ಸುಹಾಸ್ ಹತ್ಯೆ: ಫಿನೀಶ್, ರಿವೇಂಜ್ ಪೋಸ್ಟ್​​ಗಳ ವಿರುದ್ಧ ಮಂಗಳೂರು ಪೊಲೀಸ್ ಕಾರ್ಯಾಚರಣೆ, 12 ಪ್ರಕರಣ ದಾಖಲು

ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಪೋಸ್ಟ್​ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಇನ್​ಸ್ಟಾಗ್ರಾಂ, ಫೇಸ್​ಬುಕ್ ಮತ್ತು ವಾಟ್ಸಪ್​ನಲ್ಲಿ ಪ್ರತೀಕಾರದ ಸಂದೇಶಗಳನ್ನು ಹಂಚಿಕೊಂಡ ಆರೋಪದ ಮೇಲೆ ನಗರದ ಬೇರೆ ಬೇರೆ ಠಾಣೆಗಳಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ.

ಸುಹಾಸ್ ಹತ್ಯೆ: ಫಿನೀಶ್, ರಿವೇಂಜ್ ಪೋಸ್ಟ್​​ಗಳ ವಿರುದ್ಧ ಮಂಗಳೂರು ಪೊಲೀಸ್ ಕಾರ್ಯಾಚರಣೆ, 12 ಪ್ರಕರಣ ದಾಖಲು
ವೈರಲ್ ಪೋಸ್ಟ್​ಗಳು
Edited By:

Updated on: May 03, 2025 | 11:42 AM

ಮಂಗಳೂರು, ಮೇ 03: ನಗರದ ಹಿಂದೂ ಕಾರ್ಯಕರ್ತ, ರೌಡಿಶೀಟರ್‌ ಸುಹಾಸ್‌ ಶೆಟ್ಟಿ (Suhas Shetty) ಕೊಲೆ ಕೇಸ್​​ ಸದ್ಯ ಕರ್ನಾಟಕದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಮತ್ತೊಂದೆಡೆ ಪೊಲೀಸರು (police) ತನಿಖೆ ಚುರುಕುಗೊಳಿಸಿದ್ದಾರೆ. ನಿನ್ನೆ ಸುಹಾಸ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ‘ಫಿನೀಶ್’ ಎಂಬ ಪೋಸ್ಟ್ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಹೀಗಿರುವಾಗಲೇ ಇದೀಗ ಪ್ರತೀಕಾರದ ಪೋಸ್ಟ್​ಗಳ ವಿರುದ್ಧ ಮಂಗಳೂರು ಪೊಲೀಸರು 12 ಪ್ರಕರಣಗಳನ್ನು ದಾಖಲಿಸಿದ್ದಾರೆ.

ರಿವೇಂಜ್ ಪೋಸ್ಟ್​ಗಳ ವಿರುದ್ಧ ಸಮರ ಸಾರಿದ ಪೊಲೀಸ್​​

ಸುಹಾಸ್ ಹತ್ಯೆಗೂ ಮುನ್ನ ಮತ್ತು ಹತ್ಯೆ ಬಳಿಕ ರಿವೇಂಜ್ ಪೋಸ್ಟ್​ಗಳು ಎಲ್ಲೆಡೆ ಹರಿದಾಡಿದ್ದವು. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿದ್ದ ಪ್ರತೀಕಾರದ ಪೋಸ್ಟ್​​ಗಳ ವಿರುದ್ದ ಕೊನೆಗೂ ಎಚ್ಚೆತ್ತುಕೊಂಡಿರುವ ಮಂಗಳೂರು ಪೊಲೀಸರು ಇದೀಗ ಸಮರ ಸಾರಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನೀಶ್’ ಎಂಬ ಪೋಸ್ಟ್ ಬಹಿರಂಗ!

ಹಲವು ಇನ್​​ಸ್ಟಾಗ್ರಾಂ ಪೇಜ್​ಗಳು, ಫೇಸ್ ಬುಕ್​​​ಗಳಲ್ಲಿ ಪ್ರತೀಕಾರದ ​ಪೋಸ್ಟ್​​, ವಾಟ್ಸಾಪ್​ ಸಂದೇಶ ಹಿನ್ನೆಲೆ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮುಲ್ಕಿ, ಉರ್ವಾ, ಬರ್ಕೆ, ಮೂಡಬಿದಿರೆ, ಕಾವೂರು ಠಾಣೆಗಳಲ್ಲಿ ಎಫ್​ಐಆರ್​ ದಾಖಲಾಗಿದೆ.

ವೈರಲ್​ ಪೋಸ್ಟ್​ಗಳಲ್ಲಿ ಏನಿದೆ?

‘ಸುಹಾಸ್ ಶೆಟ್ಟಿ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲ ತೋರಿಸದಿದ್ದರೆ ನಾವೇ ಇರುವುದಿಲ್ಲ ಎಂದು hindu_mantra_’ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲೂ ಪೋಸ್ಟ್​ ಹಾಕಲಾಗಿದೆ. ‘ನಮಗೆ ಯಾವುದೇ ಉತ್ತರ ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು. ಜೀವಕ್ಕೆ, ಜೀವನೇ ಬೇಕು ಎಂಬುದಾಗಿ ಸ್ಟೋರಿ ಹಾಕಲಾಗಿದೆ.

ullaltho_makka ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ‘ಪ್ರತಿರೋಧ ಅಪರಾಧವಲ್ಲ’ ಎಂದು ಪೋಸ್ಟ್ ಮಾಡಲಾಗಿದೆ. ಜೊತೆಗೆ ಹತ್ಯೆ ಸಮರ್ಥನೆ ಹಾಗೂ ಪ್ರತೀಕಾರದ ಪೋಸ್ಟ್​ಗಳನ್ನು ಹಾಕಲಾಗಿದೆ. ಬಳಿಕ ಪೊಲೀಸ್ ವೈಫಲ್ಯದ ಆರೋಪ ಬೆನ್ನಲ್ಲೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದು, ಇದೀಗ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ನೆಟ್ಟಾರು ಕೊಲೆ ಪ್ರತಿಕಾರಕ್ಕೆ ಫಾಜಿಲ್​ ಹತ್ಯೆ: ಇದೇ ಸೇಡಿಗೆ ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಶಂಕಿತ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಮಂಗಳೂರಿನಲ್ಲೇ ಅವಿತ್ತಿದ್ದರು ಎಂಬುವುದು ತಿಳಿದುಬಂದಿದೆ.

ಸಹಜ ಸ್ಥಿತಿಯತ್ತ ಕಡಲ ನಗರಿ ಮಂಗಳೂರು

ನಿನ್ನೆ ಸಂಪೂರ್ಣವಾಗಿ ಬಂದ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಇಂದು ಸಹಜ ಸ್ಥಿತಿಗೆ ಮರಳುತ್ತಿದೆ. ಸಿಟಿ ಬಸ್ ಸೇರಿದಂತೆ ಹೊರ ಜಿಲ್ಲೆಗಳಿಗೂ ಖಾಸಗಿ, ಸರ್ಕಾರಿ ಬಸ್ ಸಂಚಾರ ಆರಂಭವಾಗಿದ್ದು, ಅಂಗಡಿ ಮುಂಗಟ್ಟು ತೆರೆಯಲಾಗಿದೆ. ಎಂದಿನಂತೆ ಜನ ಜೀವನ ಆರಂಭವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:38 am, Sat, 3 May 25