AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಣ್ಣೆ ನಗರಿ ದಾವಣಗೆರೆಯಲ್ಲೂ ಹೃದಯಾಘಾತ ಆತಂಕ ..ಆಸ್ಪತ್ರೆಗಳಲ್ಲಿ ಜನಜಂಗುಳಿ

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಗೊತ್ತಿಲ್ಲದೇ ಜನರ ಹೃದಯ ಹಿಂಡುವ ಘಟನೆ ಬೆಳಕಿಗೆ ಬರುತ್ತಿವೆ. ದಾವಣಗೆರೆ ಜಿಲ್ಲಾ ಆಸ್ಪತ್ರೆ ಯೊಂದರಲ್ಲಿಯೇ ಹೃದಯಾಘಾತದಿಂದ ಮೂರು ತಿಂಗಳಲ್ಲಿ ಬರೋಬರಿ 75 ಜನ ಸಾವನ್ನಪ್ಪಿದ್ದಾರೆ. ಇವರೆಲ್ಲಾ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪಿದ್ದು.ಹೀಗೆ ಸಾವಿನ ಸುದ್ದಿ ಕೇಳುತ್ತಿದ್ದಂತೆ ಜನರು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದು, ಇಸಿಜಿ ಮಾಡಿಸಿಕೊಂಡು ತಮ್ಮ ಹೃದಯದ ಆರೋಗ್ಯದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

ಬೆಣ್ಣೆ ನಗರಿ ದಾವಣಗೆರೆಯಲ್ಲೂ ಹೃದಯಾಘಾತ ಆತಂಕ ..ಆಸ್ಪತ್ರೆಗಳಲ್ಲಿ ಜನಜಂಗುಳಿ
Heart Attack
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Jul 02, 2025 | 8:06 PM

Share

ದಾವಣಗೆರೆ, (ಜುಲೈ 02): ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಅದರಲ್ಲೂ ಹಾಸನದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಬೆಚ್ಚಿಬೀಳಿಸುತ್ತಿದೆ. ಇನ್ನು ಬೆಣ್ಣೆ ನಗರಿ ದಾವಣಗೆರೆಯಲ್ಲೂ ಸಹ ಜನರ ಹೃದಯ ಹಿಂಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ಮೂರು ತಿಂಗಳಲ್ಲಿ 75 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಏಪ್ರಿಲ್ ನಲ್ಲಿ 22, ಮೇ ನಲ್ಲಿ 29 ಹಾಗೂ ಜೂನ್ ನಲ್ಲಿ 24 ಜನ ಮೃತಪಟ್ಟಿದ್ದಾರೆ.

ಈ ಮೂರು ತಿಂಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿಯೇ 75 ಜನ ಸಾವನ್ನಪ್ಪಿದ್ದಾರೆ. ಮೂರು ತಿಂಗಳಲ್ಲಿ ಹೃದಯಾಘಾತಕ್ಕೆ 75 ಜನರ ದುರಂತ ಸಾವು ಇದು ಸಣ್ಣ ಸಂಖ್ಯೆಯಲ್ಲ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಿಂದ ಮಾಹಿತಿ. ಜಿಲ್ಲಾ ಆಸ್ಪತ್ರೆಯಲ್ಲಿನ ಸಾವಿನ ಸಂಖ್ಯೆ 75. ಇನ್ನು ತಾಲೂಕವಾರು ಕಳೆದ ವರ್ಷ 15, ಈ ವರ್ಷ 9 ಸಾವು. ಜಗಳೂರು ಕಳೆದ ವರ್ಷ 03, ಈ ವರ್ಷ 01, ಹರಿಹರ ಕಳೆದ ವರ್ಷ 05 ಈ ವರ್ಷ 03, ಹೊನ್ನಾಳಿ ಕಳೆದ ವರ್ಷ 07 ಈ ವರ್ಷ 05, ಇಸಿಜಿ ಮತ್ತು ಹೃದಯ ಸಂಬಂಧಿ ತಪಾಸಣೆಗೆ ಸಂಖ್ಯೆ ಹೆಚ್ಚಳ ಮುಂಜಾಗೃವಾಗಿ ಬೆಡ್ ಸಂಖ್ಯೆ ಹೆಚ್ಚಳ. ದಾವಣಗೆರೆ ಸಿಜೆ ಆಸ್ಪತ್ರೆಯಲ್ಲಿ 50 ಬೆಡ್ ಮೀಸಲು, ಪ್ರತಿ ತಾಲೂಕಾ ಆಸ್ಪತ್ರೆಯಲ್ಲಿ ಐದರಿಂದ ಹತ್ತರವರಗೆ ಬೆಡ್ ಮೀಸಲಿಡಲಾಗಿದೆ.

