
ಮಂಗಳೂರು, ಮೇ 16: ಮಂಗಳೂರು (Mangaluru) ನಗರದ ಬಜ್ಪೆ ಬಳಿ ನಡೆದ “ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆಯ ಪ್ರತೀಕಾರಕ್ಕೆ ಹಿಂದೂ (Hindu) ಸಮಾಜ ಕಾದು ಕೂತಿದೆ” ಎಂದು ಭಜರಂಗದಳ ಮುಖಂಡ ಭರತ್ ಕುಮ್ಡೇಲು ಅವರು ಪ್ರಜೋದನಕಾರಿ ಮಾತುಗಳನ್ನು ಆಡಿದ್ದಾರೆ.
ಪುತ್ತೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಶ್ರದ್ದಾಂಜಲಿ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಸುಹಾಸನನ್ನು ಯಾವ ರೀತಿ ಕೊಲೆ ಮಾಡಿದ್ದಾರೆ ಅದೇರೀತಿ ಪ್ರತೀಕಾರವಾಗಬೇಕು” ಎಂದರು.
“ಮುಸಲ್ಮಾನರು ಸುಹಾಸ್ ಹತ್ಯೆಯನ್ನು ವಿಜೃಂಭಣೆ ಮಾಡುತ್ತಿದ್ದಾರೆ. ಆ ಹತ್ಯೆಯಲ್ಲಿ ಮುಸಲ್ಮಾನರ ಬರ್ಬರತೆ ಕಂಡು ಹಿಂದೂ ಸಮಾಜ ಹೆದರಿ ಹೋಯ್ತು. ಆದರೆ, ಹಿಂದೂ ಸಮಾಜಕ್ಕೆ ಗೊತ್ತಿರಬೇಕು, ಇಂತಹ ಹತ್ಯೆಗಳು ಇದೇ ಮೊದಲಲ್ಲ. ಅದೆಷ್ಟೋ ಮುಸಲ್ಮಾನರ ಹತ್ಯೆಗಳು ಇದೇ ರೀತಿ ನಡೆದಿದೆ. ದೇಹ ಮತ್ತು ತಲೆ ಬೇರೆ ಬೇರೆ ಆಗಿದೆ. ಮರಣೋತ್ತರ ಪರೀಕ್ಷೆ ಮಾಡುವಾಗ ಹೊಲಿಗೆ ಹಾಕಲು ಜಾಗ ಇರಲಿಲ್ಲ. ಮುಖದ ಪರಿಚಯ ಕೂಡ ಸಿಗುತ್ತಿರಲಿಲ್ಲ. ಆ ರೀತಿ ಕೊಚ್ಚಿ ಕೊಂದವರು ನಮ್ಮ ಹಿಂದೂಗಳಲ್ಲಿ ಇದ್ದಾರೆ, ಇದೇನೂ ಹೊಸತಲ್ಲ, ಇದು ಅವರ ಸಾಧನೆಯೂ ಅಲ್ಲ” ಎಂದು ಹೇಳಿದರು.
“ವಿಷ ಕೊಟ್ಟು ಯಾರನ್ನೂ ಕೊಂದಿದ್ದಿಲ್ಲ. ಎಲ್ಲ ಹತ್ಯೆಗಳು ಇದೇರೀತಿ ಆಗಿರುವುದು. ಹೀಗಾಗಿ, ಹಿಂದೂ ಸಮಾಜ ಇದಕ್ಕೆ ಭಯ ಪಡಬೇಕಿಲ್ಲ. ಭಯ ಪಡುವ ಅವಶ್ಯಕತೆಯೂ ಇಲ್ಲ. ಈ ರೀತಿ ಹಿಂದೂ ಕಾರ್ಯಕರ್ತನ ಹತ್ಯೆಯಾದರೆ ಅದಕ್ಕೆ ಪ್ರತೀಕಾರವಾಗಿ ಇನ್ನೊಂದು ಹತ್ಯೆ ಆಗುತ್ತೆ” ಎಂದಿದ್ದಾರೆ.
“ಆದರೆ ಈ ಕೇಸಲ್ಲಿ ಆ ರೀತಿ ಆಗಿಲ್ಲ. ಹಾಗಂತ ಹಿಂದೂ ಸಮಾಜಕ್ಕೆ ಸಾಮರ್ಥ್ಯ ಇಲ್ಲದೆ ಕೂತಿಲ್ಲ. ಹತ್ಯೆಯಾಗುವುದಾದರೆ, ಪ್ರತೀಕಾರ ಆಗೋದಾದರೆ ಸುಹಾಸನನ್ನ ಯಾವ ರೀತಿ ಕೊಲೆ ಮಾಡಿದ್ದಾರೆ ಅದೇರೀತಿ ಪ್ರತೀಕಾರ ಆಗಬೇಕು. ಅದೇರೀತಿಯ ಪ್ರತೀಕಾರಕ್ಕೆ ಹಿಂದೂ ಸಮಾಜ ಕಾದು ಕೂತಿದೆ” ಎಂದು ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ, ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ
“ಪ್ರತಿಕ್ರಿಯೆ ಮಾಡದೆ ಸುಮ್ಮನಿರಲು ಇದು ಕಾಶ್ಮೀರ ಅಲ್ಲ, ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ಮಾಡಿದ್ದಾರೆ. ಇದು ಮಂಗಳೂರು, ಇದು ಕಾಶ್ಮೀರ ಅಲ್ಲ, ಇಲ್ಲಿ ಬಿಡುವ ಪ್ರಶ್ನೆಯೇ ಇಲ್ಲ. ಹಿಂದೂ ಕಾರ್ಯಕರ್ತರು, ಹಿಂದೂಗಳು ಮುಸಲ್ಮಾನರ ಜೊತೆ ವ್ಯಾಪಾರ ಮಾಡಬೇಡಿ. ನಾಯಕರು ಕೂಡ ಯಾವುದೇ ವಹಿವಾಟು ಮಾಡಬಾರದು. ಸುಹಾಸ್ ಕೇಸ್ ಎನ್‌ಐಎ ತನಿಖಗೆ ಕೊಡಲೇಬೇಕು” ಎಂದು ಒತ್ತಾಯಿಸಿದರು.
Published On - 3:35 pm, Fri, 16 May 25