Mangaluru Literature Festival: ಫೆಬ್ರವರಿ 18-19ರಂದು ಮಂಗಳೂರಿನಲ್ಲಿ ‘ಐಡಿಯಾ ಆಫ್‌ ಭಾರತ್‌’ ಲಿಟ್ ಫೆಸ್ಟ್

ಭಾರತ್ ಫೌಂಡೇಶನ್ ಆಯೋಜಿಸಿರುವ ಲಿಟ್ ಫೆಸ್ಟ್ ದಿ ಐಡಿಯಾ ಆಫ್‌ ಭಾರತ್‌ ಎಂಬ ವಿಷಯದೊಂದಿಗೆ 25 ಸೆಮಿನಾರ್‌ಗಳೊಂದಿಗೆ ನಡೆಯಲಿದೆ.

Mangaluru Literature Festival: ಫೆಬ್ರವರಿ 18-19ರಂದು ಮಂಗಳೂರಿನಲ್ಲಿ  ‘ಐಡಿಯಾ ಆಫ್‌ ಭಾರತ್‌’ ಲಿಟ್ ಫೆಸ್ಟ್
ಮಂಗಳೂರು ಲಿಟ್‌ ಫೆಸ್ಟ್‌
Follow us
TV9 Web
| Updated By: ಆಯೇಷಾ ಬಾನು

Updated on:Feb 15, 2023 | 11:34 AM

ಮಂಗಳೂರು : ಫೆಬ್ರವರಿ 18ರ ಶನಿವಾರ ಮತ್ತು 19ರ ಭಾನುವಾರದಂದು ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಮಂಗಳೂರು ಲಿಟ್‌ ಫೆಸ್ಟ್‌ನ ಐದನೇ ಆವೃತ್ತಿಯು ದಿ ಐಡಿಯಾ ಆಫ್‌ ಭಾರತ್‌ ಪರಿಕಲ್ಪನೆಯಲ್ಲಿ ನಡೆಯಲಿದೆ. ಭಾರತ್ ಫೌಂಡೇಶನ್ ಆಯೋಜಿಸಿರುವ ಲಿಟ್ ಫೆಸ್ಟ್ ದಿ ಐಡಿಯಾ ಆಫ್‌ ಭಾರತ್‌ ಎಂಬ ವಿಷಯದೊಂದಿಗೆ 25 ಸೆಮಿನಾರ್‌ಗಳೊಂದಿಗೆ ನಡೆಯಲಿದೆ.

ಎರಡು ದಿನಗಳ ಈ ಸಾಹಿತ್ಯೋತ್ಸವದಲ್ಲಿ 55ಕ್ಕೂ ಹೆಚ್ಚು ವಾಗ್ಮಿಗಳು ವಿವಿಧ ವಿಷಯಗಳ ಕುರಿತು ಭಾಷಣ ಮಾಡಲಿದ್ದಾರೆ. ಇದರಲ್ಲಿ 55 ಕ್ಕೂ ಅಧಿಕ ವಾಗ್ಮಿಗಳು ಭಾಗವಹಿಸಲಿದ್ದಾರೆ. ಪ್ರತಿ ಸೆಷನ್‌ನ ಕೊನೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ರಸ ಪ್ರಶ್ನೆ ಆಯೋಜಿಸಲಾಗುವುದು. ವಿಜೇತರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಪ್ರತಿಷ್ಠಾನದ ಟ್ರಸ್ಟಿ ಸುನೀಲ್ ಕುಲಕರ್ಣಿ ತಿಳಿಸಿದರು.

