ದಸರಾ ರಜೆ ವಿವಾದ: ರಜೆ ಕಡಿತದ ಬಗ್ಗೆ ಖಾಸಗಿ ಶಾಲೆಗಳು ಹೇಳಿದ್ದೇನು?

ದಸರಾ ಮಹೋತ್ಸವ ಆರಂಭವಾಗಿದ್ದು, ಅಕ್ಟೋಬರ್ 3ರಿಂದ 20 ರ ವರೆಗೆ ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಮಧ್ಯೆ, ದಸರಾ ರಜೆ ಸಂಬಂಧ ಖಾಸಗಿ ಶಾಲೆಗಳು ಸರ್ಕಾರದ ಕ್ಯಾಲೆಂಡರ್ ಮತ್ತು ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳಿಗೆ ಅಸೋಸಿಯೇಟೆಡ್ ಮ್ಯಾನೇಜ್​ಮೆಂಟ್ ಆಫ್ ಪ್ರೈಮರಿ ಆ್ಯಂಡ್ ಸೆಕೆಂಡರಿ ಸ್ಕೂಲ್ಸ್ ಸ್ಪಷ್ಟನೆ ನೀಡಿದೆ.

ದಸರಾ ರಜೆ ವಿವಾದ: ರಜೆ ಕಡಿತದ ಬಗ್ಗೆ ಖಾಸಗಿ ಶಾಲೆಗಳು ಹೇಳಿದ್ದೇನು?
ದಸರಾ ರಜೆ ವಿವಾದ: ರಜೆ ಕಡಿತದ ಬಗ್ಗೆ ಖಾಸಗಿ ಶಾಲೆಗಳು ಹೇಳಿದ್ದೇನು?

Updated on: Oct 04, 2024 | 10:50 AM

ಬೆಂಗಳೂರು, ಅಕ್ಟೋಬರ್ 4: ರಾಜ್ಯದಾದ್ಯಂತ ಸರ್ಕಾರಿ ಶಾಲೆ ಮಕ್ಕಳಿಗೆ ದಸರಾ ರಜೆಯ ಸಂಭ್ರಮವಾದರೆ ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಸಂತಸ ಇಲ್ಲ. ಇದಕ್ಕೆ ಕಾರಣ ಖಾಸಗಿ ಮತ್ತು ಅನುದಾನಿತ ಶಾಲೆಗಳು ರಜೆಯಲ್ಲಿ ಕಡಿತ ಮಾಡುತ್ತಿರುವುದು. ಈ ಕುರಿತು ಕೇಳಿಬಂದಿರುವ ಆರೋಪಗಳಿಗೆ ಇದೀಗ ಅಸೋಸಿಯೇಟೆಡ್ ಮ್ಯಾನೇಜ್​ಮೆಂಟ್ ಆಫ್ ಪ್ರೈಮರಿ ಆ್ಯಂಡ್ ಸೆಕೆಂಡರಿ ಸ್ಕೂಲ್ಸ್ ಸ್ಪಷ್ಟೀಕರಣ ನೀಡಿದೆ.

ದಸರಾ ರಜೆಗೆ ಸಂಬಂಧಿಸಿದಂತೆ ಕೆಲವು ಖಾಸಗಿ ಶಾಲೆಗಳು ಸರ್ಕಾರಿ ಶೈಕ್ಷಣಿಕ ಕ್ಯಾಲೆಂಡರ್‌ಗೆ ಬದ್ಧವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಸೋಸಿಯೇಟೆಡ್ ಮ್ಯಾನೇಜ್​ಮೆಂಟ್ ಆಫ್ ಪ್ರೈಮರಿ ಆ್ಯಂಡ್ ಸೆಕೆಂಡರಿ ಸ್ಕೂಲ್ಸ್, ರಜೆಯನ್ನು ನಿರ್ಧರಿಸುವ ವಿವೇಚನಾ ಅಧಿಕಾರವನ್ನು ಖಾಸಗಿ ಶಾಲೆಗಳು ಹೊಂದಿವೆ ಎಂದಿದೆ.

ಕ್ರಿಸ್‌ಮಸ್ ನಿಮಿತ್ತ ಡಿಸೆಂಬರ್‌ನಲ್ಲಿ ಮತ್ತೆ ರಜೆ ಘೋಷಿಸಬೇಕಾಗಿರುವುದರಿಂದ ಖಾಸಗಿ ಶಾಲೆಗಳು ದಸರಾ ರಜೆಯನ್ನು ಕಡಿತಗೊಳಿಸಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಸ್‌ಮಸ್ ಸಮಯದಲ್ಲಿ ನಾವು ಖಾಸಗಿ ಶಾಲೆಗಳಿಗೆ ಕನಿಷ್ಠ ಒಂದು ವಾರ ರಜೆ ಘೋಷಿಸಬೇಕು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಕ್ರಿಸ್‌ಮಸ್ ಸಮಯದಲ್ಲಿ ರಜೆ ನೀಡುವುದಿಲ್ಲ. ಈ ಕಾರಣದಿಂದ ನಾವು ದಸರಾ ರಜೆಯಲ್ಲಿ ಕಡಿತ ಮಾಡುತ್ತೇವೆ. ಇದು ನಮ್ಮ ವಿವೇಚನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭ

ದಸರಾ ರಜೆಯನ್ನು ಮೊಟಕುಗೊಳಿಸಿದ ಖಾಸಗಿ ಶಾಲೆಗಳ ನಿರ್ಧಾರವನ್ನು ಪ್ರಶ್ನಿಸಿ ಕೆಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿರುವುದಾಗಿ ಅಸೋಸಿಯೇಷನ್ ​​ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us