ರೈಲ್ವೆ ಪ್ರಯಾಣಿಕರ ಗಮನಕ್ಕೆ: ರೈಲು ಸಂಖ್ಯೆ 16377, 16378, 16596, 16536 ವೇಳಾಪಟ್ಟಿಯಲ್ಲಿ ಬದಲಾವಣೆ

ದಕ್ಷಿಣ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅಕ್ಟೋಬರ್ 15, 2026 ರಿಂದ ಒಟ್ಟಪಾಳಂ ನಿಲ್ದಾಣದಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಪ್ರಾಯೋಗಿಕ ನಿಲುಗಡೆ ಘೋಷಿಸಲಾಗಿದೆ. ಇದರೊಂದಿಗೆ, ಅಕ್ಟೋಬರ್ 20, 2026 ರಿಂದ ಯಶವಂತಪುರ ನಿಲ್ದಾಣದಲ್ಲಿ ಪಂಚಗಂಗಾ ಮತ್ತು ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಈ ಬದಲಾವಣೆಗಳು ಬೆಂಗಳೂರು ಮತ್ತು ಇತರೆಡೆಗಳ ಪ್ರಯಾಣಿಕರಿಗೆ ಸಹಕಾರಿಯಾಗಲಿವೆ.

ರೈಲ್ವೆ ಪ್ರಯಾಣಿಕರ ಗಮನಕ್ಕೆ: ರೈಲು ಸಂಖ್ಯೆ 16377, 16378, 16596, 16536 ವೇಳಾಪಟ್ಟಿಯಲ್ಲಿ ಬದಲಾವಣೆ
ಸಾಂದರ್ಭಿಕ ಚಿತ್ರ

Updated on: Oct 15, 2026 | 9:25 AM

ಬೆಂಗಳೂರು, ಅ.15: ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆಯು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಒಟ್ಟಪಾಳಂ ನಿಲ್ದಾಣದಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಪ್ರಾಯೋಗಿಕ ನಿಲುಗಡೆ ಘೋಷಿಸಲಾಗಿದ್ದು, ಇದರೊಂದಿಗೆ ಯಶವಂತಪುರ ನಿಲ್ದಾಣದಲ್ಲಿ ಪಂಚಗಂಗಾ ಹಾಗೂ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ದಕ್ಷಿಣ ರೈಲ್ವೆಯು, ಅಕ್ಟೋಬರ್ 15, 2026 ರಿಂದ ಜಾರಿಗೆ ಬರುವಂತೆ ಒಟ್ಟಪಾಳಂ ನಿಲ್ದಾಣದಲ್ಲಿ ರೈಲು ಸಂಖ್ಯೆ 16377/16378 ಕೆಎಸ್‌ಆರ್‌ ಬೆಂಗಳೂರು–ಎರ್ನಾಕುಲಂ–ಕೆಎಸ್‌ಆರ್‌ ಬೆಂಗಳೂರು ದೈನಂದಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಪ್ರಾಯೋಗಿಕ ನಿಲುಗಡೆಯನ್ನು ಘೋಷಿಸಿದೆ.

ಒಟ್ಟಪಾಳಂನಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಪ್ರಾಯೋಗಿಕ ನಿಲುಗಡೆ:

ರೈಲು ಸಂ. 16377 ಕೆಎಸ್‌ಆರ್‌ ಬೆಂಗಳೂರು–ಎರ್ನಾಕುಲಂ ದೈನಂದಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಒಟ್ಟಪಾಳಂಗೆ 14:30 ಗಂಟೆಗೆ ಆಗಮಿಸಿ, 14:31 ಗಂಟೆಗೆ ಹೊರಡಲಿದೆ. ಹಾಗೆಯೇ, ರೈಲು ಸಂ. 16378 ಎರ್ನಾಕುಲಂ–ಕೆಎಸ್‌ಆರ್‌ ಬೆಂಗಳೂರು ದೈನಂದಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಒಟ್ಟಪಾಳಂಗೆ 10:59 ಗಂಟೆಗೆ ಆಗಮಿಸಿ, 11:00 ಗಂಟೆಗೆ ಹೊರಡಲಿದೆ.

ಇದನ್ನೂ ಓದಿ : ಬೆಂಗಳೂರು-ಮಂಗಳೂರು ಘಾಟ್ ಸೆಕ್ಷನ್‌ನಲ್ಲಿ ಎಲೆಕ್ಟ್ರಿಕ್ ರೈಲು ಸಂಚಾರ; ಪ್ರಯಾಣಿಕರ ಗಮನಕ್ಕೆ ಅ.4 ರಿಂದ ನ. 4 ರವರೆಗೆ ಈ ರೈಲುಗಳು ರದ್ದು

ಯಶವಂತಪುರದಲ್ಲಿ ಪಂಚಗಂಗಾ ಹಾಗೂ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ:

ತಮ್ಮ ಮೂಲ ನಿಲ್ದಾಣಗಳಿಂದ ಅಕ್ಟೋಬರ್ 20, 2026 ರಂದು ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಯಶವಂತಪುರ ನಿಲ್ದಾಣದಲ್ಲಿ ಕೆಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ರೈಲು ಸಂಖ್ಯೆ 16596 ಕಾರವಾರ–ಕೆಎಸ್‌ಆರ್‌ ಬೆಂಗಳೂರು ಪಂಚಗಂಗಾ ದೈನಂದಿನ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 16536 ಪಂಢರಪುರ–ಮೈಸೂರು ಗೋಲ್‌ಗುಂಬಜ್ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ರೈಲು ಸಂ. 16596 ಯಶವಂತಪುರಕ್ಕೆ 06:23/06:25 ಗಂಟೆಯ ಬದಲಾಗಿ 06:48/06:50 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಅದೇ ರೀತಿ, ರೈಲು ಸಂ. 16536 06:48/06:50 ಗಂಟೆಯ ಬದಲಾಗಿ 07:13/07:15 ಗಂಟೆಗೆ ಯಶವಂತಪುರಕ್ಕೆ ಆಗಮಿಸಿ/ನಿರ್ಗಮಿಸಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us