ದಾವಣಗೆರೆ: ಎರಡು ದಶಕಗಳ ಕಾಲ ದೇಶದ ಗಡಿ ಕಾಯ್ದು ತವರಿಗೆ ಆಗಮಿಸಿದ ಯೋಧನಿಗೆ ಅದ್ಧೂರಿ ಸ್ವಾಗತ

| Updated By: preethi shettigar

Updated on: Feb 04, 2022 | 2:06 PM

1999 ಹರಿಹರದಲ್ಲಿ ಐಟಿಐ ಓದಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಆದರೆ ದೇಶ ಸೇವೆ ಮಾಡಬೇಕು ಎಂಬ ಆಸೆ ದೊಡ್ಡದಾಗಿತ್ತು. ಇದೇ ಕಾರಣಕ್ಕೆ ಬೆಂಗಳೂರಿಗೆ ಹೋಗಿ ಸೇನೆ ಭರ್ತಿಗಾಗಿ ಪ್ರಯತ್ನ ಮಾಡಿದರು. ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾದ ಅಲಾವುಲ್ಲಾ ಅವರು ಗಡಿ ಭದ್ರತಾ ಪಡೆಗೆ ಆಯ್ಕೆ ಆಗಿಯೇ ಬಿಟ್ಟರು.

ದಾವಣಗೆರೆ: ಎರಡು ದಶಕಗಳ ಕಾಲ ದೇಶದ ಗಡಿ ಕಾಯ್ದು ತವರಿಗೆ ಆಗಮಿಸಿದ ಯೋಧನಿಗೆ ಅದ್ಧೂರಿ ಸ್ವಾಗತ
ಯೋಧ ಅತಾವುಲ್ಲಾ
Follow us on

ದಾವಣಗೆರೆ:  ಜಿಲ್ಲೆಯ ಹರಿಹರ ನಗರವೇ ಇಂದು ಸಂಭ್ರಮದಲ್ಲಿದೆ. ಬಹುತೇಕರು ಎಲ್ಲರೂ ಹಾರ ಹಿಡಿದು  ಯೋಧನ (soldier) ಬರುವಿಕೆಗಾಗಿ ಕಾದು ನಿಂತಿದ್ದರು. ಕಾರಣ ಭಾರತ ಮಾತೆಯ ಸೇವೆಯನ್ನು ಎರಡು ದಶಕಗಳಿಂದ ಮಾಡಿದ ಯೋಧ ಅತಾವುಲ್ಲಾ ಎಂಎಸ್ ಇಂದು ಮರಳಿ ಹುಟ್ಟೂರಿಗೆ ಆಗಮಿಸಿದ್ದಾರೆ. ಅತಾವುಲ್ಲಾ ಹರಿಹರಿ ನಗರದ ನಬೀಸಾಬ್ ಮಕಾನದಾರ ಹಾಗೂ ನಸೀಮಾ ಬಿ ದಂಪತಿಗಳ ಹಿರಿಯ ಪುತ್ರ‌. 1999 ಹರಿಹರದಲ್ಲಿ ಐಟಿಐ(ITI) ಓದಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಆದರೆ ದೇಶ ಸೇವೆ ಮಾಡಬೇಕು ಎಂಬ ಆಸೆ ದೊಡ್ಡದಾಗಿತ್ತು. ಇದೇ ಕಾರಣಕ್ಕೆ ಬೆಂಗಳೂರಿಗೆ ಹೋಗಿ ಸೇನೆ ಭರ್ತಿಗಾಗಿ ಪ್ರಯತ್ನ ಮಾಡಿದರು. ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾದ ಅಲಾವುಲ್ಲಾ ಅವರು ಗಡಿ ಭದ್ರತಾ ಪಡೆಗೆ (BSF) ಆಯ್ಕೆ ಆಗಿಯೇ ಬಿಟ್ಟರು.

2000 ಜೂನ್ 26 ರಿಂದ ಅಲಾವುಲ್ಲಾ ಅವರ ದೇಶ ಸೇವೆ ಆರಂಭವಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ತರಬೇತಿ, ನಂತರ ಒಂದು ವರ್ಷಗಳ ಕಾಲ ಪುಣೆಯ ಸೇನಾ ತರಬೇತಿ ಕೇಂದ್ರದಲ್ಲಿ ಪರಿಶ್ರಮ. ಇಲ್ಲಿಂದ ನೇರವಾಗಿ ಕಾಶ್ಮೀರದ ಗೊಗಾಲ್ಯಾಂಡ ಎಂದ ಕಠಿಣ ತರಬೇತಿ ಪಡೆದು ಬಿಎಸ್​ಎಫ್​ನ 75 ನೇ ತುಕಡಿಯ ಮೂಲಕ ಸೇವೆ ಆರಂಭಿಸಿದ್ದಾರೆ.

