ಗ್ರಾಮಕ್ಕೆ ರಸ್ತೆ ಇಲ್ಲದೆ ಪರದಾಟ; ತಾಯಿಯನ್ನು ಬೆಂಚಿಗೆ ಕಟ್ಟಿಕೊಂಡು ಆಸ್ಪತ್ರೆಗೆ ಓಡಿಹೋದರೂ ಬದುಕಲಿಲ್ಲ ಬಡಜೀವ

ಕೆರೆಹಿತ್ತಿಲು ನಿವಾಸಿ ಪೂವಣಿ ಗೌಡ ಎಂಬುವವರ ಪತ್ನಿ ಕಮಲ ಸಾವನ್ನಪ್ಪಿದ ಮಹಿಳೆ. ಪೂವಣಿ ಗೌಡರ ಮನೆಗೆ ಸಮರ್ಪಕವಾಗಿರದ ರಸ್ತೆ ಇಲ್ಲ. ಹೀಗಾಗಿ ಸ್ಥಳೀಯರೊಬ್ಬರ ಖಾಸಗಿ ತೋಟದಲ್ಲಿ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇಲ್ಲಿನದ್ದಾಗಿದೆ.

ಗ್ರಾಮಕ್ಕೆ ರಸ್ತೆ ಇಲ್ಲದೆ ಪರದಾಟ; ತಾಯಿಯನ್ನು ಬೆಂಚಿಗೆ ಕಟ್ಟಿಕೊಂಡು ಆಸ್ಪತ್ರೆಗೆ ಓಡಿಹೋದರೂ ಬದುಕಲಿಲ್ಲ ಬಡಜೀವ
ಬೆಂಚಿಗೆ ಕಟ್ಟಿ ಎತ್ತಿಕೊಂಡು ತಂದೆ-ಮಗ ಆಸ್ಪತ್ರೆಗೆ ಸಾಗಿಸಿದ್ದಾರೆ
Edited By:

Updated on: Sep 07, 2021 | 1:44 PM

ದಕ್ಷಿಣ ಕನ್ನಡ: ಸೂಕ್ತ ರಸ್ತೆ ಇಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಲು ತಡವಾಗಿದ್ದು, ಪರಿಣಾಮ ಮಹಿಳೆ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೆರೆ ಹಿತ್ತಿಲುನಲ್ಲಿ ನಡೆದಿದೆ. ಜೀವ ಉಳಿಸಲು ಬೆಂಚಿಗೆ ಕಟ್ಟಿ ಎತ್ತಿಕೊಂಡು ತಂದೆ-ಮಗ ಓಡಿದರೂ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿಯೇ ತಾಯಿ ಸಾವನ್ನಪ್ಪಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೆರೆಹಿತ್ತಿಲು ನಿವಾಸಿ ಪೂವಣಿ ಗೌಡ ಎಂಬುವವರ ಪತ್ನಿ ಕಮಲ ಸಾವನ್ನಪ್ಪಿದ ಮಹಿಳೆ. ಪೂವಣಿ ಗೌಡರ ಮನೆಗೆ ಸಮರ್ಪಕವಾಗಿರದ ರಸ್ತೆ ಇಲ್ಲ. ಹೀಗಾಗಿ ಸ್ಥಳೀಯರೊಬ್ಬರ ಖಾಸಗಿ ತೋಟದಲ್ಲಿ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇಲ್ಲಿನದ್ದಾಗಿದೆ. ವೈಯುಕ್ತಿಕ ಮನಸ್ತಾಪದಿಂದ ಕೇವಲ ಕಾಲುದಾರಿಯನ್ನು ಮಾತ್ರ ಸ್ಥಳೀಯರು ಬಿಟ್ಟು ಕೊಟ್ಟಿದ್ದಾರೆ.

