ಮಂಗಳೂರು ಸೆ.20: ಕರಾವಳಿ ಪ್ರವಾಸೋದ್ಯಮವನ್ನು (Coastal Tourism) ಉತ್ತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ (Tourism Department) ಪ್ರಮುಖ ಕಾರವಾನ್ (ಬಸ್) ಪ್ರವಾಸ ಯೋಜನೆ ನೆನೆಗುದಿಗೆ ಬಿದ್ದಿದೆ. ಪ್ರವಾಸೋದ್ಯಮ ಇಲಾಖೆ ಕಾರವಾನ್ ಪ್ರಸ್ತಾಪವನ್ನು ಮುಂದಿಟ್ಟರೂ, ಇಂಥಾ ಸೇವೆಗಳನ್ನು ಆರಂಭಿಸುವುದಕ್ಕೆ ಯಾರೊಬ್ಬರೂ ಮುಂದೆ ಬಂದಿಲ್ಲ. ರಾಜ್ಯ ಸರ್ಕಾರವು (Karnataka Government) ಸೌಲಭ್ಯಗಳನ್ನು ಒದಗಿಸಿದರೆ ಮತ್ತು ಕಾರವಾನ್ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯವನ್ನು ನೀಡಿದರೇ ಅನೇಕ ಜನರು ಬರುತ್ತಾರೆ. ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದಲ್ಲಿದೆ. ಮತ್ತು ಕಾರವಾನ್ ಪ್ರವಾಸೋದ್ಯಮದಿಂದ ಕರಾವಳಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನವನ್ನು ಸಿಗುತ್ತದೆ.
ಕಾರವಾನ್ (ಬಸ್) ಪ್ರವಾಸೋದ್ಯಮವು ಕುಟುಂಬ ಪ್ರವಾಸಕ್ಕೆ ಹೆಚ್ಚು ಉತ್ತೇಜನೆ ನೀಡುತ್ತದೆ. ಕಾರವಾನ್ನಲ್ಲಿ ಮಲಗುವ ಕೋಣೆಗಳು ಮತ್ತು ಅಡಿಗೆಮನೆಗಳನ್ನು ಒಳಗೊಂಡಂತೆ ಪ್ರಯಾಣಕ್ಕಾಗಿ ಬೇಕಾದ ಮೂಲಭೂತ ಸೌಕರ್ಯಗಳು ಇದರಲ್ಲಿ ದೊರೆಯುತ್ತದೆ. ಹೀಗಾಗಿ ಕಾರವಾನ್ ಪ್ರವಾಸ ಆರಾಮದಾಯಕವಾಗಿದೆ.
ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ ಮಾತನಾಡಿ, ಒಂದು ವರ್ಷದ ಹಿಂದೆ ಕಾರವಾನ್ ಪ್ರವಾಸಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಎರಡರಿಂದ ಮೂರು ಅರ್ಜಿಗಳು ಹೊರತುಪಡಿಸಿ, ಹೆಚ್ಚು ಅರ್ಜಿಗಳು ಬರಲಿಲ್ಲ. ಹೀಗಾಗಿ ಕಾರವಾನ್ ಪ್ರವಾಸೋದ್ಯಮದ ಬಗ್ಗೆ ಮತ್ತೊಮ್ಮೆ ಹೆಚ್ಚು ಪ್ರಚಾರ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Womens Day 2023: ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ಕಾರವಾನ್ ವಾಹನಗಳ ಜೊತೆಗೆ, ರಾಜ್ಯ ಸರ್ಕಾರವು ಕಾರವಾನ್ ಪಾರ್ಕ್ ನಿರ್ಮಿಸಲು ಪ್ರಸ್ತಾಪಿಸಿದೆ. ಕಾರವಾನ್ ವಾಹನಗಳನ್ನು ರಾತ್ರಿಯಿಡೀ ನಿಗದಿಪಡಿಸಿದ ಜಾಗಗಳಲ್ಲಿ ನಿಲುಗಡೆ ಮಾಡಬಹುದಾಗಿದೆ. ಕನಿಷ್ಠ ಐದು ಪಾರ್ಕ್ಗಳನ್ನು ನಿರ್ಮಿಸುವ ಚಿಂತನೆ ಇದೆ. ಈ ಪಾರ್ಕ್ಗಾಗಿ ಕನಿಷ್ಠ ಅರ್ಧ ಎಕರೆ ಜಾಗ ಬೇಕಾಗಿದ್ದು, ಯಾರಾದರೂ ಕಾರವಾನ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಬಹುದು.
ಈ ಪಾರ್ಕ್ ವಿದೇಶಿ ಮತ್ತು ಭಾರತೀಯ ಪ್ರಜೆಗಳಿಗೆ ಹೊಂದುವಂತೆ ಇರಬೇಕು. ಮೂಲಭೂತ ಸೌಲಭ್ಯ ಹೊಂದಿದರಬೇಕು. ಈ ಪಾರ್ಕ್ ನಿರ್ಮಾಣಕ್ಕೆ ಯಾರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಕಾರವಾನ್ ಪಾರ್ಕ್‌ಗಳು ಬೀಚ್ ಪಕ್ಕದಲ್ಲಿ ವಿಶೇಷವಾಗಿ ಸಾಕಷ್ಟು ಸೌಲಭ್ಯಗಳು, ಭದ್ರತೆ ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಸ್ಥಳಗಳಲ್ಲಿ ನಿರ್ಮಾಣ ಮಾಡಬೇಕು.
ಉದಾಹರಣೆಗೆ, ಬ್ಲೂ ಫ್ಲಾಗ್ ಬೀಚ್ ಪಕ್ಕದಲ್ಲಿ ಕಾರವಾನ್ ಪಾರ್ಕ್ ನಿರ್ಮಿಸಿದರೇ ಒಳ್ಳೆಯದು ಏಕೆಂದರೇ ಈ ಸ್ಥಳಗಳು ವಾಶ್‌ರೂಮ್ ಮತ್ತು ಸೆಕ್ಯುರಿಟಿ ಎರಡನ್ನೂ ಹೊಂದಿದೆ. ಮತ್ತು ಬೀಚ್‌ಗಳಿಗೆ ಹತ್ತಿರದಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