ಮಂಗಳೂರಿನಲ್ಲಿ ರಸ್ತೆಯಲ್ಲೇ ನಿಂತು ನಮಾಜ್‌ ಮಾಡಿದ ಪ್ರಕರಣ; ಸುಮೋಟೋ ಕೇಸ್ ಹಾಕಿ ಹಿಂಪಡೆದಿದ್ದು ಯಾಕೆ?-ಕಟೀಲ್​

ಕಡಲತಡಿ ಮಂಗಳೂರು ಹೇಳಿ ಕೇಳಿ ಕೋಮುಸೂಕ್ಷ್ಮ ಪ್ರದೇಶ. ಇಲ್ಲಿ ಯಾವುದೇ ಕೋಮು ಘಟನೆ ನಡೆದರೂ ಅದು ರಾಜ್ಯಾದ್ಯಂತ ಚರ್ಚೆ ಆಗುತ್ತದೆ. ಅದರಂತೆ ರಸ್ತೆ ಮದ್ಯದಲ್ಲಿ ನಮಾಜ್ ಮಾಡಿದ ವಿವಾದ ಮುನ್ನಲೆಗೆ ಬಂದಿತ್ತು. ಈ ಕುರಿತು ಸಾಕಷ್ಟು ವಿರೋಧದ ಬಳಿಕ ಪೊಲೀಸರು ಸುಮೋಟೋ ಕೇಸ್ ಹಾಕಿ, ಬಳಿಕ ಹಿಂಪಡೆದಿದ್ದರು. ಈ ಕುರಿತು ಇದೀಗ ಸಂಸದ ನಳಿನ್ ಕುಮಾರ್ ಕಟೀಲು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ರಸ್ತೆಯಲ್ಲೇ ನಿಂತು ನಮಾಜ್‌ ಮಾಡಿದ ಪ್ರಕರಣ; ಸುಮೋಟೋ ಕೇಸ್ ಹಾಕಿ ಹಿಂಪಡೆದಿದ್ದು ಯಾಕೆ?-ಕಟೀಲ್​
ನಳಿನ್​ ಕುಮಾರ್​ ಕಟೀಲ್​
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 01, 2024 | 6:37 PM

ದಕ್ಷಿಣ ಕನ್ನಡ, ಜೂ.01: ಮಂಗಳೂರಿನಲ್ಲಿ ರಸ್ತೆಯಲ್ಲೇ ನಿಂತು ನಮಾಜ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ವ್ಯಾಪಕ ವಿರೋಧವಾಗಿತ್ತು. ಬಳಿಕ ಪೊಲೀಸರು ಸುಮೋಟೋ ಕೇಸ್(sumoto case)​ ದಾಖಲಿಸಿ ಹಿಂಪಡೆದಿದ್ದರು. ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಸಂಸದ  ನಳಿನ್ ಕುಮಾರ್ ಕಟೀಲ್(Nalin Kumar Kateel)​, ‘ತುಷ್ಟೀಕರಣದ ನೀತಿಯಿಂದ ಸುಮೋಟೊ ಕೇಸ್ ಹಿಂಪಡೆದಿದ್ದು, ಇದರ ವಿರುದ್ಧ ಹೇಳಿಕೆ ನೀಡಿದವರ ಮೇಲೆ ಕೇಸ್ ದಾಖಲಾಗಿದೆ ಎಂದು ಕಿಡಿಕಾರಿದ್ದಾರೆ.

ಸುಮೋಟೊ ಕೇಸ್ ಹಾಕಿ, ಹಿಂಪಡೆದಿದ್ದು ಯಾಕೆ?

