3 ದಶಕಗಳ ನಂತರ ನಡೆದ ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳು ಅಂಗೀಕಾರ
ದಾವಣಗೆರೆ ನಗರದಲ್ಲಿ ನಡೆದ ಅದ್ಧೂರಿ ಶೃಂಗ ಸಮ್ಮೇಳನದಲ್ಲಿ ವೀರಶೈವ ಪಂಚಪೀಠಗಳ ಪೀಠಾಧೀಶ್ವರರು, ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಭಕ್ತರಿಗೆ ದರ್ಶನ ನೀಡಿದರು. ದರ್ಶನದ ಜೊತೆಗೆ ಎಲ್ಲ ಶ್ರೀಗಳು ತಮ್ಮ ಹಿತವಚನ ನೀಡಿದರು. ಇನ್ನು ವೀರಶೈವ ಶಿವಾಚಾರ್ಯರ ಶೃಂಗ ಸಭೆಯ ಸಮಾರೋಪ ಸಮಾರಂಭದಲ್ಲಿ ಶಿವಾಚಾರ್ಯರ ಶೃಂಗ ಸಭೆಯಲ್ಲಿ ಮಹತ್ವದ 12 ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ಬೆಂಗಳೂರು, (ಜುಲೈ 22): ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ದಾವಣಗೆರೆಯ (Davanagere) ರೇಣುಕಾ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ ವೀರಶೈವ ಲಿಂಗಾಯತ ಶಿವಾಚಾರ್ಯರ ಶೃಂಗಸಭೆ (virashaiva lingayat shivacharya summit) ಅಂತ್ಯವಾಗಿದ್ದು, 40 ವರ್ಷಗಳ ನಡೆದ ಶಿವಾಚಾರ್ಯರ ಶೃಂಗ ಸಭೆಯ ಇಂದಿನ ಸಮಾರೋಪ ಸಮಾರಂಭದಲ್ಲಿ 12 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. 12 ನಿರ್ಣಯಗಳ ಪೈಕಿ ಪ್ರಮುಖವಾಗಿ ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಉಪಜಾತಿ ಯಾವುದೇ ಇದ್ದರೂ ವೀರಶೈವರು ಒಗ್ಗಟ್ಟು ಇರಬೇಕು ಎಂದು ಕರೆ ನೀಡಲಾಗಿದೆ.
ಶಿವಾಚಾರ್ಯರ ಶೃಂಗಸಭೆಯ ಪ್ರಮುಖ ನಿರ್ಣಯಗಳು
- ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸಬೇಕು
- ಉಪಜಾತಿ ಯಾವುದೇ ಇದ್ದರೂ ವೀರಶೈವರು ಒಗ್ಗಟ್ಟು ಇರಬೇಕು
- ಒಳ ಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು
- ಜಾತಿಗಣತಿ ವಿಚಾರವಾಗಿ ನಿಯೋಗದ ಮೂಲಕ ಪ್ರಧಾನಿ ಭೇಟಿ.
- ವೀರಶೈವ ಲಿಂಗಾಯತ ಒಳಪಂಗಡಗಳಿಗೆ ನೀಡಲಾಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೀಸಲಾತಿ ಮುಂದುವರಿಕೆ ಆಗಬೇಕು.
- ವೀರಶೈವ ಲಿಂಗಾಯತ ಮಹಾಸಭಾ ಎಲ್ಲಾ ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದ ಸಂಘಟನೆಗಳು ಯಾವುದೇ ಕಾರ್ಯಕ್ರಮ, ರ್ಯಾಲಿ ಸೇರಿದಂತೆ ಸಮಾರಂಭ ನಡೆಸಿದರೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಫೋಟೋ ಹಾಕಬೇಕು. ಕೆಲವು ಕಡೆ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿ, ಬಸವಣ್ಣವರ ಥಮ್ಲಂ ಬಲಭಾಗದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಹಾಕದೇ ಕೆಲವು ಸಂಘಟನೆಗಳು ಪತ್ರಿಕೆಗಳಲ್ಲಿ ಪ್ರಕಟಿಸಿದ್ದು ಗಮನಕ್ಕೆ ಬಂದಿದೆ. ಹಾಗೆ ಮಾಡಬಾರದು. ಈ ಮೂಲಕ ಮಹಾಸಭಾಗೆ ತಿಳುವಳಿಕೆ ಕೊಡುತ್ತೇವೆ. ಪಂಚಪೀಠಾಧ್ಯಕ್ಷರ ಐದು ಫೋಟೋ ಹಾಕಲು ಕಷ್ಟವಾಗುತ್ತದೆ. ಐದೂ ಫೋಟೋ ಹಾಕಲು ಸಾಧ್ಯ ಆಗದಿದ್ರೆ ರೇಣುಕಾಚಾರ್ಯರ ಒಂದು ಫೋಟೋವಾದರೂ ಇರಬೇಕು ಎಂಬುದು ಪಂಚಪೀಠಾಧ್ಯಕ್ಷರ ಬಯಕೆ. ಇದಕ್ಕೆ ಎಲ್ಲರ ಸಹಮತ ಇದೆ.
- ವೀರಶೈವ ಲಿಂಗಾಯತ ಸಮುದಾಯದ ತತ್ವ, ಸಿದ್ಧಾಂತ ಮನವರಿಕೆ ಮಾಡಿಕೊಡಬೇಕು.
- ಗುರು ಪರಂಪರೆ, ಪ್ರಾಚೀನ ಪರಂಪರೆ ಆಚರಣೆ ಸೇರಿದಂತೆ ಹಿಂದಿನಂತೆ ಎಲ್ಲವೂ ನಡೆಯುವಂತಾಗಬೇಕು ಯುವಜನಾಂಗದವರಿಗೆ ವೀರಶೈವ ಲಿಂಗಾಯತ ಧರ್ಮದ ಆಚರಣೆ, ಇತಿಹಾಸ, ಧಾರ್ಮಿಕ ಪರಂಪರೆ ತಿಳಿಸಿಕೊಡುವ ಕೆಲಸ ಆಗಬೇಕು.
- ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳ ವಿಕಲಚೇತನರು, ಶೋಷಿತರ ಹಿತರಕ್ಷಣೆ, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು.
- ಪಂಚಪೀಠಗಳು ಮತ್ತು ಶಾಖಾ ಮಠಗಳ ನಡುವೆ ಉತ್ತಮ ಬಾಂಧವ್ಯ, ವಾತಾವರಣ ನಿರ್ಮಾಣಗೊಳ್ಳಬೇಕು. ಆಯಾ ಪೀಠಗಳ ಪೀಠಾಧ್ಯಕ್ಷರು ಶಾಖಾ ಮಠಗಳ ಸಮಸ್ಯೆ ಪರಿಹರಿಸಲು ಮಾರ್ಗದರ್ಶನ ನೀಡಿ ಬಲಪಡಿಸಬೇಕು. ಶಾಖಾ ಮಠದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು.
- ಪ್ರತಿವರ್ಷವೂ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗಸಭೆ ನಡೆಸಿ ವೀರಶೈವ ಲಿಂಗಾಯತ ಪರಂಪರೆ ಆದರ್ಶ ಪಾಲನೆ ಮಾಡಲಾಗುವುದು.
- ಉತ್ತರ ಭಾರತದ ದೆಹಲಿ, ರಾಜಸ್ತಾನ, ಜಮ್ಮುಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನಾದಿ ಕಾಲದಿಂದಲೂ ವೀರಶೈವ ಲಿಂಗಾಯತ ಸಮುದಾಯದವರು ವಾಸವಿದ್ದು, ಅವರಿಗೂ ಸರ್ಕಾರಿ ಸೌಲಭ್ಯಗಳು, ಯೋಜನೆಗಳನ್ನು ರೂಪಿಸಬೇಕು.
ಸಮ್ಮೇಳನದಲ್ಲಿ ರಂಭಾಪುರಿಶ್ರೀ ಹೇಳಿದ್ದೇನು?
