ಬೈಕ್​​ಗೆ ಡಿಕ್ಕಿ ಹೊಡೆದ ಖಾಸಗಿ ಬಸ್; ಮಂಗಳೂರಿನ ಹಂಪನಕಟ್ಟೆ ವೃತ್ತದ ಬಳಿ ಬಸ್ ಬೆಂಕಿಗಾಹುತಿ

ಬೈಕ್​​ಗೆ ಡಿಕ್ಕಿ ಹೊಡೆದ ಖಾಸಗಿ ಬಸ್; ಮಂಗಳೂರಿನ ಹಂಪನಕಟ್ಟೆ ವೃತ್ತದ ಬಳಿ ಬಸ್ ಬೆಂಕಿಗಾಹುತಿ
ಹೊತ್ತಿ ಉರಿಯುತ್ತಿರುವ ಬಸ್

ಬೈಕ್​​ಗೆ ಬಸ್ ಡಿಕ್ಕಿ ಹೊಡೆದಿದ್ದು, ಬೈಕ್​​ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬಸ್​​ಗೆ ಬೆಂಕಿ ತಗುಲಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರನ್ನು ಚಾಲಕ ಕೆಳಗಿಳಿಸಿದ್ದಾರೆ. ಖಾಸಗಿ ಬಸ್ಸಿನ ಮುಂಭಾಗ ಸಂಪೂರ್ಣ ಭಸ್ಮವಾಗಿದೆ.

TV9kannada Web Team

| Edited By: Rashmi Kallakatta

Apr 08, 2022 | 4:38 PM

ಮಂಗಳೂರು: ಮಂಗಳೂರು (Mangaluru) ‌ನಗರದ ಹಂಪನಕಟ್ಟೆ ವೃತ್ತದ ಬಳಿ ಖಾಸಗಿ ಬಸ್ (Private Bus) ಹೊತ್ತಿ ಉರಿದಿದೆ. ಬೈಕ್​​ಗೆ ಬಸ್ ಡಿಕ್ಕಿ ಹೊಡೆದಿದ್ದು, ಬೈಕ್​​ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬಸ್​​ಗೆ ಬೆಂಕಿ ತಗುಲಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರನ್ನು ಚಾಲಕ ಕೆಳಗಿಳಿಸಿದ್ದಾರೆ. ಖಾಸಗಿ ಬಸ್ಸಿನ ಮುಂಭಾಗ ಸಂಪೂರ್ಣ ಭಸ್ಮವಾಗಿದೆ. ಬೈಕ್ ಸವಾರನ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಬೈಕ್ ಸವಾರನನ್ನು ಡೈಲಾನ್ (26) ಎಂದು ಗುರುತಿಸಲಾಗಿದೆ. ಈ ಘಟನೆ ಮಧ್ಯಾಹ್ನ 2.45 ರ ಸುಮಾರಿಗೆ ನಡೆದಿದೆ. ಖಾಸಗಿ ಬಸ್ ಮಾರ್ಗ ಸಂಖ್ಯೆ 45 ಜಿ, ಸ್ಟೇಟ್ ಬ್ಯಾಂಕ್‌ಗೆ ತೆರಳುತ್ತಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರತ್ಯಕ್ಷದರ್ಶಿಗಳ ಪ್ರಕಾರ ಬೈಕ್ ಬಸ್‌ನ ಕೆಳಗೆ ಬಿದ್ದು ಸವಾರನಿಗೆ ಗಾಯವಾಗಿದೆ. ಸ್ವಲ್ಪದರಲ್ಲೇ ಬೈಕ್ ಮತ್ತು ಬಸ್‌ಗೆ ಬೆಂಕಿ ಹತ್ತಿಕೊಂಡಿತು. ಯುವಕನ ಕಾಲಿಗೆ ಏಟಾಗಿದ್ದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ತನಿಖೆಗಾಗಿ ನಾವು ಇಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತೇವೆ. ಯಾರೂ ಇನ್ನೂ ದೂರು ದಾಖಲಿಸಿಲ್ಲ ಎಂದಿದ್ದಾರೆ.

(ಹೆಚ್ಚಿನ ಮಾಹಿತಿ  ನಿರೀಕ್ಷಿಸಲಾಗಿದೆ)

ಇದನ್ನೂ ಓದಿ: ವಿವಿಧ ರಾಜ್ಯಗಳ ಜನರು ಪರಸ್ಪರ ಸಂವಹನಕ್ಕೆ ಇಂಗ್ಲಿಷ್ ಬದಲು ಹಿಂದಿ ಬಳಸಬೇಕು: ಅಮಿತ್ ಶಾ

Follow us on

Related Stories

Most Read Stories

Click on your DTH Provider to Add TV9 Kannada