರು ರಕ್ಷಿಸಿದ್ದರು.

ರಜಿನಿ ದಾಮೋದರ ಶೇಟ್ಟಿ ಅವರ ಪ್ರಾಣಿಪ್ರೇಮಕ್ಕೆ ಮಂಗಳೂರು ಮತ್ತು ದಕ್ಷಿಣ ಕನ್ನಡ  ಜಿಲ್ಲೆಯಾದ್ಯಂತ ಅಪಾರ ಶ್ಲಾಘನೆ ವ್ಯಕ್ತವಾಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಅತ್ಯಂತ ಶ್ಲಾಘನೆ ವ್ಯಕ್ತವಾಗಿದೆ.

YouTube video player

ಇದನ್ನೂ ಓದಿ: 

ಎಸ್​ಎಸ್​ಎಲ್​ಸಿ ಪರೀಕ್ಷೆ ಹಿಂದಿನ ದಿನವೇ ಕೊವಿಡ್ ಖಚಿತ; ಅಂಜದೇ ಅಳುಕದೇ ಪರೀಕ್ಷೆ ಬರೆದ ವಿದ್ಯಾರ್ಥಿ ಇಂದು ಸಾಧಕ

ಕೊನೆ ಅರ್ಧ ಗಂಟೆ ಪರೀಕ್ಷೆ ಆಕ್ಸಿಜನ್ ಸಪೋರ್ಟ್ ಮೇಲಿದ್ದು ಬರೆದ ಈ ತಾಂಡಾ ಹುಡುಗಿ ಎಲ್ಲ 625 ಅಂಕ ಬಾಚಿಕೊಂಡಳು!

(Mangaluru animal lover woman rescued a cat well)

Published On - 11:00 pm, Mon, 9 August 21

TV9 Web

TV9 Kannada

Read More
Loading...
Unable to load recommendations.
Follow Us