ಕೃಷ್ಣ ಮೃಗದ ‌ಕೊಂಬು ಹಾಗೂ ಚರ್ಮ‌ ಮಾರಾಟ ಜಾಲ ಪತ್ತೆ: ಓರ್ವನ ಬಂಧನ

ಕೃಷ್ಣ ಮೃಗದ (blackbucks) ಕೊಂಬು ಹಾಗೂ ಚರ್ಮ‌ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ಓರ್ವನ ಬಂಧನ ಮಾಡಿದ್ದಾರೆ.

ಕೃಷ್ಣ ಮೃಗದ ‌ಕೊಂಬು ಹಾಗೂ ಚರ್ಮ‌ ಮಾರಾಟ ಜಾಲ ಪತ್ತೆ: ಓರ್ವನ ಬಂಧನ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: May 19, 2023 | 11:16 AM

ದಾವಣಗೆರೆ: ಕೃಷ್ಣ ಮೃಗದ (blackbucks) ಕೊಂಬು ಹಾಗೂ ಚರ್ಮ‌ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ಓರ್ವನ ಬಂಧನ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ಮಲ್ಲಪ್ಪ ಮಾಂಡಾಳಿ (46)ಬಂಧಿತ ಆರೋಪಿ. ಜಿಲ್ಲೆಯ ಚನ್ನಗಿರಿ ತಾಲೂಕಿನ ಗರಗ ಕ್ರಾಸ್ ಬಳಿ ಹೊಟೇಲ್​ನಲ್ಲಿ ಕೃಷ್ಣ ಮೃಗದ ಕೊಂಬು ಹಾಗೂ ಚರ್ಮ ಮಾರಾಟ ಮಾಡುವ ವೇಳೆ ಬಂಧನ ಮಾಡಲಾಗಿದೆ. ಪೊಲೀಸ್ ಅರಣ್ಯ ಸಂಚಾರಿ ದಳದ ಕಾರ್ಯಾಚರಣೆಯಿಂದ ಎರಡು ಕೃಷ್ಣ ಮೃಗದ ಕೊಂಬು ಹಾಗೂ ಮೂರು ಕೃಷ್ಣ ಮೃಗದ ಚರ್ಮವನ್ನು ವಶಕ್ಕೆ ಪಡೆಯಲಾಗಿದೆ.

ಬೀದಿ ನಾಯಿಗಳ ದಾಳಿ, 15 ಕುರಿಗಳ ಸಾವು

ದಾವಣಗೆರೆ: ರಾಜ್ಯದಲ್ಲಿ ಬೀದಿ ನಾಯಿಗಳ ಕಾಟ ಮತ್ತೆ ಹೆಚ್ಚಾಗಿದೆ. ಬಸವಾಪಟ್ಟಣದ ಬಳಿ ಕಂಸಾಗರ ಗ್ರಾಮದಲ್ಲಿಬೀದಿ ನಾಯಿಗಳು ದಾಳಿ ಮಾಡಿ 15 ಕುರಿಗಳ ಸಾವನ್ನಪ್ಪಿವೆ. ಜೊತೆಗೆ 20 ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿದೆ. ಕೂಡಲೇ ಪಶು ವೈದ್ಯರು ಸ್ಥಳಕ್ಕಾಗಮಿಸಿ ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಬೀದಿ ನಾಯಿಗಳ ದಾಳಿ, 15 ಕುರಿಗಳ ಸಾವು; 20ಕ್ಕೂ ಹೆಚ್ಚು ಕುರಿಗಳಿಗೆ ಗಾಯ

ಈ ಕುರಿಗಳು ರೈತ ತಿಮ್ಮಣ್ಣ ಎಂಬುವರಿಗೆ ಸೇರಿದ್ದು, ಕುರಿ ದೊಡ್ಡಿಯಲ್ಲಿ ಒಂದು ನೂರಕ್ಕೂ ಹೆಚ್ಚು ಕುರಿಗಳಿದ್ದವು. ಇದ್ದಕ್ಕಿದ್ದಂತೆ ಮೂರರಿಂದ ನಾಲ್ಕು ಬೀದಿ ನಾಯಿಗಳು ದಾಳಿ ಮಾಡಿ, ಬಹುತೇಕ ಕುರಿಗಳ ಕುತ್ತಿಗೆ ಕಚ್ಚಿ ಕೊಂದು ಹಾಕಿವೆ. ಈ ಹಿನ್ನಲೆ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ರಸ್ತೆ ದಾಟುವಾಗ ಕೃಷ್ಣಮೃಗಗಳ ಸಾವು

ಬೆಂಗಳೂರು: ಹೆದ್ದಾರಿ ದಾಟಲು ಹೋಗಿ 12 ಕೃಷ್ಣಮೃಗಗಳು ಸಾವನ್ನಪ್ಪಿರುವಂತಹ ಹೃದಯವಿದ್ರಾವಕ ಘಟನೆ ಸೊಲ್ಲಾಪುರ-ವಿಜಯಪುರ ಹೆದ್ದಾರಿಯಲ್ಲಿ ಇತ್ತೀಚೆಗೆ ನಡೆದಿತ್ತು. ಯಾವುದೇ ರಕ್ಷಣೆ ಇಲ್ಲದೆ ಹೈವೆಯಿಂದ ಜಿಗಿದು 50 ಅಡಿ ಸರ್ವಿಸ್​ ರಸ್ತೆಗೆ ಬಿದ್ದು ದುರ್ಮರಣ ಹೊಂದಿದ್ದವು. ಸೋಲಾಪುರ-ವಿಜಯಪುರ ಭಾಗದಲ್ಲಿ ಕೃಷ್ಣ ಮೃಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಇದನ್ನೂ ಓದಿ: ಚುನಾವಣಾ ಮುಗಿಯುತ್ತಿದ್ದಂತೆ ಫೀಲ್ಡ್​​ಗೆ ಇಳಿದ ಹಳೆಯ ಕಳ್ಳರು, ಚೆಕ್ ಪೋಸ್ಟ್ ತೆಗದಿದ್ದೇ ಫ್ರೀ ಫಾರ್​ ಆಲ್​ ಅಂತಾ… ಕಳ್ಳರಿಗೆ ಬಂತು ಸುಗ್ಗಿಕಾಲ!

ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್​ ಪುತ್ರ ಧ್ರುವ ಪಾಟೀಲ್​​ 12 ಕೃಷ್ಣಮೃಗಗಳ ಸಾವಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೃಷ್ಣಮೃಗಗಳ ರಕ್ಷಣೆಗೆ ಫೆನ್ಸಿಂಗ್​ ಹಾಕುವಂತೆ ಆಗ್ರಹಿಸಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್