ಸಮ್ಮೇಳನದಲ್ಲಿ ರಂಭಾಪುರಿಶ್ರೀ ಮಾತನಾಡಿ, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ವೀರಶೈವ ಧರ್ಮ ಸ್ಥಾಪನೆ ಆಗಿದೆ. ಆಧುನಿಕ ಕಾಲದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತವಾಗಿದೆ, ಧಾರ್ಮಿಕ ಕ್ಷೇತ್ರ ಹೊರತಾಗಿಲ್ಲ. ಸಂಸ್ಕಾರ, ಸಂಸ್ಕೃತಿ ಕೊಟ್ಟಿದ್ದು ವೀರಶೈವ ಧರ್ಮ. ವೀರಶೈವ ಸಮುದಾಯದಲ್ಲಿ ನೂರಾರು ಒಳಪಂಗಡಗಳಿವೆ. ಕೆಲ ಒಳಪಂಗಡಗಳಿಗೆ ಮಾತ್ರ ರಾಜಕೀಯದಲ್ಲಿ ಅವಕಾಶ ಸಿಕ್ಕಿವೆ. ಈಗ ಜಾತಿಗೊಂದು ಮಠಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಚಪೀಠಗಳು ಧೃತಿಗೆಡಬೇಕಾಗಿಲ್ಲ. ಸಮುದಾಯದ ಬಲವರ್ಧನೆ ಪಂಚಪೀಠಗಳಿಂದ ಮಾತ್ರ ಸಾಧ್ಯ. ವೀರಶೈವ ಲಿಂಗಾಯತ ಮಠಾಧೀಶರನ್ನು ಒಂದೇ ವೇದಿಕೆಗೆ ತರುವ ಸಂಕಲ್ಪ. ಎಲ್ಲಾ ಪೀಠಾಚಾರ್ಯ ಹಾಗೂ ಶಿವಾಚಾರ್ಯ ಒಂದಾದರೆ. ವೀರಶೈವ ಲಿಂಗಾಯತರನ್ನ ಒಂದು ಮಾಡುವುದು ಕಷ್ಟವಲ್ಲ. ವೀರಶೈವ ಬೇರೆ ಲಿಂಗಾಯತವೇ ಬೇರೆ ಎಂಬ ಸಂದೇಶ ಸಾರಿದ್ರು. ವೀರಶೈವ, ಲಿಂಗಾಯತ ಬೇರೆ ಎಂದವರು ಚುನಾವಣೆಯಲ್ಲಿ ಸೋತರು. ಈಗ ಪಂಚಪೀಠಗಳು ಒಂದಾಗಿದೆ. ಇದು ಕ್ಷಣಿಕ ಖುಷಿ ಆಗಬಾರದು ಎಂದು ಹೇಳಿದರು.
ಎರಡು ದಿನಗಳ ಪೀಠಾಚಾರ್ಯ ಮತ್ತು ಶಿವಾಚಾರ್ಯ ಸಮ್ಮೇಳನದಕ್ಕೆ ಪ್ರತಿಕ್ರಿಯೆ ಅದ್ಭುತ. ಸಮಾಜದವರು 16 ವರ್ಷ ಗಳಿಂದ ಪಂಚಪೀಠಗಳು ಒಂದಾಗಬೇಕೆಂದು ಕಾಯುತ್ತಿದ್ದರು. ಅದು ಸಕಾರವಾಗಿದೆ. ಎಲ್ಲ ಸಮುದಾಯದ ಜನಕ್ಕೆ ಆಧ್ಯಾತ್ಮಿಕ ಚಿಂತನೆ ನೀಡಿದಂತಾಗಿದೆ. ನಮ್ಮ ಕರೆಗೆ ಸ್ಪಂದಿಸಿ ಎಲ್ಲ ಪೀಠದವರು ಬಂದಿದ್ದಾರೆ.ವೀರಶೈವ ಲಿಂಗಾಯತ ದೊಡ್ಡ ಸಮಾಜ. ಸಮಾಜಕ್ಕೆ ಒಳ್ಳೆಯದಾಗಲಿ ಎಂದುವೀರಶೈವ ಧರ್ಮ ಸ್ಥಾಪನೆ ಆಗಿದೆ.ಇಂದಿನ ಆಧುನಿಕ ಕಾಲದಲ್ಲಿ ಎಲ್ಲ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತ ವಾಗಿದೆ. ಅದಕ್ಕೆ ಧಾರ್ಮಿಕ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ ಎಂದರು.
