AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಮು ದ್ವೇಷದ ಭಾಷಣ: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್​ಐಆರ್​​ ದಾಖಲು

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಮು ದ್ವೇಷ, ಮಹಿಳೆಯರ ಘನತೆಗೆ ಧಕ್ಕೆ ತರುವ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಹಿನ್ನೆಲೆ ಎಫ್​​ಐಆರ್​ ದಾಖಲಾಗಿದೆ. ಈಶ್ವರಿ ಪದ್ಮುಂಜ ಎಂಬುವರು ದೂರು ನೀಡಿದ್ದಾರೆ.

ಕೋಮು ದ್ವೇಷದ ಭಾಷಣ: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್​ಐಆರ್​​ ದಾಖಲು
ಕಲ್ಲಡ್ಕ ಪ್ರಭಾಕರ್ ಭಟ್
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Oct 26, 2025 | 3:17 PM

Share

ಮಂಗಳೂರು, ಅಕ್ಟೋಬರ್​ 26: ಕೋಮು ದ್ವೇಷದ ಬಗ್ಗೆ ಪ್ರಚೋದನಾಕಾರಿ ಭಾಷಣ ಆರೋಪ ಹಿನ್ನೆಲೆ ಆರ್​​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (kalladka prabhakar bhat) ವಿರುದ್ಧ ಎಫ್​ಐಆರ್ (FIR) ದಾಖಲಾಗಿದೆ. ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 79, 196, 290, 302, ಹಾಗೂ 3(5) ಕಲಂ ಅಡಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಪ್ರಭಾಕರ್​ ಭಟ್, ಧಾರ್ಮಿಕ ದ್ವೇಷ, ಮಹಿಳೆಯರ ಘನತೆಗೆ ಧಕ್ಕೆ ತರುವ ಭಾಷಣ ಮಾಡಿರುವುದಾಗಿ ಆರೋಪ ಕೇಳಿಬಂದಿದೆ.

ಎಫ್​ಐಆರ್​​ನಲ್ಲಿ ಏನಿದೆ?

ಆರ್​​ಎಸ್​​ಎಸ್​​ ಪ್ರತಿನಿಧಿಯಾದ ಪ್ರಭಾಕರ ಭಟ್ ಅವರು ಆಡಿರುವ ಮಾತುಗಳು ಖಾಸಗಿ ನ್ಯೂಸ್ ಯೂಟ್ಯೂಬ್ ಚಾನೆಲ್​​​ನಲ್ಲಿ ಪ್ರಸಾರವಾಗಿದೆ. ಈ ರೀತಿ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ BNS 299 ಪ್ರಕಾರ ಅಪರಾಧವಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್​ನಲ್ಲಿ ಮಹತ್ವದ ಬೆಳವಣಿಗೆ: ಷಡ್ಯಂತ್ರದ ವಿಚಾರಣೆಗೆ ತಿಮರೋಡಿ ಸೇರಿ ನಾಲ್ವರಿಗೆ ನೋಟಿಸ್

ಪ್ರಭಾಕರ ಭಟ್ ಅವರು ಈ ಹಿಂದೆಯೂ ಹಲವು ಬಾರಿ ಧರ್ಮಧರ್ಮಗಳನ್ನು ಎತ್ತಿಕಟ್ಟುವ ಕೋಮುಗಲಭೆ ಮಾಡಿಸುವ ಕೃತ್ಯಗಳನ್ನು ನಡೆಸಿದ್ದಾರೆ. ಇದು ತಿಳಿದು ಕೂಡ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮಕ್ಕೆ ಪ್ರಭಾಕರ ಭಟ್ಟರನ್ನು ಭಾಷಣ ಮಾಡಲು ಕರೆಯುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಕರೆದು ಒಂದು ವರ್ಗದ ಜನರ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಅಥವಾ ಆ ಕೃತ್ಯವನ್ನು ಅವಮಾನ ಮಾಡಲೆಂದೇ ಬಗೆದು, ಧಾರ್ಮಿಕ ಸ್ಥಳವನ್ನು ಅಪವಿತ್ರ ಮಾಡುವ ಕೃತ್ಯವನ್ನು BNS 298 ರಂತೆ ಕಾರ್ಯಕ್ರಮದ ಆಯೋಜಕರು ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟರು ಜಂಟಿಯಾಗಿ ಮಾಡಿದ್ದಾರೆ.

ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಉದ್ದೇಶದಿಂದ ಪದಗಳನ್ನು ಉಚ್ಚರಿಸುವುದು ಅಥವಾ ಸನ್ನೆಗಳನ್ನು ಮಾಡುವ ಕೃತ್ಯವನ್ನು ಪ್ರಭಾಕರ ಭಟ್ ಮಾಡುವ ಮೂಲಕ BNS 302 ಪ್ರಕಾರ ಕೃತ್ಯವೆಸಗಿದ್ದಾರೆ. ಆದ್ದರಿಂದ ಈ ರೀತಿಯ ದ್ವೇಷಭಾಷಣಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಆರ್​​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​ ಹೇಳಿದ್ದೇನು?

‘ಆಚೆ ಮನೆಯಲ್ಲಿ ಒಬ್ಬಳು ಬ್ಯಾರ್ದಿ ಇದ್ದಳು. ಅವಳು 6 ನೆಯದ್ದು ಆಗಿ 7ನೇ ಗರ್ಭಿಣಿಯಾಗಿದ್ದಳು. ಅವಳಿಗೆ ಯಾರಾದ್ರು ಕೇಳಿದ್ರಾ? ನೀನು ನಾಯಿ ಮರಿ ಹಾಕಿದ ಹಾಗೆ ಹಾಕ್ತಾ ಇದ್ದೀಯಾ ಅಂತ ಕೇಳಿದ್ರಾ? ಕೇಳುವ ‘ಧೈರ್ಯವೂ ಇಲ್ಲ. ಎರಡನೇಯದಾಗಿ ಅವರು ಹೇಳ್ತಾರೆ, ಅದು ಅಲ್ಲಾಹನಿಗೋಸ್ಕರ. ನಮ್ಮ ಮಕ್ಕಳು ಅಲ್ಲಾಹನಿಗೋಸ್ಕರ ಅನ್ನುತ್ತಾರೆ. ನೀವೇನಾದರೂ ಮಹಾಲಿಂಗೇಶ್ವರನಿಗಾಗಿ ಮಕ್ಕಳು ಮಾಡ್ತೀರಾ? ನಮ್ಮ ಜನಸಂಖ್ಯೆ ಜಾಸ್ತಿಯಾಗಬೇಕು’.

ಇದನ್ನೂ ಓದಿ: ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್: ಗಡಿಪಾರಿನಿಂದ ಮಹೇಶ್ ಶೆಟ್ಟಿ ತಿಮರೋಡಿ ಪಾರು!

‘ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲ ಅಂತ ಏನು ಹೇಳ್ತಿವಿ ಅಲ್ಲಿ ಹಿಂದೂ ಗೆಲ್ಲಲು ಸಾಧ್ಯವೇ ಇಲ್ಲ. ಅಲ್ಲಿ ಖಾದರೇ ಗೆಲ್ಲೋದು. ಯಾಕೆಂದರೆ ಒಂದು ಲಕ್ಷದ ಹತ್ತು ಸಾವಿರ ಬ್ಯಾರಿಗಳದ್ದೇ ಓಟು ಇದೆ. ಹಿಂದೂಗಳು 90 ಸಾವಿರ ಇರೋದು. ಗೆಲ್ಲೊದು ಯಾವಾಗ? ಅದು ಎಲ್ಲಾ ಕಡೆಗೂ ಹತ್ತಿರ ಹತ್ತಿರ ಬರ್ತಾ ಉಂಟು. ನಾವು ಗೆಲ್ತೇವಾ? ಗೆಲ್ಲಲು ಸಾಧ್ಯವೇ ಇಲ್ಲ. ನಮ್ಮನ್ನು ಸರ್ವನಾಶ ಮಾಡ್ತಾರೆ. ಹಾಗಾಗಿ ನಮ್ಮ ಮನೆಯಲ್ಲಿ 3 ಕ್ಕಿಂತ ಕಡಿಮೆ ಮಕ್ಕಳು ಇರಬಾರದು’ ಎಂದು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