ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ ನನ್ನ ತಾಯಿಯ ಜೀವ ಉಳಿಸಿ.. ಅಮ್ಮನನ್ನು ಕಾಪಾಡಲು ಪುತ್ರಿ ಅಕ್ರಂದನ
ನಮ್ಮ ಅಮ್ಮನ ಪ್ರಾಣ ಉಳಿಸಿ ಕೊಡಿ ಪ್ಲೀಸ್. ನಮ್ಮ ಅಮ್ಮನಿಗೆ ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ. ನಮ್ಮ ಅಮ್ಮನ ಚಿಕಿತ್ಸೆಗೆ ದಯಬಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ಸೋಂಕಿತರು ಪರದಾಡುತ್ತಿದ್ದಾರೆ. ಸುಶ್ಮಿತಾ ಎಂಬುವವರು ತಮ್ಮ ಅಮ್ಮನಿಗೆ ಚಿಕಿತ್ಸೆ ಕೊಡಿಸಲಾಗದೆ ಕಂಗಾಲಾಗಿದ್ದಾರೆ.
ಬೆಂಗಳೂರು: ಕೊರೊನಾ, ಬ್ಲಾಕ್ ಫಂಗಸ್ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾದ ಜೊತೆ ಯುದ್ಧ ಮಾಡಿ ಇನ್ನೇನು ಜೀವನ ಶುರು ಮಾಡುವ ಸಂತೋಷದಲ್ಲಿರಬೇಕಾದ್ರೆ ಬ್ಲಾಕ್ ಫಂಗಸ್ ಮತ್ತೆ ಜೀವನವನ್ನು ನರಕಕ್ಕೆ ತಳುತ್ತಿದೆ. ಸದ್ಯ ಈಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ ಸೋಂಕಿತರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಇಲ್ಲೊಬ್ಬ ಪುತ್ರಿ ತನ್ನ ತಾಯಿಯ ಪ್ರಾಣ ಉಳಿಸಲು ಸರ್ಕಾರದ ಬಳಿ ಭಿಕ್ಷೆ ಬೇಡ್ತಿದ್ದಾರೆ.
ನಮ್ಮ ಅಮ್ಮನ ಪ್ರಾಣ ಉಳಿಸಿ ಕೊಡಿ ಪ್ಲೀಸ್. ನಮ್ಮ ಅಮ್ಮನಿಗೆ ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ. ನಮ್ಮ ಅಮ್ಮನ ಚಿಕಿತ್ಸೆಗೆ ದಯಬಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ಸೋಂಕಿತರು ಪರದಾಡುತ್ತಿದ್ದಾರೆ. ಸುಶ್ಮಿತಾ ಎಂಬುವವರು ತಮ್ಮ ಅಮ್ಮನಿಗೆ ಚಿಕಿತ್ಸೆ ಕೊಡಿಸಲಾಗದೆ ಕಂಗಾಲಾಗಿದ್ದಾರೆ. ಒಂದು ತಿಂಗಳಿನಿಂದ ನಮ್ಮ ಅಮ್ಮ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಎಂಟು ಲಕ್ಷ ಖರ್ಚು ಮಾಡಿದ್ದೀವಿ. ಒಂದು ತಿಂಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕಳೆದ ಶನಿವಾರದಿಂದ ಬ್ಲಾಕ್ ಫಂಗಸ್ ತಗುಲಿರುವುದು ಪತ್ತೆಯಾಗಿದೆ.
ಸರ್ಕಾರ ಹೇಳ್ತಿದೆ, ಎಲ್ಲ ಕಡೆ ಆಂಪೊಟೆರಿಸಿನ್ ಬಿ ಸಿಗ್ತಿದೆ ಅಂತ. ಆದರೆ ಎಲ್ಲೂ ಸರಿಯಾಗಿ ಸಿಗ್ತಿಲ್ಲ. ಹೀಗೆ ಮುಂದುವರಿದ್ರೆ ನಮ್ಮ ತಾಯಿಯ ಪ್ರಾಣಕ್ಕೆ ಕುತ್ತು ಬರುತ್ತದೆ. ದಿನ ದಿನ ಈ ಸಮಸ್ಯೆ ಮುಂದುವರಿದ್ರೆ ಬೇರೆ ಬೇರೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಆಂಪೊಟೆರಿಸಿನ್ ಬಿ ಒಂದು ವೈಯಲ್ಗೆ ಏಳು ಸಾವಿರ ಬೇಕು. ನಮ್ಮ ಅಮ್ಮನಿಗೆ ಒಂದು ದಿನಕ್ಕೆ ಆರು ವೈಯಲ್ ಕೊಡಬೇಕು. ಇದರಿಂದ ಒಂದು ದಿನಕ್ಕೆ 42 ಸಾವಿರ ರೂಪಾಯಿ ಬೇಕು. ಸರ್ಕಾರ ನಮಗೆ ಸಹಾಯ ಮಾಡಬೇಕು. ಆಂಪೊಟೆರಿಸಿನ್ ಬಿಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು. ನಮ್ಮ ಅಮ್ಮನಿಗೆ ಹದಿನಾಲ್ಕು ದಿನಗಳ ಆಂಪೊಟೆರಿಸಿನ್ ಬಿ ಕೊಡಲು ವೈದ್ಯರು ಹೇಳಿದ್ದಾರೆ. ಎಂದು ಬ್ಲಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ಆಸ್ಟಿನ್ ಟೌನ್ ನಿವಾಸಿ ಶಶಿಕಲಾ ಅವರ ಪುತ್ರಿ ಸುಶ್ಮಿತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