ಹೆಂಡತಿ, ಮಕ್ಕಳಿದ್ದರೂ ಮದರಸಾ ವಿದ್ಯಾರ್ಥಿನಿಯನ್ನೇ ಮದುವೆಯಾದ 40ರ ಹರೆಯದ ಮುಸ್ಲಿಂ ಧರ್ಮಗುರು!

ಉತ್ತರ ಕನ್ನಡ ಜಿಲ್ಲೆಯ ಕುಮಟಾದ 22 ವರ್ಷದ ಯುವತಿಯನ್ನು ಮದುವೆಯಾದ ಮಂಗಳೂರಿನ 40 ವರ್ಷದ ಧರ್ಮಗುರು ವಿರುದ್ಧ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮೊದಲ ಹೆಂಡತಿ ಹಾಗೂ ಮಕ್ಕಳಿರುವ ವಿಚಾರ ಮುಚ್ಚಿಟ್ಟು ಪ್ರೀತಿಯ ಹೆಸರಲ್ಲಿ ಮೈಂಡ್ ವಾಶ್ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಕೊಣಾಜೆ ಠಾಣೆಯಲ್ಲಿ ಪೋಷಕರನ್ನು ಬಿಟ್ಟು ಯುವತಿ ಮೌಲ್ವಿ ಜೊತೆ ತೆರಳಿದ್ದಾಳೆ.

ಹೆಂಡತಿ, ಮಕ್ಕಳಿದ್ದರೂ ಮದರಸಾ ವಿದ್ಯಾರ್ಥಿನಿಯನ್ನೇ ಮದುವೆಯಾದ 40ರ ಹರೆಯದ ಮುಸ್ಲಿಂ ಧರ್ಮಗುರು!
ಧರ್ಮಗುರು ಅಶ್ರಫ್ 'ಸ' ಅದಿ
Edited By:

Updated on: Oct 30, 2026 | 8:13 AM

ಮುಖ್ಯಾಂಶಗಳು

  • ಮದರಸಾ ಯುವತಿಯನ್ನು ಮದುವೆಯಾದ ವಿವಾಹಿತ ಧರ್ಮಗುರು ವಿರುದ್ಧ ಗಂಭೀರ ಆರೋಪ.
  • ಕೊಣಾಜೆ ಠಾಣೆಯಲ್ಲಿ ಪೋಷಕರನ್ನು ನಿರಾಕರಿಸಿ ಮೌಲ್ವಿ ಜೊತೆ ತೆರಳಿದ ಯುವತಿ.
  • ನಿಯಮ ಮೀರಿ ನಡೆದುಕೊಂಡ ಧರ್ಮಗುರುವಿನ ಕಾರ್ಯಕ್ರಮ ಬಹಿಷ್ಕರಿಸಲು ಮುಸ್ಲಿಂ ಸಮುದಾಯ ನಿರ್ಧಾರ.

ಮಂಗಳೂರು, ಅಕ್ಟೋಬರ್ 30: ಧಾರ್ಮಿಕ ಪ್ರವಚನ ನೀಡುತ್ತಾ ಸನ್ಮಾರ್ಗದ ಪಾಠ ಹೇಳಿಕೊಡಬೇಕಾದ ಮುಸ್ಲಿಂ ಧರ್ಮಗುರುವೊಬ್ಬ, ತನ್ನಲ್ಲೇ ಶಿಕ್ಷಣ ಪಡೆಯುತ್ತಿದ್ದ ಯುವತಿಯನ್ನು ಪ್ರೀತಿಸಿ, ಮೊದಲ ಮದುವೆಯ ವಿಚಾರ ಮುಚ್ಚಿಟ್ಟು ಎರಡನೇ ಮದುವೆಯಾಗಿರುವ ವಿವಾದಾತ್ಮಕ ಘಟನೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಮದ್ರಸಾ ಪಾಠದ ಹೆಸರಲ್ಲಿ ಪ್ರೇಮ ಪಯಣ: ಪೋಷಕರ ಕಣ್ಣೀರು!

