ಜೈಲಿನಲ್ಲಿ ರಾಜಾತಿಥ್ಯ ಕೇಸ್​: ವಿಲ್ಸನ್ ಗಾರ್ಡನ್ ನಾಗ, ವೇಲುಗೆ 3 ದಿನ ಪೊಲೀಸ್​ ಕಸ್ಟಡಿ, ದರ್ಶನ್​​ಗೆ ಸಂಕಷ್ಟ ಎದುರಾಗುತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Sep 19, 2024 | 6:03 PM

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡನ್ ನಾಗ ಮತ್ತು ವೇಲುಗೆ 3 ದಿನ ಪೊಲೀಸ್​ ಕಸ್ಟಡಿ ನೀಡಿ ಬೆಂಗಳೂರಿನ 9ನೇ ಅಪರ ಮುಖ್ಯ ನ್ಯಾಯಾಧೀಶರ ಆದೇಶ ಹೊರಡಿಸಿದೆ. ಮತ್ತೊಂದಡೆ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 42ನೇ ಎಸಿಎಂಎಂ  ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿದೆ.

ಜೈಲಿನಲ್ಲಿ ರಾಜಾತಿಥ್ಯ ಕೇಸ್​: ವಿಲ್ಸನ್ ಗಾರ್ಡನ್ ನಾಗ, ವೇಲುಗೆ 3 ದಿನ ಪೊಲೀಸ್​ ಕಸ್ಟಡಿ, ದರ್ಶನ್​​ಗೆ ಸಂಕಷ್ಟ ಎದುರಾಗುತ್ತಾ?
ಜೈಲಿನಲ್ಲಿ ರಾಜಾತಿಥ್ಯ ಕೇಸ್​: ವಿಲ್ಸನ್ ಗಾರ್ಡನ್ ನಾಗ, ವೇಲುಗೆ 3 ದಿನ ಪೊಲೀಸ್​ ಕಸ್ಟಡಿ, ದರ್ಶನ್​​ಗೆ ಸಂಕಷ್ಟ ಎದುರಾಗುತ್ತಾ?
Follow us on

ಬೆಂಗಳೂರು, ಸೆಪ್ಟೆಂಬರ್​ 19: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡನ್ ನಾಗ (Wilson Garden Naga) ಮತ್ತು ವೇಲುಗೆ 3 ದಿನ ಪೊಲೀಸ್​ ಕಸ್ಟಡಿ ನೀಡಿ ಬೆಂಗಳೂರಿನ 9ನೇ ಅಪರ ಮುಖ್ಯ ನ್ಯಾಯಾಧೀಶರ ಆದೇಶ ಹೊರಡಿಸಲಾಗಿದೆ. ಇಂದಿನಿಂದ ಸೆ.21ರ ಸಂಜೆ 4.30ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದ್ದು, ಅಷ್ಟರೊಳಗೆ ಕೋರ್ಟ್​ಗೆ ಹಾಜರುಪಡಿಸಲು ಸೂಚಿಸಲಾಗಿದೆ.

ನಾಗ ಮತ್ತು ವೇಲು ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಪೊಲೀಸರು, ಜೈಲಿನ ಒಳಗೆ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಮೊಬೈಲ್​ಗಳು ಪತ್ತೆಯಾಗಿದೆ. ಇನ್ನೂ ಕೆಲ ಮೊಬೈಲ್ ಪತ್ತೆಮಾಡಬೇಕಿದೆ. ಹೀಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ದರ್ಶನ್​ಗೆ ರಾಜಾತಿಥ್ಯ ನೀಡಿದ್ದ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ; ವಿಲ್ಸನ್ ಗಾರ್ಡನ್ ನಾಗನ ಫೋನ್ ಸೇರಿ 18 ಮೊಬೈಲ್ ಸೀಜ್

ಜೈಲಿನ ಒಳಗೆ ನಡೆದಿರುವ ವಿಚಾರ ಹಾಗಾಗಿ ಜೈಲಿನ ಒಳಗೆ ವಿಚಾರಣೆ ನಡೆಯಲಿ. ಇವರನ್ನು ಹೊರ ಕರೆತಂದು ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲಾ ಎಂದು ನಾಗನ ಪರ ವಕೀಲರು ಮನವಿ ಮಾಡಿದ್ದಾರೆ.
ಈಗಾಗಲೇ ಬೆಳಗಾವಿ ಜೈಲಿಗೆ ವರ್ಗಾವಣೆ ಆದೇಶ ಆಗಿದೆ ಎಂದು ಕೊರ್ಟ್​ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸೆಷನ್ಸ್ ಕೋರ್ಟ್ ಆದೇಶ ಪ್ರತಿಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಬಳಿಕ ಕೆಲಕಾಲ ವಿಚಾರಣೆಯನ್ನು 9ನೇ ACMM ಕೋರ್ಟ್​ ಜಡ್ಜ್ ಮುಂದೂಡಿದರು.

ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ: ನಾಳೆಗೆ ವಿಚಾರಣೆ ಮುಂದೂಡಿದ ಕೋರ್ಟ್

ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 42ನೇ ಎಸಿಎಂಎಂ  ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿದೆ. ಜಾಗವೊಂದರ ಬೀಗ ತೆರವಿಗೆ ಅನುಮತಿ ಕೋರಿ ಕಗ್ಗಲೀಪುರ ಪೊಲೀಸರಿಂದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ: ವಿಲ್ಸನ್​ ಗಾರ್ಡನ್​ ನಾಗನ ಮೊಬೈಲ್​ ವಶಕ್ಕೆ

ವೈಯಾಲಿಕಾವಲ್ ಪೊಲೀಸರಿಂದ ಚಲುವರಾಜು ದೂರಿಗೆ ಸಂಬಂಧಿಸಿದಂತೆ ಬಾಡಿ ವಾರಂಟ್​ಗೆ ಅರ್ಜಿಗೆ ಮನವಿ ಮಾಡಲಾಗಿದೆ. ಈಗಾಗಲೇ ನಿರೀಕ್ಷಣಾ ಜಾಮೀನು ಮಂಜೂರಾಗಿರುವ ಹಿನ್ನೆಲೆ ಬಾಡಿ ವಾರಂಟ್​ಗೆ ಮುನಿರತ್ನ ಪರ ವಕೀಲರಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.