ತಕ್ಷಣ ಜಾಗ ಖಾಲಿ ಮಾಡುವಂತೆ ಈ ಕಡೆಯಿಂದ ಬೀದಿ ವ್ಯಾಪಾರಿಗಳಿಗೆ ಕೇಳಿದರು, ಮತ್ತೊಂದು ದಿಕ್ಕಿನಿಂದ ಅವರ ಮೇಲೆ ನೀರು ಸಿಂಪಡಿಸುತ್ತಾ ಬಂದರು!

Mangaluru footpath Vendors: ಬೀದಿಬದಿ ವ್ಯಾಪಾರಿಗಳ ಕಾಯ್ದೆಯಡಿ ಅವರಿಗೆ ರಕ್ಷಣೆ ನೀಡುವ ಬದಲು ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳನ್ನು ಖಾಲಿ ಮಾಡುವಂತೆ ನೀರು ಎರಚಿರುವುದು ಅಮಾನವೀಯ ಕೃತ್ಯವಾಗಿದೆ. ಎಂಸಿಸಿಯ ಟೌನ್ ವೆಂಡಿಂಗ್ ಕಮಿಟಿಗೆ ತಿಳಿಯದೆ ದಾಳಿ ನಡೆಸುವುದು ಸಹ ಉಲ್ಲಂಘನೆಯಾಗಿದೆ.

ತಕ್ಷಣ ಜಾಗ ಖಾಲಿ ಮಾಡುವಂತೆ ಈ ಕಡೆಯಿಂದ ಬೀದಿ ವ್ಯಾಪಾರಿಗಳಿಗೆ ಕೇಳಿದರು, ಮತ್ತೊಂದು ದಿಕ್ಕಿನಿಂದ ಅವರ ಮೇಲೆ ನೀರು ಸಿಂಪಡಿಸುತ್ತಾ ಬಂದರು!
ಮಂಗಳೂರು: ಜಾಗ ಖಾಲಿ ಮಾಡುವಂತೆ ಬೀದಿ ವ್ಯಾಪಾರಿಗಳ ಮೇಲೆ ನೀರು ಸಿಂಪಡಿಸಿದರು! Image Credit source: timesofindiadotcom
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 17, 2023 | 11:09 AM

ಮಂಗಳೂರು: ಇಲ್ಲಿನ ಕುದ್ಮುಲ್ ರಂಗರಾವ್ ಟೌನ್ ಹಾಲ್ ಬಳಿ ಬೀದಿಬದಿ ವ್ಯಾಪಾರಿಗಳು (footpath vendors) ಹಾಗೂ ಅವರು ಮಾರಾಟ ಮಾಡುತ್ತಿದ್ದ ಉತ್ಪನ್ನಗಳ ಮೇಲೆ ನೀರು ಎರಚುತ್ತಿರುವ ವಿಡಿಯೋ ಸದ್ಯಕ್ಕೆ ವೈರಲ್ ಆಗಿದೆ. ಬೀದಿಬದಿ ವ್ಯಾಪಾರಕ್ಕೆ ಹಾಕಿಕೊಂಡಿರುವ ಜಾಗಗಳನ್ನು ಖಾಲಿ ಮಾಡುವಂತೆ ಮಾಡುವ ಪ್ರಯತ್ನ ಇದಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ Mangaluru City Corporation -MCC) ಮತ್ತು ಪೊಲೀಸರು ನಿನ್ನೆ ಭಾನುವಾರ ಫುಟ್‌ಪಾತ್ ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸಿದ ವೇಳೆ ಅಧಿಕಾರಿಗಳಿಂದ ಈ ಅಮಾನವೀಯ ನಡೆ ಕಂಡುಬಂದಿದೆ. ಫುಟ್‌ಪಾತ್‌ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಾಗ, ಮಂಗಳೂರು (Mangaluru) ಟೌನ್‌ಹಾಲ್‌ನ (town hall) ಒಳಗಿನಿಂದ ಬೀದಿಬದಿ ಅಂಗಡಿಗಳ ಕಡೆಗೆ ನೀರು ಎರಚಲಾಯಿತು, ಇದರಿಂದ ಪ್ರದೇಶದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ (Dakshina Kannada District Street Vendors Welfare Association) ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಬಡ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು. ಬಡ ಫುಟ್ ಪಾತ್ ವ್ಯಾಪಾರಿಗಳು ಜೀವನೋಪಾಯಕ್ಕಾಗಿ ಭಾನುವಾರದಂದು ಟೌನ್ ಹಾಲ್ ಹಾಗೂ ಮೈದಾನದ ರಸ್ತೆಗಳ ಬಳಿ ಬಟ್ಟೆ, ತರಕಾರಿ, ಹಣ್ಣು ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾರೆ ಎಂದು timesofindiadotcom ವರದಿ ಮಾಡಿದೆ.

ಬೀದಿಬದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿಬದಿ ವ್ಯಾಪಾರ ನಿಯಂತ್ರಣ) ಕಾಯ್ದೆಯಡಿ ಅವರಿಗೆ ರಕ್ಷಣೆ ನೀಡುವ ಬದಲು ಅಧಿಕಾರಿಗಳು ಮಾರಾಟ ಮಾಡುವ ಮಾಲನ್ನು ವಶಪಡಿಸಿಕೊಳ್ಳುವ ಮೂಲಕ ತೊಂದರೆ ನೀಡುತ್ತಿದ್ದಾರೆ. ಎಂಸಿಸಿಯ ಟೌನ್ ವೆಂಡಿಂಗ್ ಕಮಿಟಿಗೆ ತಿಳಿಯದೆ ದಾಳಿ ನಡೆಸುವುದು ಸಹ ಉಲ್ಲಂಘನೆಯಾಗಿದೆ. ಮೇಲಾಗಿ ಬೀದಿಬದಿ ವ್ಯಾಪಾರಿಗಳನ್ನು ಖಾಲಿ ಮಾಡುವಂತೆ ನೀರು ಎರಚಿರುವುದು ಅಮಾನವೀಯ ಕೃತ್ಯವಾಗಿದೆ ಎಂದರು.

MCC ಬೀದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿಗಳನ್ನು ನೀಡಬೇಕು. ಇದಲ್ಲದೆ, ಬೀದಿ ವ್ಯಾಪಾರಿಗಳಿಗೆ ನಗರದಲ್ಲಿ ವ್ಯಾಪಾರ ನಡೆಸಲು ನೀತಿಗಳನ್ನು ರೂಪಿಸಬೇಕು, ವಾರದ ಮಾರುಕಟ್ಟೆಗಳು ಮತ್ತು ಹಬ್ಬದ ಮೈದಾನಗಳು ಸೃಷ್ಟಿಸಿಕೊಡಬೇಕು ಎಂದು ಅವರು ಹೇಳಿದರು.

ಇದೇ ವೇಳೆ ಟೌನ್ ಹಾಲ್ ಬಳಿಯ ಫುಟ್ ಪಾತ್ ತೆರವಿಗೆ ಚಾಲನೆ ನೀಡಲಾಗುತ್ತಿದ್ದು, ಮಾರಾಟಗಾರರು ಕಸ ಎಸೆದು ವಿರೂಪಗೊಳಿಸುತ್ತಿದ್ದಾರೆ ಎಂದು ಎಂಸಿಸಿ ಆಯುಕ್ತರು ತಿಳಿಸಿದರು. ಟೌನ್ ಹಾಲ್ ಬಳಿ ಭಾನುವಾರ ಫುಟ್ ಪಾತ್ ವ್ಯಾಪಾರಿಗಳು ವ್ಯಾಪಾರ ನಡೆಸುವ ಸ್ಥಳಗಳನ್ನು ಸ್ವಚ್ಛಗೊಳಿಸಲು ಎಂಸಿಸಿ ಕಾರ್ಯಕರ್ತರು ಕನಿಷ್ಠ ಎರಡು ದಿನ ಬೇಕು. ಇಡೀ ಜಾಗವನ್ನು ಆಕ್ರಮಿಸಿ ಕಸ ಹಾಕುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