ವಿಮಾನದಲ್ಲಿ ಬಂದು ಕಳ್ಳತನ: ಮಂಗಳೂರು ರೈಲ್ವೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಹೈಟೆಕ್‌ ದರೋಡೆಕೋರರು

ವಿಮಾನದಲ್ಲಿ ಬಂದು ರೈಲಿನಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡಿ ವಾಪಸ್​ ಫ್ಲೈಟ್​ನಲ್ಲೇ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹೈಟೆಕ್​ ಖದೀಮರು ಮಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಒಂದು ಕಳ್ಳತನ ಪ್ರಕರಣದಲ್ಲಿ ರೈಲಿನಲ್ಲಿ ಅನುಮಾನದ ಮೇರೆಗೆ ಇಬ್ಬರು ಯುವಕರನ್ನು ಮಂಗಳೂರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಹೈಟೆಕ್​ ಕಳ್ಳರ ಕರಾಮತ್ತು ಬಟಾಬಯಲಾಗಿದೆ.

ವಿಮಾನದಲ್ಲಿ ಬಂದು ಕಳ್ಳತನ:  ಮಂಗಳೂರು ರೈಲ್ವೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಹೈಟೆಕ್‌ ದರೋಡೆಕೋರರು
ಬಂಧಿತ ಆರೋಪಿಗಳು
Edited By:

Updated on: Oct 05, 2023 | 12:53 PM

ಮಂಗಳೂರು, (ಅಕ್ಟೋಬರ್ 05): ವಿಮಾನದಲ್ಲಿ (Flight) ಬಂದು ರೈಲಿನಲ್ಲಿ ಪ್ರಯಾಣಿಕರ (Train Passengers)  ಹಣ, ಚಿನ್ನ ಕದ್ದು ವಾಪಸ್​ ವಿಮಾನದಲ್ಲೇ ಪರಾರಿಯಾಗುತ್ತಿದ್ದ ಅಂತಾರಾಜ್ಯ ಹೈಟೆಕ್‌ ದರೋಡೆಕೋರರು ಕೊನೆಗೂ ಮಂಗಳೂರು ರೈಲ್ವೆ ಪೊಲೀಸರ (Mangaluru Railway Police) ಬಲೆಗೆ ಬಿದ್ದಿದ್ದಾರೆ. ಯುಪಿ ಮೂಲದ ಅಭಯರಾಜ್ (26), ಹರಿಶಂಕರ್ ಗಿರಿ(25) ಬಂಧತ ಖದೀಮರು. ಸೆಪ್ಟೆಂಬರ್ 28ರಂದು ಮಂಗಳೂರು-ಸುರತ್ಕಲ್ ಮಾರ್ಗದ ರೈಲಿನಲ್ಲಿ ನಡೆದಿದ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಮೇಲೆ ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಹೈಟೆಕ್‌ ಕಳ್ಳತನದ ದಂಧೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಳ್ಳತನ ಮಾಡಿದ ಭಯದಲ್ಲಿ ಸಿಗ್ನಲ್​ ಜಂಪ್​ ಮಾಡಿ ಹೋದರು: ಟ್ರಾಫಿಕ್ ಫೈನ್​​ ಕೊಟ್ಟ ಸುಳಿವಿನ ಮೇಲೆ ಸಿಕ್ಕರು

ಸೆಪ್ಟೆಂಬರ್ 28ರಂದು ಮಂಗಳೂರು- ಸುರತ್ಕಲ್ ಮಧ್ಯೆ ರೈಲಿನಲ್ಲಿ ಪ್ರಯಾಣಿಕರ ಸುಲಿಗೆ ನಡೆದಿತ್ತು. ಬಳಿಕ ಮಂಗಳೂರು ರೈಲ್ವೆ ಪೊಲೀಸರು, ಸಂಶಯದಿಂದ ರೈಲಿನಲ್ಲಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ಕೃತ್ಯ ಬಟಾಬಯಲಾಗಿದೆ. ರಾತ್ರಿ ವೇಳೆ ಕೊಂಕಣ ರೈಲ್ವೇಯಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಅಲ್ಲದೇ ಕೇರಳ, ಕರ್ನಾಟಕದ ರೈಲಿನಲ್ಲಿ ಪ್ರಯಾಣಿಕರ ಚಿನ್ನ ಕದ್ದು ವಿಮಾನದಲ್ಲಿ ಪರಾರಿಯಾಗುತ್ತಿದ್ದರು. ಸದ್ಯ ಇದೀಗ ಹೈಟೆಕ್ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದು, ಆರೋಪಿಗಳಿಂದ ಒಟ್ಟು 125 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯವರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಮಂಗಳೂರು ರೈಲ್ವೆ ಪೊಲಿಸರು ಇನ್ನಷ್ಟು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us