Darshan Birthday ‘ಯಜಮಾನ’ನ ಹುಟ್ಟುಹಬ್ಬದಂದು.. ಕೊರೊನಾ ವಾರಿಯರ್ಸ್​​ಗೆ ದಚ್ಚು ಅಭಿಮಾನಿಗಳಿಂದ ಸನ್ಮಾನ

Darshan Birthday ‘ಯಜಮಾನ’ನ ಹುಟ್ಟುಹಬ್ಬದಂದು.. ಕೊರೊನಾ ವಾರಿಯರ್ಸ್​​ಗೆ ದಚ್ಚು ಅಭಿಮಾನಿಗಳಿಂದ ಸನ್ಮಾನ
ಕೊರೊನಾ ವಾರಿಯರ್ಸ್​​ಗೆ ದಚ್ಚು ಅಭಿಮಾನಿಗಳಿಂದ ಸನ್ಮಾನ

ನಟ ದರ್ಶನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿರುವ ‘ಯಜಮಾನ’ನ ಅಭಿಮಾನಿಗಳ ತಮ್ಮ ನೆಚ್ಚಿನ ಹೀರೋ ಬರ್ತ್​ ಡೇನ ಕೊಂಚ ಡಿಫರೆಂಟ್​ ಆಗಿ ಆಚರಿಸಿದರು. ಹೌದು, ರಾಜ್ಯದ ಎಲ್ಲೆಡೆ ದರ್ಶನ್​ ಫ್ಯಾನ್ಸ್​ ಕೇಕ್​ ಕತ್ತರಿಸಿ ಸಂಭ್ರಮಿಸಿದರೆ ಇತ್ತ ಬೆಣ್ಣೆನಗರಿಯ ದಚ್ಚು ಅಭಿಮಾನಿಗಳು ನಗರದ ಕೊರೊನಾ ವಾರಿಯರ್ಸ್​ಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು.

KUSHAL V

|

Feb 16, 2021 | 10:02 PM

ದಾವಣಗೆರೆ: ನಟ ದರ್ಶನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿರುವ ‘ಯಜಮಾನ’ನ ಅಭಿಮಾನಿಗಳ ತಮ್ಮ ನೆಚ್ಚಿನ ಹೀರೋ ಬರ್ತ್​ ಡೇನ ಕೊಂಚ ಡಿಫರೆಂಟ್​ ಆಗಿ ಆಚರಿಸಿದರು. ಹೌದು, ರಾಜ್ಯದ ಎಲ್ಲೆಡೆ ದರ್ಶನ್​ ಫ್ಯಾನ್ಸ್​ ಕೇಕ್​ ಕತ್ತರಿಸಿ ಸಂಭ್ರಮಿಸಿದರೆ ಇತ್ತ ಬೆಣ್ಣೆನಗರಿಯ ದಚ್ಚು ಅಭಿಮಾನಿಗಳು ನಗರದ ಕೊರೊನಾ ವಾರಿಯರ್ಸ್​ಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು.

ಜಿಲ್ಲೆಯ ಹೆಬ್ಬಾಳದಲ್ಲಿ ನಡೆದ ಸಮಾರಂಭದ ವೇಳೆ ದರ್ಶನ್ ಅಭಿಮಾನಿಗಳ ಬಳಗದಿಂದ ಕೊರೊನಾವಾರಿಯರ್ಸ್​ಗೆ ಸನ್ಮಾನ ಮಾಡಲಾಯಿತು. ಜೊತೆಗೆ, ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಪೆನ್​ಗಳನ್ನು ಉಡುಗೊರೆಯಾಗಿ ನೀಡಲಾಯಿತು. ಇದಲ್ಲದೆ, ಬಿಸಿಯೂಟ ತಯಾರಕರಿಗೆ ಬಟ್ಟೆಗಳನ್ನು ಸಹ ವಿತರಣೆ ಮಾಡಲಾಯಿತು.ಇದಾದ ಬಳಿಕ, ದರ್ಶನ್ ಅಭಿಮಾನಿ ಬಳಗ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಸಹ ಮಾಡಿದರು.

ಇದನ್ನೂ ಓದಿ: D Boss Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಈ ಗುಣಗಳ ಬಗ್ಗೆ ನಿಮಗೆ ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada