100 ಬೆಡ್​ಗಳ ಕೊವಿಡ್ ಕೇರ್ ಆಸ್ಪತ್ರೆ ನಿರ್ಮಾಣ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂದಾಳತ್ವದಲ್ಲಿ ಮೂರನೇ ಅಲೆ ನಿವಾರಣೆಗೆ ಸಿದ್ಧತೆ

100 ಬೆಡ್​ಗಳ ಕೊವಿಡ್ ಕೇರ್ ಆಸ್ಪತ್ರೆ ನಿರ್ಮಾಣ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂದಾಳತ್ವದಲ್ಲಿ ಮೂರನೇ ಅಲೆ ನಿವಾರಣೆಗೆ ಸಿದ್ಧತೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂದಾಳತ್ವದಲ್ಲಿ ಮೂರನೇ ಅಲೆ ನಿವಾರಣೆಗೆ ಸಿದ್ಧತೆ

ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಕೇವಲ 13 ದಿನಗಳಲ್ಲಿ 100 ಬೆಡ್​ಗಳ ಕೊವಿಡ್ ಕೇರ್ ವಿನೂತನ ಆಸ್ಪತ್ರೆ ನಿರ್ಮಿಸುವ ಮೂಲಕ‌ ಹೊಸ ಇತಿಹಾಸ ಸೃಷ್ಟಿಸಿದೆ‌. ಶನಿವಾರ(ಜೂನ್ 12) ಆಸ್ಪತ್ರೆ ಉದ್ಘಾಟನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೂರನೇ ಅಲೆಯ ಭೀತಿ ಹಾಗೂ ಕೊರೊನಾ ನಿಯಂತ್ರಣ ಮಾಡುವುದಕ್ಕೆ ಈ ಆಸ್ಪತ್ರೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

TV9kannada Web Team

| Edited By: preethi shettigar

Jun 13, 2021 | 2:08 PM

ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿತ್ತು. ಆದರೆ ಸದ್ಯ ಲಾಕ್​ಡೌನ್​ನಿಂದಾಗಿ ಪರಿಸ್ಥಿತಿ ಸುಧಾರಿಸಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆ ಜನರು ಮತ್ತು ಸರ್ಕಾರ ಹೆಚ್ಚು ಮುಂಜಾಗೃತೆ ವಹಿಸುವುದು ಅಗತ್ಯವಾಗಿದೆ. ಸದ್ಯ ಮೂರನೇ ಅಲೆಯ ಪರಿಣಾವನ್ನು ಊಹಿಸಿರುವ ಹುಬ್ಬಳಿ ಜಿಲ್ಲೆಯಲ್ಲಿ ಕೇವಲ 13 ದಿನಗಳಲ್ಲಿ 100 ಬೆಡ್​ಗಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮುತುವರ್ಜಿಯಿಂದ ಖಾಸಗಿ ಸಂಸ್ಥೆಯೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ‌ ಮಾಡುವ ಮೂಲಕ ಕೊವಿಡ್ ಸೋಂಕಿತರ ಆರೈಕೆಗೆ ಮುಂದಾಗಿದೆ.

ಧಾರವಾಡ ಜಿಲ್ಲಾಡಳಿತ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಕೇಂದ್ರ ಸಚಿವ ಹಾಗೂ ಸ್ಥಳೀಯ ಸಂಸದ ಪ್ರಹ್ಲಾದ್ ಜೋಶಿಯ ಮನವಿ ಮೇರೆಗೆ ವೇದಾಂತ ಫೌಂಡೇಶನ್ ಸಂಸ್ಥೆ ನಾಲ್ಕೈದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ‌ಮಾಡಿದೆ. ಅನಿಲ್ ಅಗರವಾಲ್ ಒಡೆತನದ ವೇದಾಂತ ಫೌಂಡೇಶನ್‌ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಕೇವಲ 13 ದಿನಗಳಲ್ಲಿ 100 ಬೆಡ್​ಗಳ ಕೊವಿಡ್ ಕೇರ್ ವಿನೂತನ ಆಸ್ಪತ್ರೆ ನಿರ್ಮಿಸುವ ಮೂಲಕ‌ ಹೊಸ ಇತಿಹಾಸ ಸೃಷ್ಟಿಸಿದೆ‌. ಶನಿವಾರ(ಜೂನ್ 12) ಆಸ್ಪತ್ರೆ ಉದ್ಘಾಟನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೂರನೇ ಅಲೆಯ ಭೀತಿ ಹಾಗೂ ಕೊರೊನಾ ನಿಯಂತ್ರಣ ಮಾಡುವುದಕ್ಕೆ ಈ ಆಸ್ಪತ್ರೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