ಎರಡು ದಿನಗಳ ಪೀಠಾಚಾರ್ಯ ಮತ್ತು ಶಿವಾಚಾರ್ಯ ಸಮ್ಮೇಳನದಕ್ಕೆ ಪ್ರತಿಕ್ರಿಯೆ ಅದ್ಭುತ. ಸಮಾಜದವರು 16 ವರ್ಷ ಗಳಿಂದ ಪಂಚಪೀಠಗಳು ಒಂದಾಗಬೇಕೆಂದು ಕಸಯುತ್ತಿದ್ದರು. ಅದು ಸಕಾರವಾಗಿದೆ. ಎಲ್ಲ ಸಮುದಾಯದ ಜನಕ್ಕೆ ಆಧ್ಯಾತ್ಮಿಕ ಚಿಂತನೆ ನೀಡಿದಂತಾಗಿದೆ. ನಮ್ಮ ಕರೆಗೆ ಸ್ಪಂದಿಸಿ ಎಲ್ಲ ಪೀಠದವರು ಬಂದಿದ್ದಾರೆ.ವೀರಶೈವ ಲಿಂಗಾಯತ ದೊಡ್ಡ ಸಮಾಜ. ಸಮಾಜಕ್ಕೆ ಒಳ್ಳೆಯದಾಗಲಿ ಎಂದುವೀರಶೈವ ಧರ್ಮ ಸ್ಥಾಪನೆ ಆಗಿದೆ.ಇಂದಿನ ಆಧುನಿಕ ಕಾಲದಲ್ಲಿ ಎಲ್ಲ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತ ವಾಗಿದೆ. ಅದಕ್ಕೆ ಧಾರ್ಮಿಕ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ ಎಂದರು.
ಸಂಸ್ಕಾರ ಸಂಸ್ಕೃತಿ ಕೊಟ್ಟಿದ್ದು ವೀರಶೈವ ಧರ್ಮ. ಧಾರ್ಮಿಕ ಕ್ಷೇತ್ರ ಸೇರಿದ ಎಲ್ಲಾ ರಂಗಗಳು ಕಲುಷಿತ ಗೊಂಡಿದ್ದರು. ಕಾವಿ,ಖಾಕಿ, ಖಾದಿಯಲ್ಲಿ ಒಳ್ಳೆಯ ವ್ಯಕ್ತಿತ್ವ ಇಟ್ಟುಕೊಂಡವರು ಇದ್ದಾರೆ. ವೀರಶೈವ ಸಮಾಜದಲ್ಲಿ ನೂರಾರು ಒಳಪಂಗಡಗಳಿವೆ. ಕೆಲ ಒಳಪಂಗಡಗಳಿಗೆ ಮಾತ್ರ ರಾಜಕೀಯ ಅವಕಾಶ ಸಿಕ್ಕಿವೆ. ಅವಕಾಶ ಸಿಗದ ಹಿನ್ನೆಲೆ ಪ್ರತ್ಯೇಕ ಆಗಿದೆ. ಇದು ಕಳೆದ 20 ವರ್ಷಗಳಿಂದ ಆರಂಭವಾಗಿವೆ. ಈಗ ಜಾತಿಗೊಂದು ಮಠಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಚಪೀಠಗಳ ದೃತಿಗೇಡಬೇಕಾಗಿಲ್ಲ.ಎಲ್ಲರೂ ಗುರುಪೀಠಗಳ ಬಗ್ಗೆ ಗೌರವ ವಿದೆ ಎಂದು ಹೇಳಿದರು.
