AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿ ಭಾಗವನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದೇವೆ, ಮುಲಾಜಿಲ್ಲದೇ ಕ್ರಮ: ಗೃಹ ಸಚಿವ ಪರಮೇಶ್ವರ್

ಮಂಗಳೂರಿನ ಬಂಟ್ವಾಳದ ಅಬ್ದುಲ್ ರಹಮಾನ್ ಹತ್ಯೆಯಿಂದ ಕರಾವಳಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಗೃಹ ಸಚಿವ ಮತ್ತು ಉಸ್ತುವಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಪ್ರತಿಕ್ರಿಯಿಸಿರುವ ಜಿ ಪರಮೇಶ್ವರ್, ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಕರಾವಳಿ ಭಾಗವನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದೇವೆ, ಮುಲಾಜಿಲ್ಲದೇ ಕ್ರಮ: ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್
Sunil MH
| Updated By: ಗಂಗಾಧರ​ ಬ. ಸಾಬೋಜಿ|

Updated on: May 29, 2025 | 12:52 PM

Share

ಮಂಗಳೂರು, ಮೇ 29: ಬಂಟ್ವಾಳದ ಅಬ್ದುಲ್ ರಹಿಮಾನ್ (Abdul Rahiman) ಬರ್ಬರ ಹತ್ಯೆ ಪ್ರಕರಣಕ್ಕೆ ಸದ್ಯ ಸಾಕಷ್ಟು ಚರ್ಚೆ ಮತ್ತು ಮುಸ್ಲಿಂ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮೂಹಿಕ ರಾಜೀನಾಮೆ ಕೂಡ ನೀಡಲಾಗಿದೆ. ಅಷ್ಟೇ ಅಲ್ಲದೆ ಗೃಹ ಸಚಿವ ಜಿ. ಪರಮೇಶ್ವರ್ (G. Parameshwara) ಮತ್ತು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್​​ ಬದಲಾಯಿಸಲು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ ಪರಮೇಶ್ವರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದೇವೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗ ಅಂದರೆ ಉಡುಪಿ, ಶಿವಮೊಗ್ಗ ಮತ್ತು ಮಂಗಳೂರನ್ನು ಸೂಕ್ಷ್ಮವಾಗಿ ಪರಿಗಣಿಸಿದೆ. ಮುಲಾಜಿಲ್ಲದೆ ಕ್ರಮ ಕೈಗೊಳ್ತೀವಿ, ಆದರೆ  ಯಾವ ಕ್ರಮ ಅಂತಾ ಹೇಳಲ್ಲ. ಇದನ್ನು ಹತ್ತಿಕ್ಕದೆ ಬಿಡುವುದಿಲ್ಲ ಎಂದು ಎಲ್ಲರಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಅಬ್ದುಲ್ ರಹಿಮಾನ್ ಕೊಲೆ ಸಂಘಪರಿವಾರ ಮತ್ತು ಬಿಜೆಪಿ ಮಾಡಿದೆ: ರಿಯಾಜ್ ಕಡಂಬು

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಎಸ್​​ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಪ್ರತಿಕ್ರಿಯಿಸಿದ್ದು, ರೆಹಮಾನ್ ಹತ್ಯೆ ವೈಯಕ್ತಿಕ ದ್ವೇಷದ ಹತ್ಯೆ ಅಂತ ಸಂಘಪರಿವಾರದ ಐಟಿ ಸೆಲ್ ಪೋಸ್ಟ್ ನೋಡಿ ಸಚಿವ ದಿನೇಶ್ ಗುಂಡೂರಾವ್ ಬೇಜವಾಬ್ದಾರಿ ಹೇಳಿಕೆ ಕೊಡುತ್ತಾರೆ. ಒಬ್ಬ ಶ್ರಮ ಜೀವಿಯನ್ನು ಕೊಲ್ಲುವುದು ಇವರ ವೀರತ್ವನಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ
Image
ಪರಮೇಶ್ವರ್, ಗುಂಡೂರಾವ್ ಬದಲಾವಣೆಗೆ ಮಂಗಳೂರು ಮುಸ್ಲಿಂ ಮುಖಂಡರ ಪಟ್ಟು
Image
ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
Image
ಬಂಟ್ವಾಳ ರಹಿಮಾನ್ ಹತ್ಯೆ ಹೇಗಾಯ್ತು?ಮಂಗಳೂರಿನಲ್ಲಿ ಏನೇನಾಯ್ತು?ಈಗ ಹೇಗಿದೆ?
Image
ಅಬ್ದುಲ್ ಹತ್ಯೆ ಕೇಸ್​: ಕೈ ನಾಯಕರ ರಾಜೀನಾಮೆಗೆ ಮುಸ್ಲಿಂ ಮುಖಂಡರ ಆಗ್ರಹ

ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್, ಉಸ್ತುವಾರಿ ಸಚಿವ ಗುಂಡೂರಾವ್ ಬದಲಾವಣೆಗೆ ಮಂಗಳೂರು ಮುಸ್ಲಿಂ ಮುಖಂಡರ ಪಟ್ಟು: ಕಾಂಗ್ರೆಸ್​ಗೆ ಎಚ್ಚರಿಕೆ

ಫಾಜಿಲ್ ಕೊಲೆಯಾದಾಗಲೂ ಒಬ್ಬ ಅಮಾಯಕನನ್ನು ಕೊಂದರು. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲ. ಮುಸ್ಲಿಂ ಸಮುದಾಯ ನಿನ್ನೆ ಬಹಳ ಶಾಂತಿ ಸಂಯಮದಿಂದ ವರ್ತಿಸಿದೆ. ಅಬ್ದುಲ್ ರಹಿಮಾನ್ ಕೊಲೆ ಸಂಘಪರಿವಾರ ಮತ್ತು ಬಿಜೆಪಿ ಮಾಡಿದೆ. ಕೊಲೆಯಾದ ರಹಿಮಾನ್ ಕುಟುಂಬದ ಜೊತೆ ಸರ್ಕಾರ ನಿಲ್ಲಬೇಕಿದೆ. ಅವರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಬೇಕು. ಆಸ್ಪತ್ರೆ ಸೇರಿದ ಯುವಕನ ಚಿಕಿತ್ಸಾ ವೆಚ್ಚ ಕೂಡ ಸರ್ಕಾರ ಭರಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಂಟ್ವಾಳ ರಹಿಮಾನ್ ಹತ್ಯೆ..ಮತ್ತೆ ಪ್ರತೀಕಾರದ ಪೋಸ್ಟರ್: ಮಂಗಳೂರಿನಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಡಿಜಿಪಿ ಯಾಕೆ ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ? ಕೊಲೆ ಮಾಡುತ್ತೇವೆ ಎನ್ನುವ ಭಾಷಣಕಾರರ ಬಂಧನ ಯಾಕೆ ಆಗುತ್ತಿಲ್ಲ. ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಮತ್ತು ಆರ್​​ಎಸ್​​ಎಸ್​​ಗೆ ಒಂದು ನೀತಿಯಾ? ಮುಸ್ಲಿಂ ಶಾಸಕರು ಈ ಹತ್ಯೆ ಬಗ್ಗೆ ಒಂದೇ ಒಂದು ಮಾತು ಆಡುತ್ತಿಲ್ಲ. ಯು.ಟಿ.ಖಾದರ್ ವಿದೇಶದಲ್ಲಿ ಕೂತು ಹೇಳಿಕೆ ಕೊಟ್ಟು ಸುಮ್ಮನಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ಆದರೆ ಜಿಲ್ಲೆಯ ಭವಿಷ್ಯ ಹಾಳಾಗುತ್ತೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.