13 ದಿನಗಳಲ್ಲಿ ಈ ವಿನೂತನವಾದಂತಹ ಕೊವಿಡ್ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಇದರಲ್ಲಿ 80 ಆಕ್ಸಿಜನ್ 20 ವೆಂಟಿಲೆಟರ್ ಬೆಡ್​ಗಳನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಕಿಮ್ಸ್ ಅನ್ನು ಕೊರೊನಾ ಆಸ್ಪತ್ರೆ ಮಾಡಿರುವುದರಿಂದ ನಾನ್ ಕೊವಿಡ್ ರೋಗಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕಿಮ್ಸ್ ನಲ್ಲಿರುವ ಕೊರೊನಾ ರೋಗಿಗಳನ್ನು ಇಲ್ಲಿಗೆ ಶಿಫ್ಟ್ ಮಾಡಿ, ನಾನ್ ಕೊವಿಡ್ ರೊಗಿಗಳಿಗೆ ಅನೂಕುಲ ಮಾಡಿಕೊಡಲಾಗುತ್ತದೆ. ಹೀಗಾಗೇ ಉತ್ತರ ಕರ್ನಾಟಕ ಭಾಗದ ಜನರಿಗೆ ಈ ಆಸ್ಪತ್ರೆ ಬಹಳ ಅನೂಕುಲವಾಗಲಿದೆ. ಇನ್ನು ಈ ಆಸ್ಪತ್ರೆ ಸುಮಾರು 10 ವರ್ಷಗಳ ಕಾಲ ಇರಲಿದ್ದು, ಅಲ್ಲಿಯವರೆಗೂ ಕೊರೊನಾ ರೋಗಿಗಳಿಗೆ ಮೀಸಲಾಡಲಾಗುತ್ತದೆ. ನೂತನವಾಗಿ ನಿರ್ಮಿಸಲಾಗಿರುವ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳಿಗೆ ಅವಶ್ಯಕವಿರುವ ಸಕಲ ಸೌಲಭ್ಯಗಳನ್ನೂ ಒದಗಿಸಲಾಗಿದ್ದು, ನೀರು, ಸುಸಜ್ಜಿತ ಶೌಚಾಲಯ‌ ಸೇರಿದಂತೆ ಶಬ್ಧ ನಿರೋಧಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಈಗಾಗಲೇ ಕಿಮ್ಸ್​ನಲ್ಲಿ ಕೊವಿಡ್​ಗಾಗಿ ಒಂದು ಸಾವಿರ ಬೆಡ್​ಗಳನ್ನು ನಿಯೋಜನೆ ಮಾಡಲಾಗಿದೆ. ಆದರೂ ಕೂಡ ಬೆಡ್​ಗಳಿಗೆ ಕೊರತೆ ತಲೆದೋರುತ್ತಿರುವ ಹಿನ್ನೆಲೆ ಈ ವಿನೂತನ ಆಸ್ಪತ್ರೆಯನ್ನು ವೇದಾಂತ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿದೆ. ಸುಸಜ್ಜಿತ ವ್ಯವಸ್ಥೆಯೊಂದಿಗೆ ಕಿಮ್ಸ್​ಗೆ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ವಹಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಪ್ರಹ್ಲಾದ್ ಜೋಶಿ ಕಾರ್ಯ ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ:

ಕೊವಿಡ್​ ಸಮಯದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಲೆ ಜ್ಞಾನ ಹೆಚ್ಚಿಸುವ ಕೆಲವು ಸಲಹೆಗಳು ಹೀಗಿವೆ

ಕೊರೊನಾ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ಪಡೆದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೋಟಿಸ್​; ದಾಖಲೆ ಸಿಕ್ಕರೆ ಕ್ರಮ ಕೈಗೊಳ್ಳುವ ಎಚ್ಚರಿಕೆ

Follow us on

Related Stories

Most Read Stories

Click on your DTH Provider to Add TV9 Kannada