ಇದನ್ನೂ ಓದಿ:  KG Halli: ಕಾಲೇಜ್ ಫೆಸ್ಟ್ ವೇಳೆ ಬೆಂಗಳೂರಲ್ಲಿ ಕಾಲೇಜು ಯುವಕನ ಕೊಲೆ

ಲಿಟ್‌ ಫೆಸ್ಟ್‌ನಲ್ಲಿ 2 ಸಾಕ್ಷ್ಯಚಿತ್ರಗಳ ಪ್ರದರ್ಶನ ಜರುಗಲಿದೆ. ಅಲ್ಲದೇ 16 ಪುಸ್ತಕ ಮಳಿಗೆಗಳು ಇರಲಿವೆ. ರಾಣಿ ಅಬ್ಬ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ ಪೂಜಾರಿ ಅವರಿಗೆ ಈ ಬಾರಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪುಸ್ತಕ ಮಳಿಗೆ, ತುಳು ಲಿಪಿ ಕಲಿಕಾ ಕಾರ್ಯಾಗಾರ, ಮಕ್ಕಳ ಸಾಹಿತ್ಯ ಕುರಿತು ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಲೇಖಕರೊಂದಿಗೆ ಸಂವಾದ ಇರಲಿದೆ. ಉದ್ಘಾಟನೆಯು ದಿ ಐಡಿಯಾ ಆಫ್‌ ಭಾರತ್‌ ಇನ್‌ ಅಮೃತಕಾಲ್‌ ರಿಕ್ಲೈಮಿಂಗ್‌ ದಿ ರೈಟ್‌ ಪಾತ್‌ ದಿ ವೇ ಫಾರ್ವರ್ಡ್‌ ಪರಿಕಲ್ಪನೆಯಲ್ಲಿ ಜರುಗಲಿದೆ. ಆರ್‌. ಜಗ್ನನಾಥ್‌, ವಿನಯ್‌ ಹೆಗ್ಡೆ, ವಿ. ನಾಗರಾಜ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

‘ಹರಟೆ ಕಟ್ಟೆ’ ಕಾರ್ಯಕ್ರಮವು ಸಾಹಿತಿಗಳೊಂದಿಗೆ ಸಂವಾದಕ್ಕೆ ವೇದಿಕೆ ಕಲ್ಪಿಸಲಿದೆ. ಲಿಟ್ ಫೆಸ್ಟ್‌ನ ಅಂಗವಾಗಿ ನಟರಾದ ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ ಮತ್ತು ಇತರರಿಂದ ಅಧಿವೇಶನ ನಡೆಯಲಿದೆ. ವಿವಿಧ ಸೆಷನ್‌ಗಳಲ್ಲಿ ‘ಸಂಸ್ಕೃತಿ, ವ್ಯಂಗ್ಯಚಿತ್ರ ಮತ್ತು ಸೃಜನಶೀಲತೆ,’ ‘ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ,’ ‘ಮಾಧ್ಯಮ ಕ್ಷೇತ್ರವನ್ನು ಬದಲಾಯಿಸುವುದು,’ ‘ಭಾರತ-ಹಿಂದುತ್ವದ ಕಲ್ಪನೆ, ಧರ್ಮ ಮತ್ತು ಮುಂದಿನ ದಾರಿ,’ ‘ಮರಾಠ ನೌಕಾ ಪಡೆಗಳ ಹೆಮ್ಮೆಯ ಕಥೆ,’ ‘ನಾಯಕತ್ವಕ್ಕೆ ಸಜ್ಜಿತ -ಭಾರತದ ಮುಂದಿರುವ ದಾರಿ,’ ‘ಭಾರತದ ಮೇಲೆ ಜಾಗತಿಕ ನಿರೂಪಣೆಯ ಅಗತ್ಯತೆ,’ ‘ಯಕ್ಷಗಾನ- ಹೊಸ ಮಜಲುಗಳು,’ ‘ಯೋಧರ ಕಥೆಗಳು,’ ‘ಸಿನಿಮಾ ಮತ್ತು ಸಂಸ್ಕೃತಿ- ಸ್ಥಳೀಯವು ಸಾರ್ವತ್ರಿಕವಾದಾಗ,’ದ ಬಗ್ಗೆ ಸಂವಾದ ನಡೆಯಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:09 am, Wed, 15 February 23