ಆರಂಭಿಕ ಸೇವೆ ಕಾಶ್ಮೀರದ ಕುಪ್ಪವಾಡ ತಾಲೂಕಿನ ಪಾಕ್ ಗಡಿ ಗ್ರಾಮದಲ್ಲಿ ಮಾಡಿದ್ದಾರೆ. ನಿರಂತರವಾಗಿ ಮೈ ತುಂಬ ಕಣ್ಣಾಗಿಟ್ಟುಕೊಂಡು ಮೂರು ವರ್ಷ ಸೇವೆ ಸಲ್ಲಿಸಿದ ಬಳಿಕ, 2004 ರಿಂದ 2007 ರವರೆಗೆ ರಾಜಸ್ಥಾನದ ಜೈಸಲಮೇರ್ ಬಳಿಕ ಪೊಕ್ರಾನ್​ನಲ್ಲಿ ಸೇವೆ ಸಲ್ಲಿಸಿದ್ದಾರೆ. ನಿತ್ಯ ಪ್ರಾಯೋಗಿಕವಾಗಿ ಬಾಂಬ್ ಸ್ಪೋಟ್ ಸೇನೆಯ ಶಕ್ತಿ ಪ್ರದರ್ಶನಕ್ಕೆ ತಾಲೀಮು ನಡೆಸಿದ್ದಾರೆ. ಹೀಗೆ ರಾಜಸ್ಥಾನ ಓಡಿಸಾ, ಪಂಜಾಬ್, ಜಮ್ಮು ಕಾಶ್ಮೀರ ಸೇರಿದಂತೆ ದೇಶದ ಗಡಿ ಕಾಯುವುದೇ ಅತಾವುಲ್ಲಾ ಕಾಯಕವಾಗಿತ್ತು.

ನಕ್ಸಲ್ ಕಾರ್ಯಾಚರಣೆಯಲ್ಲಿ ಹೆಸರುಗಳಿಸಿದ ಅತಾವುಲ್ಲಾ

ಅತಾವುಲ್ಲಾ ಅವರ ಎರಡು ದಶಕದ ಸೇವೆಯಲ್ಲಿ ಹೆಚ್ಚು ಹೆಸರು ಮಾಡಿದ್ದ ಅವರು 2008 ರಿಂದ 2011ರವರೆ ಅಂದರೆ ಮೂರು ವರ್ಷಗಳ ಕಾಲ ಓಡಿಸ್ಸಾದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿ ಅವರು ನಕ್ಸಲ್ ಕಾರ್ಯಾಚರಣೆ ತಂಡ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಅತಾವುಲ್ಲಾ ಅವರು ಸಲ್ಲಿಸಿದ ಸೇವೆ ಹಾಗೂ ತೊರಿಸಿದ ಜಾಣ್ಮೆ ಸೇನಾಧಿಕಾರಿಗಳ ಗಮನ ಸೆಳೆದಿತ್ತು‌.

ಸಿಪಾಯಿಯಿಂದ ಹವಾಲ್ದಾರ್ ಆದ ಅತಾವುಲ್ಲಾ

ಹೀಗೆ ಪ್ರತಿಯೊಂದು ಪ್ರದೇಶದಲ್ಲಿ ಸೇವೆ ಸಲ್ಲಿಸುವಾಗ ಅತಾವುಲ್ಲಾ ತೊರಿಸಿ ಸಾಹಸ ಮೆಚ್ಚಲೇ ಬೇಕು. ಇದೇ ಕಾರಣಕ್ಕೆ ಅವರು ಗಡಿ ಭದ್ರತಾ ಪಡೆಯಲ್ಲಿ ಸಿಪಾಯಿಯಿಂದ ಹವಾಲ್ದಾರ್ ಆಗಿ ಬಡ್ತಿ ಪಡೆದರು. ಒಂದು ತುಕಡಿಯಲ್ಲಿ ಗುರುತರ ಜವಾಬ್ದಾರಿ ಇರುವ ಹವಾಲ್ದಾರ್ ಹುದ್ದೆಯಲ್ಲಿ 2017 ರಿಂದ 2021 ರವರೆಗೆ ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸಿದ್ದು ಅತಾವುಲ್ಲಾ ಸಾಧನೆ.

ಅದ್ಧೂರಿ ಸ್ವಾಗತ ತವರಿನ ಪ್ರೀತಿಗೆ ಅತಾವುಲ್ಲಾ ಭಾವುಕ

ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅತಾವುಲ್ಲಾ ಅವರು ಕಳೆದ ಜನವರಿಯಲ್ಲಿ 31, 2022 ರಂದು ಸೇವೆಯಿಂದ ನಿವೃತ್ತರಾದರು. ಹೀಗೆ ನಿವೃತ್ತರಾಗಿ ಇಂದು ಅತಾವುಲ್ಲಾ ತವರಿಗೆ ವರಳಿದರು. ಹೀಗೆ ತರವರಿಗೆ ಬಂದ ಅತಾವುಲ್ಲಾ ಅವರಿಗೆ ಹರಿಹರದ ಜನ ಅದ್ಧೂರಿ ಸ್ವಾಗತ ನೀಡಿ ಗೌರವಿಸಿದರು.

ರಾಯಚೂರು: 34 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಮಾಡಿದ ಸೈನಿಕನಿಗೆ ಅದ್ಧೂರಿ ಸ್ವಾಗತ

34 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾದ ಯೋಧ ಪಂಪಣ್ಣ ಜಾವೂರ್‌ಗೆ ಹುಟ್ಟೂರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಟ್ಟೂರಿನಲ್ಲಿ ಕುದುರೆ ಮೇಲೆ ಮೆರವಣಿಗೆ ಮಾಡಿ ಗ್ರಾಮಸ್ಥರು ಸ್ವಾಗತಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕನಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ:

ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡ ಯೋಧನ ಕೈಗೆ ಒಲಿಂಪಿಕ್ಸ್ ಜ್ಯೋತಿ; ಚೀನಾದ ನಡೆ ನಾಚಿಕೆಗೇಡು ಎಂದ ಅಮೆರಿಕ

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಗಾಯಗೊಂಡು ಸಾವು, ಕುಟುಂಬದಲ್ಲಿ ಮಡುಗಟ್ಟಿದ ದುಃಖ

 

Published On - 1:59 pm, Fri, 4 February 22