‘ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೆಲಸ ಮಾಡುತ್ತಾ ಇದೆ. ಸುಮೋಟೋ ಕೇಸ್ ಹಾಕಿದ್ದು ಯಾಕೆ?, ಬಳಿಕ ಹಿಂಪಡೆದಿದ್ದು ಯಾಕೆ?. ಇದನ್ನು ಬಿಜೆಪಿ ಖಂಡಿಸುತ್ತದೆ. ಸಿದ್ದರಾಮಣ್ಣನ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಅಶಾಂತಿಯ ವಾತವರಣ ಸೃಷ್ಟಿಯಾಗಿದೆ. ಕೂಡಲೇ ಶರಣ್ ಪಂಪ್​ವೆಲ್ ವಿರುದ್ಧ ದಾಖಲಿಸಿದ ಕೇಸ್ ಹಿಂಪಡೆಯಬೇಕು ಎಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಮಂಗಳೂರಿನ ಕಂಕನಾಡಿಯ ನಡು ರಸ್ತೆಯಲ್ಲಿ ನಮಾಜ್​: ಕೇಸ್​ ಬುಕ್

ಏನಿದು ಪ್ರಕರಣ?

ಕಳೆದ ಶುಕ್ರವಾರ ಮಂಗಳೂರಿನ ಕಂಕನಾಡಿಯಲ್ಲಿನ ಮಸೀದಿಯೊಂದರ ಮುಂಭಾಗ ರಸ್ತೆಯಲ್ಲೇ ನಾಮಾಜ್ ಮಾಡಲಾಗಿತ್ತು. ಯುವಕರ ತಂಡವೊಂದು ರಸ್ತೆಯಲ್ಲಿ ನಮಾಜ್ ಮಾಡಿದ್ದರು. ಮುಕ್ಕಾಲು ಭಾಗ ರಸ್ತೆಯನ್ನು ಬ್ಲಾಕ್ ಮಾಡಿಕೊಂಡು ಈ ನಮಾಜ್​ನ್ನು ಮಾಡಲಾಗಿತ್ತು. ಇದ್ರಿಂದ ವಾಹನ ಸವಾರರು ಯೂಟರ್ನ್ ಮಾಡಿಕೊಂಡು ವಾಪಾಸಾಗಿದ್ದರು. ಇನ್ನು ಈ ಎಲ್ಲಾ ಘಟನಾವಳಿಗಳನ್ನು ಸ್ಥಳೀಯರೊಬ್ಬರು ವಿಡೀಯೋ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ವಿಶ್ವ ಹಿಂದು ಪರಿಷದ್ , ಕದ್ರಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದರು.

ಈ ರೀತಿ ರಸ್ತೆಯಲ್ಲಿ ನಮಾಜ್ ಮಾಡುವುದರ ಮೂಲಕ ನಾಡಿನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮುಡುಪು ಎಂಬಲ್ಲಿ ರಸ್ತೆಗೆ ಚೇರ್ ಗಳನ್ನು ಜೋಡಿಸಿ ಇಫ್ತಾರ್ ಕೂಡ ಮಾಡಿದ್ರು. ಇದರ ವಿರುದ್ಧ ದೂರು ನೀಡಿದ್ರು ಕ್ರಮ ಆಗಿರಲಿಲ್ಲ. ಅದರ ಮುಂದುವರೆದ ಭಾಗ ಇದಾಗಿದ್ದು, ಶಾಂತಿಯನ್ನು ಹಾಳುಗೆಡವಲು ಈ ರೀತಿ ಮಾಡಲಾಗುತ್ತದೆ ಎಂದು ಆರೋಪಿಸಿದ್ದು, ಇನ್ನು ಮುಂದೆ ಇದು ಪುನಾವರ್ತನೆ ಆಗಬಾರದು. ಹಾಗೇನಾದ್ರು ಆದ್ರೆ ವಿ.ಎಚ್.ಪಿ ಕಾರ್ಯಕರ್ತರು ಸಮೂಹಿಕವಾಗಿ ಗಂಟೆ ಜಾಗಟೆಗಳನ್ನು ಹಿಡಿದು ಅದೇ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ ಪಠಿಸೋದಾಗಿ ಎಚ್ಚರಿಗೆ ನೀಡಿದ್ದರು. ಈ ಹಿನ್ನಲೆ ವಿಹೆಚ್​ಪಿ ಮುಖಂಡ ಶರಣ್ ಪಂಪ್​ವೆಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