AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mangaluru News: ನಿಲ್ಲದ ಕಡಲ್ಕೊರೆತ, 10ಕ್ಕೂ ಹೆಚ್ಚು ಮನೆಗಳು ಸಮುದ್ರ ಪಾಲಾಗುವ ಭೀತಿ

ಮಂಗಳೂರಿನಲ್ಲಿ ಮಳೆ ಅಬ್ಬರ ನಿಂತರೂ ಕಡಲ್ಕೊರೆತ ನಿಂತಿಲ್ಲ. ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದ್ದು, ಅಲೆಗಳ ಅಬ್ಬರಕ್ಕೆ ಸಾರ್ವಜನಿಕ ಆಟದ ಆಟದ ಮೈದಾನದ ಭೂ ಭಾಗ ಸಮುದ್ರ ಪಾಲಾಗಿದೆ.

Mangaluru News: ನಿಲ್ಲದ ಕಡಲ್ಕೊರೆತ, 10ಕ್ಕೂ ಹೆಚ್ಚು ಮನೆಗಳು ಸಮುದ್ರ ಪಾಲಾಗುವ ಭೀತಿ
ಕಡಲ್ಕೊರೆತ
ಅಶೋಕ್​ ಪೂಜಾರಿ, ಮಂಗಳೂರು
| Updated By: ವಿವೇಕ ಬಿರಾದಾರ|

Updated on: Jul 09, 2023 | 8:15 AM

Share

ಮಂಗಳೂರು: ಮಂಗಳೂರಿನಲ್ಲಿ (Mangaluru) ಮಳೆ (Rain) ಅಬ್ಬರ ನಿಂತರೂ ಕಡಲ್ಕೊರೆತ (Sea Erosion) ನಿಂತಿಲ್ಲ. ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದ್ದು, ಅಲೆಗಳ ಅಬ್ಬರಕ್ಕೆ ಸಾರ್ವಜನಿಕ ಆಟದ ಆಟದ ಮೈದಾನದ ಭೂ ಭಾಗ ಸಮುದ್ರ ಪಾಲಾಗಿದೆ. ಮೈದಾನದ ಸುತ್ತ ಕಲ್ಲುಗಳನ್ನ ಹಾಕಲಾಗಿದ್ದರೂ ಅಲೆಗಳು ಕಲ್ಲುಗಳನ್ನ ದಾಟಿ ಮೈದಾನದ ಭಾಗಕ್ಕೆ ಬಡಿಯುತ್ತಿವೆ. ಅಲ್ಲದೇ ತಾತ್ಕಾಲಿಕವಾಗಿ ಅಳವಡಿಸಿದ್ದ ವೈಟ್ ಸ್ಯಾಂಡ್ ಬ್ಯಾಗ್ ಸಮುದ್ರಪಾಲಾಗಿದೆ.

ತಾತ್ಕಾಲಿಕ ಕಾಮಗಾರಿ ಆರಂಭ

ಮಂಗಳೂರಿನ ಬೀಚ್​ಗಳಲ್ಲಿ ‌ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮಗಾರಿ ಆರಂಭವಾಗಿದೆ. ಬೈಕಂಪಾಡಿ, ಮೀನಕಳಿಯ, ಪಣಂಬೂರು ಬೀಚ್​ನಲ್ಲಿ ಅಲೆಗಳ ಅಬ್ಬರ ತಡೆಯಲು ಮರಳು ಚೀಲಗಳ ಅಳವಡಿಸಲಾಗುತ್ತಿದೆ. ಹಿಟಾಚಿ ಮೂಲಕ ದೊಡ್ಡ ಗಾತ್ರದ ಕಪ್ಪು ಬ್ಯಾಗ್​ಗಳಿಗೆ ಮರಳು ತುಂಬಿಸಿ ಜೋಡಿಸಲಾಗುತ್ತಿದೆ.

ಇದನ್ನೂ ಓದಿ: Mangaluru News: ನೇತ್ರಾವತಿ ನದಿಯಲ್ಲಿ ಮುಳುಗಿದ ಬೋಟ್; ಮೀನುಗಾರನ ರಕ್ಷಣೆ

ಇನ್ನು ಮಳೆ ಹೆಚ್ಚಾದರೆ ಅಲೆಗಳ ಅಬ್ಬರ ಮತ್ತಷ್ಟು ಜೋರಾಗಲಿದ್ದು, ಮೀನಕಳಿಯ ಭಾಗದ ಸುಮಾರು 10ಕ್ಕೂ ಹೆಚ್ಚು ಮನೆಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ. ಅಪಾಯದಲ್ಲಿರುವ ಮನೆಗಳ ತುರ್ತು ರಕ್ಷಣೆಗೆ ‌ಜಿಲ್ಲಾಡಳಿತ ಮುಂದಾಗಿದೆ. ಸಮುದ್ರದ ಅಲೆಗಳ ಅಬ್ಬರ ಏರಿಳಿತ ಗಮನಿಸಿ ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