ಸಮಾಜ ಬಲವರ್ಧನೆ ಪಂಚಪೀಠಗಳಿಂದ ಮಾತ್ರ ಸಾದ್ಯ. ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಮಠಾಧೀಶರುಗಳ ಒಂದೇ ವೇದಿಕೆ ತರುವ ಸಂಕಲ್ಪ ಇದೆ. ಎಲ್ಲ ಪೀಠಾಚಾರ್ಯ ಹಾಗೂ ಶಿವಾಚಾರ್ಯ ಒಂದಾದರೇ ಬರುವ ದಿನಗಳಲ್ಲಿ ವೀರಶೈವ ಲಿಂಗಾಯತರನ್ನ ಒಂದು ಮಾಡುವುದು ಕಷ್ಟವಲ್ಲ. ನಾವು 2016 ರಲ್ಲಿ ರಂಭಾಪುರಿ ಪೀಠದಲ್ಲಿ ಗುರು ವಿರಕ್ತರನ್ನ ಒಂದು ಮಾಡಲಾಗಿತ್ತು. ವೀರಶೈವ ಮಹಾ ಸಭೆಗೂ ಮೊದಲೇ ಗುರು ವಿರಕ್ತರು ಒಂದು ಮಾಡುವ ಕೆಲ್ಸಾ ರಂಭಾಪುರಿ ಪೀಠ ಮಾಡಿದೆ. ಈ ಹಿಂದೆ ಕೂಡಲ ಸಂಗಮದಲ್ಲಿ ನಡೆದ ಸಮಾರಂಭದಲ್ಲಿ ಕೆಲ ಅಡೆತಡೆಗಳು ನಡೆದವು. ಒಂದು ವರ್ಗದ ಜನ 12ನೇ ಶತಮಾನ ದ ಬಿಟ್ಟರೇ ಬೇರೆಯದನ್ನ ಅರಿಯುತ್ತಿಲ್ಲ. ಅವರ ಸಂಕುಚಿತ ಮನೋಭಾವ ಕಾರಣ ವೀರಶೈವ ನೇ ಬೇರೆ ಲಿಂಗಾಯತ ವೇ ಬೇರೆ ಎಂಬ ಸಂದೇಶ ಸಾರಿದರು ಎಂದು ತಿಳಿಸಿದರು.
ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಂದ ಕೆಲ ನಾಯಕರು ಚುನಾವಣೆಯಲ್ಲಿ ಸೋತರು ದೇವರಾಜ ಅರಸು ಕಾಲದಲ್ಲಿ ಹಾವನೂರ ವರದಿ ತಂದು ಮೀಸಲಾತಿ ಹೆಸರಿನಲ್ಲಿ ವೀರಶೈವ ಲಿಂಗಾಯತ ರನ್ನ ಒಡೆಯಲಾಯಿತು. ಅಲ್ಲಿಂದ ಚಿದ್ರ ಚಿದ್ರವಾಗಿ ಹೋಗಿತ್ತು. ಆದ್ರೆ ಈಗ ಪಂಚಪೀಠಗಳ ಒಂದಾಗಿದೆ. ಇದು ಕ್ಷಣಿಕ ಖುಷಿ ಆಗಬಾರದು. ವಿರಕ್ತರಲ್ಲಿ ವೀರಶೈವ ಹಾಗೂ ಲಿಂಗಾಯತ ಒಂದು ಎಂಬ ಭಾವನೆ ಬಂದ್ರೆ ಅವರ ಬಾಯಿಗೆ ಹಾಲು ತುಪ್ಪು ಹಾಕುತ್ತೇವೆ. ವಿರಕ್ತರ ಮಟ್ಟಕ್ಕೆ ನಾವು ಇಳಿಯಲು ಆಗಲ್ಲ. ಆದ್ರೆ ಅವರನ್ನ ನಾವು ಒಡಲಿನಲ್ಲಿ ಇಟ್ಟಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಶಿ ಶ್ರೀಗಳ ಹೇಳಿದ್ದಿಷ್ಟು
ತ್ರಿವೇಣಿ ಸಂಗಮ ಉತ್ತರ ಭಾರತದಲ್ಲಿ ಆದ ಹಾಗೆ ದಾವಣಗೆರೆ ಯಲ್ಲಿ ಐದು ನದಿಗಳ ಸಂಗಮವಾಗಿದೆ. ಪೀಠಾಚಾರ್ಯ ಒಂದಾಗಲು ರಂಭಾಪುರಿ ಶ್ರೀ ಗಳು ಮಹತ್ವದ ಕಾರ್ಯವಾಗಿದೆ. ಮುಂದೆ ಗುರು ವಿರಕ್ತರು ಒಂದಾಗುವ ಕೆಲಸ ರಂಭಾಪುರಿ ಶ್ರೀ ಗಳು ಮುಂದಾಗಿದ್ದಾರೆ.ಅದಕ್ಕೆ ನಮ್ಮ ಬೆಂಬಲವಿದೆ ಎಂದರು.
Published On - 4:51 pm, Tue, 22 July 25