ವಿವಿಧ ಖಾಯಿಲೆಯಿಂದ ಬಳಲುತ್ತಿದ್ದ ಪೂವಣಿಗೌಡರ ಪತ್ನಿ ಕಮಲ ಅವರಿಗೆ ರಾತ್ರಿ ಆರೋಗ್ಯ ತೀವ್ರ ಹದೆಗೆಟ್ಟಿತ್ತು. ಆದರೆ ರಸ್ತೆ ಇಲ್ಲದ ಕಾರಣ ಬೆಳಿಗ್ಗೆ ವರೆಗೆ ಕಮಲ ಅವರ ಮಗ ಮತ್ತು ಪತಿ ಕಾದಿದ್ದಾರೆ. ಬೆಳಿಗ್ಗೆ ಕಮಲರನ್ನು ನಡೆಸಿಕೊಂಡು ಹೋಗಲಾರದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಬೆಂಚಿಗೆ ಕಟ್ಟಿ ಎತ್ತಿಕೊಂಡು ತಂದೆ-ಮಗ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಬೆಳಗ್ಗಿನ ವೇಳೆ ಆಸ್ಪತ್ರೆಗೆ ಸೇರಿಸುವಾಗ ಬಹು ಅಂಗಾಂಗ ವೈಫಲ್ಯದಿಂದ ಕಮಲ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಗೆ ಸೇರಿಸುವುದು ತಡವಾಗಿದ್ದರಿಂದ ಬಹು ಅಂಗಾಂಗ ವೈಫಲ್ಯವಾಗಿದೆ. ಕೇವಲ 200 ಮೀಟರ್ ರಸ್ತೆಗಾಗಿ ಕುಟುಂಬದ ಪರದಾಟ ನಡೆಸಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ತಾಯಿಯನ್ನು ಎತ್ತಿಕೊಂಡು ಹೋಗಿದ್ದ ವಿಡಿಯೋ ವೈರಲ್ ಆಗಿದೆ. ರಸ್ತೆಗಾಗಿ ಹಲವು ಬಾರಿ ಪಂಚಾಯತಿಗೆ ಮನವಿ ಮಾಡಿದರೂ ಬೇಡಿಕೆ ಮಾತ್ರ ಈಡೇರಿಲ್ಲ. ಇಲ್ಲಿನ ಐದಕ್ಕೂ ಹೆಚ್ಚು ಮನೆಯವರಿಗೆ ಸದ್ಯ ಇದೇ ಪರಿಸ್ಥಿತಿ ಇದೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ವೃದ್ಧ ಬಲಿ
ಪ್ರಾಣ ತೆಗೆಯಲು ಯಮನಂತೆ ಬಾಯಿ ಬಿಟ್ಟು ಕಾದು ಕುಳಿತಿರುವ ರಸ್ತೆ ಗುಂಡಿಗಳಿಂದ ಅದೆಷ್ಟೂ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದಷ್ಟೂ ಜನರ ಜೀವನದಲ್ಲಿ ಕತ್ತಲು ಆವರಿಸಿದೆ. ಇಷ್ಟೆಲ್ಲಾ ಆದ್ರೂ ಬಿಬಿಎಂಪಿ, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿ ಅಷ್ಟೂ ಇಷ್ಟೂ ತೋರಿಕೆಯ ಕೆಲಸ ಮಾಡಿ ಸುಮ್ಮನಾಗುತ್ತೆ. ಈಗ ಅಂತಹದ್ದೇ ರಸ್ತೆ ಗುಂಡಿಯಿಂದಾಗಿ ವೃದ್ಧ ಬಲಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ವೃದ್ಧ ಬಲಿಯಾದ ಘಟನೆ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಖುರ್ಷಿದ್ ಅಹ್ಮದ್(60) ಮೃತ ವೃದ್ಧ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಜಯನಗರದ ನಿವಾಸಿ ಖುರ್ಷಿದ್ ಅಹ್ಮದ್ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾರೆ.

ಮೃತ ಖುರ್ಷಿದ್ ಅಂಗವಿಕಲರಾಗಿದ್ದರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಕ್ತಿ ಮರಣೋತ್ತರ ಪರೀಕ್ಷೆ ನಡೆದಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
Prof HJ Lakkappa Gowda Death: ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಹೆಚ್​ಜೆ ಲಕ್ಕಪ್ಪಗೌಡ ನಿಧನ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಬೇಕು; ಬಿಬಿಎಂಪಿ ಅಧಿಕಾರಿಗಳಿಗೆ ಗೌರವ್ ಗುಪ್ತಾ ಸೂಚನೆ