ದಾವಣಗೆರೆ ಪ್ರಸಿದ್ಧಿ ಪಡೆದಿದ್ದು ಬೆಣ್ಣೆ ದೋಸೆಯಿಂದ. ಬೆಣ್ಣೆಯಲ್ಲಿ ಕೊಬ್ಬಿನಂಶ ಜಾಸ್ತಿ. ಇದೇ ಕಾರಣಕ್ಕೆ ಹೃದಯಕ್ಕೆ ಕೊಬ್ಬಿಣ ಕಾಟ ಅಂದುಕೊಳ್ಳಬೇಡಿ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದ್ರೆ ದಾವಣಗೆರೆಪ ಸ್ವಲ್ಪ ಕಡಿಮೆ.ಇನ್ನು ಹೃದಯಾಘಾತದ ಸುದ್ದಿ ಹಬ್ಬುತ್ತಿದ್ದಂತೆ ಜನರ ನೇರವಾಗಿ ಜಿಲ್ಲಾ ಆಸ್ಪತ್ರೆ ಮೆಟ್ಟಿಲೇರುತ್ತಿದ್ದು. ಬೆಳಿಗ್ಗೆಯಿಂದ ಸಾಲು ಸಾಲಾಗಿ ನಿಂತು ಇಸಿಜಿ ಮಾಡಿಕೊಂಡು ಹೋಗುತ್ತಿದ್ದಾರೆ. ಇತ್ತೀಚಿಗೆ ಎದೆ ನೋವು ಕಾಣಿಸಿಕೊಂಡವರು, ಕಿರಿಯ ಹಾಗೂ ಹಿರಿಯ ವಯಸ್ಸಿನವರು ಆಸ್ಪತ್ರೆಯತ್ತ ಮುಖಮಾಡಿದ್ದು, ಆರ್ಟ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದಾರೆ.

ದಿನಕ್ಕೆ 200ರಿಂದ 300 ಜನರು ತಮ್ಮ ಹೃದಯ ಹೇಗಿದೆ ಹೇಗಿದೆ ಎಂದು ತಿಳಿದುಕೊಳ್ಳಲು ಇಸಿಜಿ ಮೂಲಕ ಖಚಿತ ಪಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲಿದವರು ಸಹ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಿ.ಟಿ ರಾಘವನ್ ಪ್ರತಿಕ್ರಿಯಿಸಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ವೈದ್ಯರಿಂದ ಬರುತ್ತಿದೆ. ಹೃದಯ ಸಂಬಂಧಿ ನೋವು ಕಂಡು ಬಂದಲ್ಲಿ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ. ಅಮೂಲ್ಯವಾದ ಸಮಯದಲ್ಲಿ ಸೂಕ್ತ ಆಸ್ಪತ್ರೆಗೆ ತಲುಪಿದ್ರೆ ಸಾಕು ಜೀವಕ್ಕೆ ತೊಂದರೆ ಆಗಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇನ್ನೊಂದು ಸಮಾಧಾನ ವಿಚಾರ ಈಗ ಸಾವನ್ನಪ್ಪಿದವರು ಸಣ್ಣ ಮಕ್ಕಳು ಹಾಗೂ 40 ವರ್ಷದೊಳಿನವರು ಕಮ್ಮಿ ಇದ್ದಾರೆ. ಮೂರರಿಂದ ನಾಲ್ಕು ಇರಬಹುದು. ಎನೇ ಆಗಲಿ ಸಾವು ಯಾವಾಗ ಬರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂಬ ಮಾತು ಮತ್ತೆ ಮತ್ತೆ ಸತ್ಯವಾಗುತ್ತಿದೆ.

Published On - 8:06 pm, Wed, 2 July 25

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​