Prof HJ Lakkappa Gowda Death: ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಹೆಚ್​ಜೆ ಲಕ್ಕಪ್ಪಗೌಡ ನಿಧನ

TV9 Digital Desk

| Edited By: ganapathi bhat

Updated on: Jul 26, 2021 | 11:32 PM

ಸಂಜೆ 5.30 ರ ಸುಮಾರಿಗೆ ಸ್ವಗೃಹದಲ್ಲಿ ಕೊನೆಯುಸಿರೆಳೆದ ಪ್ರೊ. ಲಕ್ಕಪ್ಪಗೌಡ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಮೈಸೂರಿನಲ್ಲಿ ಎಂದು ಟಿವಿ9ಗೆ ಲಕ್ಕಪ್ಪಗೌಡ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

Prof HJ Lakkappa Gowda Death: ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಹೆಚ್​ಜೆ ಲಕ್ಕಪ್ಪಗೌಡ ನಿಧನ
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ.ಲಕ್ಕಪ್ಪಗೌಡ

ಮೈಸೂರು: ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹೆಚ್.ಜೆ. ಲಕ್ಕಪ್ಪಗೌಡ ಅವರು ಇಂದು (ಜುಲೈ 26) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರೊ. ಹೆಚ್.ಜೆ. ಲಕ್ಕಪ್ಪಗೌಡಗೆ 84 ವರ್ಷ ವಯಸ್ಸಾಗಿತ್ತು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಜಾನಪದ ಅಕಾಡೆಮಿ ಅಧ್ಯಕ್ಷ, ಕುವೆಂಪು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್​ ಆಗಿ ಅವರು ಸೇವೆ ಸಲ್ಲಿಸಿದ್ದರು.

ಸಂಜೆ 5.30 ರ ಸುಮಾರಿಗೆ ಸ್ವಗೃಹದಲ್ಲಿ ಕೊನೆಯುಸಿರೆಳೆದ ಪ್ರೊ. ಲಕ್ಕಪ್ಪಗೌಡ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಮೈಸೂರಿನಲ್ಲಿ ಎಂದು ಟಿವಿ9ಗೆ ಲಕ್ಕಪ್ಪಗೌಡ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಲಕ್ಕಪ್ಪಗೌಡ ಅವರು ಮಧ್ಯಾಹ್ನ ಕುಟುಂಬ ಸದಸ್ಯರ ಜತೆ ಚೆನ್ನಾಗಿಯೇ ಮಾತಾಡಿದ್ದರು. ಸಂಜೆ ವೇಳೆಗೆ ಚಹಾ ಬೇಕು ಎಂದು ಕೇಳಿದ್ದರು. ಚಹಾ ತರುವಷ್ಟರಲ್ಲಿ ವ್ಹೀಲ್​ ಚೇರ್​ ಮೇಲೆ ತಂದೆ ಪ್ರಾಣಹೋಗಿದೆ. ನಾಳೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಮೈಸೂರಿನ ಕುವೆಂಪುನಗರದಲ್ಲಿ ಪ್ರೊ. ಲಕ್ಕಪ್ಪಗೌಡ ಅಂತ್ಯಕ್ರಿಯೆ ನಡೆಯಲಿದೆ ಎಂದು ಪ್ರೊ. ಹೆಚ್.ಜೆ. ಲಕ್ಕಪ್ಪಗೌಡ ಪುತ್ರ ರವೀಂದ್ರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Jayanthi Death: ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಇನ್ನಿಲ್ಲ

G Madegowda Death: ಹಿರಿಯ ಹೋರಾಟಗಾರ ಜಿ ಮಾದೇಗೌಡ ನಿಧನಕ್ಕೆ ಗಣ್ಯರ ಸಂತಾಪ

(Hampi VV Retd VC Prof HJ Lakkappa Gowda Death at Mysuru)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada