ದಾವಣಗೆರೆ ಮಠದಲ್ಲಿದೆ ಬಾಲಿವುಡ್​ ನಟ ಸುನಿಲ್​ ಶೆಟ್ಟಿ ಕಳುಹಿಸಿದ ರೋಬೋಟಿಕ್​ ಆನೆ: ಹೇಗಿದೆ ನೋಡಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯ ಶಿಲಾಮಠಕ್ಕೆ 17 ಲಕ್ಷ ರೂಪಾಯಿ ಮೌಲ್ಯದ ರೋಬೋಟಿಕ್ ಆನೆಯನ್ನು ದಾನ ಮಾಡಲಾಗಿದೆ. ಮುಂಬೈನ ಕುಪಾ ಆ್ಯಂಡ್ ಪೀಠಾ ಇಂಡಿಯಾ ಸಂಸ್ಥೆಯಿಂದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಆನೆ ಕಳುಹಿಸಿದ್ದಾರೆ. ಈ ರೋಬೋಟಿಕ್ ಆನೆಗೆ "ಉಮಾಮಹೇಶ್ವರ" ಎಂದು ನಾಮಕರಣ ಮಾಡಲಾಗಿದೆ. ಇದು ನಿಜವಾದ ಆನೆಯಂತೆ ಕಾಣುವುದು ಮತ್ತು ಕಾರ್ಯನಿರ್ವಹಿಸುವುದು ವಿಶೇಷವಾಗಿದೆ. ಕಾಡು ಪ್ರಾಣಿಗಳ ಬಳಕೆಯನ್ನು ತಪ್ಪಿಸಲು ಇದು ಒಂದು ಪರ್ಯಾಯವಾಗಿದೆ.

ದಾವಣಗೆರೆ ಮಠದಲ್ಲಿದೆ ಬಾಲಿವುಡ್​ ನಟ ಸುನಿಲ್​ ಶೆಟ್ಟಿ ಕಳುಹಿಸಿದ ರೋಬೋಟಿಕ್​ ಆನೆ: ಹೇಗಿದೆ ನೋಡಿ
ರೋಬೋಟಿಕ್​ ಆನೆ
Edited By:

Updated on: Feb 24, 2025 | 8:05 AM

ದಾವಣಗೆರೆ, ಫೆಬ್ರವರಿ 24: ಚನ್ನಗಿರಿ (Channagiri) ತಾಲೂಕಿನ ತಾವರೆಕೆರೆಯ ಶಿಲಾಮಠಕ್ಕೆ ರೋಬೋಟಿಕ್​ ಆನೆ (Robotic Elephant) ಬಂದಿದೆ. ರವಿವಾರ (ಫೆ.24) ಶ್ರೀಮಠಕ್ಕೆ ಆಗಮಿಸಿದ ಆನೆಯನ್ನು ಸ್ವಾಮೀಜಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ರೋಬೋಟಿಕ್ ಆನೆಗೆ ಉಮಾಮಹೇಶ್ವರ ಎಂದು ನಾಮಕರಣ ಮಾಡಲಾಯಿತು. ಗ್ರಾಮಸ್ಥರೆಲ್ಲರೂ ಸೇರಿ ಆನೆಯ ಮೆರವಣಿಗೆ ಮಾಡಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರೋಬೋಟಿಕ್ ಆನೆಯ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಜನರು ಮುಗಬಿದ್ದರು.

ಮುಂಬೈನ ಕುಪಾ ಆ್ಯಂಡ್ ಪೀಠಾ ಇಂಡಿಯಾ ಎಂಬ ಸಂಸ್ಥೆವಯಿಂದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ರೋಬೋಟಿಕ್​ ಆನೆಯನ್ನು ನೀಡಿದ್ದಾರೆ. ಈ ಸ್ಥಂಸ್ಥೆವತಿಯಿಂದ ಈಗಾಗಲೇ ರಾಜ್ಯದ ಸುತ್ತೂರು, ಯಡಿಯೂರು ಸೇರಿದಂತೆ ಮೂರು ಮಠಗಳಿಗೆ ಆನೆ ನೀಡಲಾಗಿದೆ. ಇದೀಗ ಶಿಲಾ ಮಠಕ್ಕೆ ಸಂಸ್ಥೆ ನೀಡಿದೆ.

ಇದನ್ನೂ ಓದಿ: ಕೂಲಿ ಕೆಲಸಕ್ಕೆ ಬರುವ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ಶಿರಗನಹಳ್ಳಿ ರೈತ!

ರೋಬೋಟಿಕ್ ಆನೆ

ಒಂದು ರೋಬೋಟಿಕ್​ ಆನೆಗೆ 17 ಲಕ್ಷ ರೂಪಾಯಿ ತಗಲುತ್ತದೆ. ನಿಜವಾದ ಆನೆಯ ತದ್ರೂಪಿ ರೋಬೋಟಿ ಆನೆ. ರೋಬೋಟಿಕ್​ ಆನೆಯನ್ನು ಟ್ರ್ಯಾಲಿ ಮೇಲೆ ನಿಲ್ಲಿಸಲಾಗಿರುತ್ತದೆ. ಟ್ರ್ಯಾಲಿ ಮೂಲಕ ಆನೆ ಚಲಿಸುತ್ತದೆ. ರೋಬೋಟಿಕ್​ ಆನೆಯನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಸಲಾಗುತ್ತದೆ. ಇದರಿಂದ ಆನೆ ನಿರಂತರವಾಗಿ ಕಣ್ಣು ಪಿಳಿಕಿಸುವುದು, ಕಿವಿ ಅಲ್ಲಾಡಿಸುವುದು, ಬಾಲ ಬಿಸುತ್ತದೆ. ಕಾಡು ಪ್ರಾಣಿಗಳಿಗೆ ಹಿಂಸೆ ನೀಡುವುದು ನಿಷೇಧಿಸಲಾಗಿದೆ. ಹೀಗಾಗಿ, ಪರ್ಯಾಯ ಎಂಬಂತೆ ರೋಬೋಟಿಕ್​ ಆನೆಯನ್ನು ಶ್ರೀಮಠ ತರಿಸಿದೆ. ಯಾವುದೇ ಖರ್ಚು-ವೆಚ್ಚವಿಲ್ಲದೆ ಆನೆಯನ್ನು ಪಾಲನೆ ಮಾಡಬಹುದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:04 am, Mon, 24 February 25