AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rat poison: ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಆಸ್ಪತ್ರೆಯಲ್ಲಿ ಸಾವು

ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಈ ಘಟನೆ ನಡೆದಿದೆ.

Rat poison: ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಆಸ್ಪತ್ರೆಯಲ್ಲಿ ಸಾವು
ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಆಸ್ಪತ್ರೆಯಲ್ಲಿ ಸಾವು
TV9 Web
| Updated By: ಸಾಧು ಶ್ರೀನಾಥ್​|

Updated on:Feb 28, 2022 | 10:59 AM

Share

ಮಂಗಳೂರು: ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ (rat poison) ಹಲ್ಲುಜ್ಜಿದ ಯುವತಿ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಶ್ರಾವ್ಯ ಮೃತ ಯುವತಿ. ಮನೆಯ ಬಾತ್ ರೂಂ ನ ಕಿಟಕಿ ಬಳಿ ಯಾವಾಗಲೂ ಟೂಥ್ ಪೇಸ್ಟ್ ಇಡುತ್ತಿದ್ದರು. ಆದರೆ ಆ ಟೂಥ್ ಪೇಸ್ಟ್ ಪಕ್ಕದಲ್ಲೇ (tooth paste) ಇಲಿ ಪಾಷಾಣದ ಪೇಸ್ಟ್ ಇತ್ತು. ಕತ್ತಲಿದ್ದಿದ್ದರಿಂದ ತಿಳಿಯದೆ ಇಲಿ ಪಾಷಾಣವನ್ನೇ ಯುವತಿ ಕೈಗೆತ್ತಿಕೊಂಡಿದ್ದಳು. ಹಲ್ಲುಜ್ಜುವಾಗ ಇಲಿ ಪಾಷಾಣ ಎಂದು ತಡವಾಗಿ ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಿ ಅನಾಹುತ ಘಟಿಸಿತ್ತು. ತೀವ್ರ ಅಸ್ವಸ್ಥಗೊಂಡ ಶಾವ್ಯಳನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ (wenlock hospital mangaluru) ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶ್ರಾವ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ರಸ್ತೆ ದಾಟುವಾಗ ಬೈಕಿಗೆ ಬಸ್ ಡಿಕ್ಕಿ; ಚಿಕ್ಕಬಳ್ಳಾಪುರದ ಹೊನ್ನೇನಹಳ್ಳಿ ಗೇಟ್ ಬಳಿ ಬೆಂಗಳೂರು ಮೂಲದ ಮೂವರ ಸಾವು ಚಿಕ್ಕಬಳ್ಳಾಪುರ: ರಸ್ತೆ ಕ್ರಾಸ್ ಮಾಡುವಾಗ ಬೈಕ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಮಹಿಳೆ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ. ಬೆಂಗಳೂರು ಮೂಲದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ನಕಲಿ ವೈದ್ಯ ದಂಪತಿ ಕರಾಮತ್ತು! ಮಕ್ಕಳಾಗುವಂತೆ ಇಂಜೆಕ್ಷನ್ ಕೊಡ್ತೀವಿ ಅಂತಾ 70 ದಂಪತಿಗೆ ದೋಖಾ ತುಮಕೂರು: ಇವರು ನಕಲಿ ವೈದ್ಯ ದಂಪತಿ! ಮಕ್ಕಳಾಗುವಂತೆ ಇಂಜೆಕ್ಷನ್ ಕೊಡ್ತೀವಿ ಅಂತಾ ದೋಖಾ ಮಾಡುವುದೇ ಇವರ ಕಸುಬು. ಇವರು ವಾಣಿ ಹಾಗೂ ಮಂಜುನಾಥ್ ಎಂಬ ನಕಲಿ ವೈದ್ಯ ದಂಪತಿ. ಮಕ್ಕಳಿಲ್ಲದ ದಂಪತಿಗಳೇ ಇವರ ಟಾರ್ಗೆಟ್! ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಜನ ಮಹಿಳೆಯರಿಗೆ ಇಂಜೆಕ್ಷನ್ ನೀಡಿ ಮಹಾನ್ ದೋಖಾ ಮಾಡಿದ್ದಾರೆ. ಅಷ್ಟೇ ಅಲ್ಲ; ದಂಪತಿಗಳ ಬಳಿ ಐದಾರು ಲಕ್ಷ ರೂಪಾಯಿ ಹಣವನ್ನೂ ದೋಚಿದ್ದಾರೆ ಈ ನಕಲಿ ವೈದ್ಯ ದಂಪತಿ.

ಆರು ತಿಂಗಳಿನಿಂದ ಬಾಡಿಗೆ ಮನೆ ಮಾಡಿಕೊಂಡು ಹಲವು ಗ್ರಾಮಗಳಿಗೆ ಮೋಸ ಮಾಡಿರುವ ನಕಲಿ ವೈದ್ಯರು ಇವರು. ಇಂಜೆಕ್ಷನ್ ಪೌಡರ್ ನೀಡಿ ಸ್ಕ್ಯಾನಿಂಗ್ ಮಾಡಿಸಬೇಡಿ ಅಂತಾ ಹೇಳಿ ಮೋಸ ಮಾಡಿದ್ದಾರೆ. ಪ್ರತಿಯೊಂದನ್ನೂ ನಾವೇ ಮಾಡ್ತಿವಿ ಅಂತಾನೂ ಮೋಸವೆಸಗಿದ್ದಾರೆ. ಸದ್ಯ ಮಕ್ಕಳೂ ಇಲ್ಲ; ಹಣವೂ ಇಲ್ಲದೇ ಹೋಯ್ತು ಅಂತಾ ಮಕ್ಕಳ ಆಸೆಗೆ ಹೋಗಿ ಅನಾರೋಗ್ಯಕ್ಕೆ ತುತ್ತಾಗಿರುವ ಮಹಿಳೆಯರು ಈಗ ಹಲಬುತ್ತಿದ್ದಾರೆ.

ದೇಹ ದಪ್ಪವಾಗಿದೆ, ಹೊಟ್ಟೆ ನೋವು ಸೇರಿದಂತೆ ಹಲವು ಖಾಯಿಲೆಗಳಿಗೆ ತುತ್ತಾಗಿದ್ದೇವೆ ಎಂದು ಆ ಮಹಿಳೆಯರು ಅಲವತ್ತುಕೊಂಡಿದ್ದಾರೆ. ಓರ್ವ ಮಹಿಳೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿ ತಲುಪಿದ್ದಾರೆ. ಸುಮಾರು 70 ದಂಪತಿಗೆ ಈ ನಕಲಿ ವೈದ್ಯ ದಂಪತಿ ವಂಚನೆ ಮಾಡಿದ್ದಾರೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:41 am, Mon, 28 February 22