ದಾವಣಗೆರೆಯಲ್ಲಿ ಹೆರಿಗೆಯಾದ ಎರಡು ಗಂಟೆಯಲ್ಲಿ ಮಗು ನಾಪತ್ತೆ! ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಗು ಜನಿಸಿ ಎರಡೇ ಗಂಟೆಯಲ್ಲಿ ನಾಪತ್ತೆಯಾಗಿದೆ. ಉಮಾಸಲ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಸಿಬ್ಬಂದಿ ಹೇಳಿದ್ದರು.
ದಾವಣಗೆರೆ: ನಗರದ ಚಾಮರಾಜಪೇಟ್ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯಾದ (Delivery) ಎರಡು ಗಂಟೆಯಲ್ಲಿ ಮಗು (Baby) ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿ ಉಮಾಸಲ್ಮಾ- ಇಸ್ಮಾಯಿಲ್ ಜಬೀವುಲ್ಲಾ ದಂಪತಿಗೆ ಇದೇ ತಿಂಗಳ 16 ರಂದು ಮಗು ಜನಿಸಿತ್ತು. ಮಗು ಜನಿಸಿ ಎರಡೇ ಗಂಟೆಯಲ್ಲಿ ನಾಪತ್ತೆಯಾಗಿದೆ. ಉಮಾಸಲ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಸಿಬ್ಬಂದಿ ಹೇಳಿದ್ದರು. ಆದರೆ ಮಗು ಕೊಟ್ಟಿಲ್ಲ ಅಂತ ಪಾಲಕರು ಆಕ್ರೋಶ ಹೊರಹಾಕಿದ್ದಾರೆ.
ಫಾಲ್ಸ್‌ನಲ್ಲಿ ಈಜಲು ಹೋಗಿದ್ದ ಯುವಕ ಸಾವು: ಕಾರಾವಾರ: ವಜ್ರಾಫಾಲ್ಸ್ನಲ್ಲಿ ಈಜಲು ಹೋಗಿದ್ದ ಯುವಕ ಮೃತಪಟ್ಟಿದ್ದಾನೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ವಜ್ರಾಫಾಲ್ಸ್ನಲ್ಲಿ ನಡೆದಿದೆ. ಯುವಕ ಗೆಳೆಯರೊಂದಿಗೆ ಫಾಲ್ಸ್ ನೋಡಲು ಬಂದಿದ್ದ. ಶ್ರೀಹರಿ ರಾಮಕೃಷ್ಣ ಅಂಗಡಿ (21) ಸಾವನ್ನಪ್ಪಿದ ದುರ್ದೈವಿ. ಫಾಲ್ಸ್‌ನಲ್ಲಿ ಈಜುವಾಗ ಕಲ್ಲಿನ ಮದ್ಯ ಸಿಲುಕಿ ಹೊರಬರಲಾಗದೆ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೋಯ್ಡಾ ತಾಲೂಕಿನ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಮುಷ್ಟೂರು ಗ್ರಾಮದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶವ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ
ರಿಸರ್ಚ್ ಮಾಡಿ ಫೀಲ್ಡ್ಗೆ ಇಳಿದ ಸುನಿ; ‘ಅವತಾರ ಪುರುಷ’ ಟೀಸರ್ನಲ್ಲಿ ಮತ್ತೊಂದು ಮುಖ ಅನಾವರಣ
Video: ಪ್ರಧಾನಿ ಮೋದಿ, ರಾಷ್ಟ್ರಪತಿಯೆದುರು ಮೊಣಕಾಲೂರಿ ನಮಸ್ಕರಿಸಿದ 126 ವರ್ಷದ, ಪದ್ಮಶ್ರೀ ಪುರಸ್ಕತ ಯೋಗಗುರು
Published On - 1:09 pm, Tue, 22 March 22