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬೆಟಗುಳಿಯ ದಾವುದ್ ಖಾಸಿಂ ಎಂಬುವರ 22 ವರ್ಷದ ಪುತ್ರಿ ಮಗದುಮ್ಮ ಹಾಗೂ ಮಂಗಳೂರಿನ ಅಸೈಗೋಳಿ ನಿವಾಸಿ, 40 ವರ್ಷದ ಧರ್ಮಗುರು ಅಶ್ರಫ್ ‘ಸ’ ಅದಿ ನಡುವೆ ಈ ಪ್ರೇಮ ಪ್ರಸಂಗ ನಡೆದಿದೆ. ಅಶ್ರಫ್ ಸ ಅದಿ ಹಿಂದೆ ಕುಮಟಾದ ಮದ್ರಸಾದಲ್ಲಿ ಧರ್ಮಗುರುವಾಗಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಧಾರ್ಮಿಕ ಶಿಕ್ಷಣಕ್ಕೆ ಬರುತ್ತಿದ್ದ ಮಗದುಮ್ಮ ಜೊತೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಬಳಿಕ ಕುಮಟಾ ತೊರೆದು ಮುಂಬೈಗೆ ತೆರಳಿದ್ದ ಈತ, ಇತ್ತೀಚೆಗೆ ಅಕ್ಟೋಬರ್ 22 ರಂದು ಕುಮಟಾಗೆ ವಾಪಸಾಗಿ ಯುವತಿಯನ್ನು ಮಂಗಳೂರಿಗೆ ಕರೆತಂದಿದ್ದಾನೆ. ಅಲ್ಲದೆ, ಆಕೆಯೊಂದಿಗೆ ನಿಖಾ (ಮದುವೆ) ಮಾಡಿಕೊಂಡು ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಿಕೊಂಡಿದ್ದಾನೆ. ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಹುಡುಕಿಕೊಂಡು ಮಂಗಳೂರಿಗೆ ಆಗಮಿಸಿ, ಕೊಣಾಜೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಠಾಣೆಯಲ್ಲೇ ಪೋಷಕರನ್ನು ನಿರಾಕರಿಸಿದ ಯುವತಿ!

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೊಣಾಜೆ ಪೊಲೀಸರು ಧರ್ಮಗುರು ಹಾಗೂ ಯುವತಿ ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೋಷಕರು ತಮ್ಮ ಮಗಳ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ, ಆಕೆ ಪೋಷಕರ ಜೊತೆ ವಾಪಸ್ ಹೋಗಲು ಸಂಪೂರ್ಣವಾಗಿ ನಿರಾಕರಿಸಿದ್ದಾಳೆ. ತಾನು ವಯಸ್ಕಳಾಗಿದ್ದು, ಧರ್ಮಗುರು ಜೊತೆಯೇ ಜೀವಿಸುವುದಾಗಿ ಪೊಲೀಸರ ಮುಂದೆ ಖಡಕ್ ಆಗಿ ಹೇಳಿಕೆ ನೀಡಿದ್ದಾಳೆ. ಕಣ್ಣೆದುರೇ ಮಗಳು ಧರ್ಮಗುರುವಿನ ಜೊತೆ ಹೋಗುವುದನ್ನು ಕಂಡ ಪೋಷಕರು ಠಾಣೆಯ ಆವರಣದಲ್ಲೇ ಕಣ್ಣೀರಿಟ್ಟು ಅಸಹಾಯಕರಾಗಿ ನಿಂತಿದ್ದಾರೆ.

ಇದನ್ನೂ ಓದಿ ಸೌಜನ್ಯ-ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ!: ತನಿಖೆ ನಡೆಸುವಂತೆ ಎಸ್​​ಐಟಿಗೆ ದೂರು ಸಲ್ಲಿಕೆ

ಧರ್ಮಗುರುವಿನ ನಡೆಗೆ ಮುಸ್ಲಿಂ ಸಮುದಾಯದ ಆಕ್ರೋಶ

ಆರೋಪಿ ಅಶ್ರಫ್ ‘ಸ’ ಅದಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ, ಈ ವಿಚಾರವನ್ನು ಮುಚ್ಚಿಟ್ಟು ಯುವತಿಯ ಮೈಂಡ್ ವಾಶ್ ಮಾಡಿ ಮದುವೆಯಾಗಿದ್ದಾನೆ ಎಂಬುದು ಪೋಷಕರ ಗಂಭೀರ ಆರೋಪವಾಗಿದೆ. ಈ ಘಟನೆ ಸ್ವತಃ ಮುಸ್ಲಿಂ ಸಮುದಾಯದಲ್ಲೇ ತೀವ್ರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಧರ್ಮದ ಹಾದಿ ತೋರಿಸಬೇಕಾದ ಮೌಲ್ವಿಯೇ ಈ ರೀತಿ ಅಧರ್ಮದ ಕೆಲಸ ಎಸಗಿದ್ದಾನೆ ಎಂದು ಕಿಡಿಕಾರಿರುವ ಸಮುದಾಯದ ಮುಖಂಡರು, ಈ ಧರ್ಮಗುರುವಿನ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇನ್ನು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅಶ್ರಫ್, ಯುವತಿಯೊಂದಿಗೆ ತೆರಳಿದ್ದು, ಮಗಳಿಲ್ಲದೆ ಕುಟುಂಬಸ್ಥರು ಅಕ್ಷರಶಃ ಕಂಗಾಲಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us