ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡ ಯೋಧನ ಕೈಗೆ ಒಲಿಂಪಿಕ್ಸ್ ಜ್ಯೋತಿ; ಚೀನಾದ ನಡೆ ನಾಚಿಕೆಗೇಡು ಎಂದ ಅಮೆರಿಕ

ಗಾಲ್ವಾನ್ ಕಣಿವೆಯ ಘರ್ಷಣೆಯ ಸಂದರ್ಭದಲ್ಲಿ ತಲೆಗೆ ಗಂಭೀರ ಗಾಯವಾದ ಪೀಪಲ್ಸ್ ಲಿಬರೇಶನ್ ಆರ್ಮಿ ಕ್ಸಿನ್‌ಜಿಯಾಂಗ್ ಮಿಲಿಟರಿ ಕಮಾಂಡರ್‌ನ ರೆಜಿಮೆಂಟಲ್ ಕಮಾಂಡರ್ ಕ್ವಿ ಫಾಬಾವೊ ಒಲಿಂಪಿಕ್ಸ್ ಜ್ಯೋತಿ ಹಿಡಿದಿದ್ದಾರೆ.

ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡ ಯೋಧನ ಕೈಗೆ ಒಲಿಂಪಿಕ್ಸ್ ಜ್ಯೋತಿ; ಚೀನಾದ ನಡೆ ನಾಚಿಕೆಗೇಡು ಎಂದ ಅಮೆರಿಕ
ಒಲಿಂಪಿಕ್ಸ್ ಜ್ಯೋತಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 03, 2022 | 1:38 PM

ದೆಹಲಿ: ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ(Galwan Clash) ಗಾಯಗೊಂಡ ಸೇನಾಧಿಕಾರಿ ಕೈಗೆ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ಗೆ(Beijing Winter Olympics) ಜ್ಯೋತಿ ನೀಡಿರುವ ಚೀನಾದ ನಿರ್ಧಾರವನ್ನು ಯುಎಸ್ ಸೆನೆಟ್ ವಿದೇಶಾಂಗ ಸಂಬಂಧಗಳ  ಸಮಿತಿಯ ಉನ್ನತ ಶಾಸಕರೊಬ್ಬರು ಖಂಡಿಸಿದ್ದಾರೆ. ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗಿನ ಹಿಂಸಾತ್ಮಕ ಮುಖಾಮುಖಿಯಲ್ಲಿ ತೀವ್ರವಾಗಿ ಗಾಯಗೊಂಡ ಚೀನಾದ ಸೇನೆಯ ರೆಜಿಮೆಂಟಲ್ ಕಮಾಂಡರ್, ಬೀಜಿಂಗ್ ಕ್ರೀಡಾಕೂಟದ ಜ್ಯೋತಿ ಹಿಡಿದಿದ್ದಾರೆ  ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಬೀಜಿಂಗ್ ಕ್ರೀಡಾಕೂಟವನ್ನು ರಾಜಕೀಯಗೊಳಿಸಲಾಗಿದೆ ಎಂಬುದಕ್ಕೆ ಈ ಕ್ರಮವು ಸ್ಪಷ್ಟ ಸೂಚನೆಯಾಗಿದೆ ಎಂದು ಚೀನಾ ವೀಕ್ಷಕರು ಹೇಳಿದ್ದಾರೆ.  “2020 ರಲ್ಲಿ ಭಾರತದ ಮೇಲೆ ದಾಳಿ ಮಾಡಿದ ಮಿಲಿಟರಿ ಕಮಾಂಡ್‌ನ ಭಾಗವಾಗಿರುವ ಮತ್ತು ಉಯ್ಘರ್‌ಗಳ ವಿರುದ್ಧ ನರಮೇಧವನ್ನು ಜಾರಿಗೊಳಿಸಿದವರನ್ನು ಬೀಜಿಂಗ್ 2022 ರ ಒಲಿಂಪಿಕ್ಸ್‌ ಜ್ಯೋತಿ ಹಿಡಿಯಲು ಆಯ್ಕೆ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅಮೆರಿಕ ಉಯ್ಘರ್ ಸ್ವಾತಂತ್ರ್ಯ ಮತ್ತು ಭಾರತದ ಸಾರ್ವಭೌಮತ್ವವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ” ಎಂದು ಅಮೆರಿಕ ಸೆನೆಟ್ ವಿದೇಶಿ ಸಂಬಂಧಗಳ ಸಮಿತಿಯ ರ್ಯಾಂಕಿಂಗ್ ಮೆಂಬರ್ ಜಿಮ್ ರಿಶ್ (Jim Risch) ಟ್ವೀಟ್ ಮಾಡಿದ್ದಾರೆ.ಗಾಲ್ವಾನ್ ಕಣಿವೆಯ ಘರ್ಷಣೆಯ ಸಂದರ್ಭದಲ್ಲಿ ತಲೆಗೆ ಗಂಭೀರ ಗಾಯವಾದ ಪೀಪಲ್ಸ್ ಲಿಬರೇಶನ್ ಆರ್ಮಿ ಕ್ಸಿನ್‌ಜಿಯಾಂಗ್ ಮಿಲಿಟರಿ ಕಮಾಂಡರ್‌ನ ರೆಜಿಮೆಂಟಲ್ ಕಮಾಂಡರ್ ಕ್ವಿ ಫಾಬಾವೊ ಅವರು ಚೀನಾದ ನಾಲ್ಕು ಬಾರಿ ಒಲಿಂಪಿಕ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ವಾಂಗ್ ಮೆಂಗ್ ಅವರಿಂದ ಜ್ಯೋತಿ ತೆಗೆದುಕೊಂಡರು ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಚೀನಾ ತನ್ನ ನಷ್ಟವನ್ನು ಮರೆಮಾಡುತ್ತಿದೆ ಎಂದು ನಂಬಲಾಗಿದೆ. ಈ ಕಾರ್ಯಾಚರಣೆಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಹತರಾಗಿದ್ದರು. ಪೀಪಲ್ಸ್ ಲಿಬರೇಶನ್ ಆರ್ಮಿ ಅಥವಾ ಪಿಎಲ್‌ಎ ತನ್ನ ಅಧಿಕೃತ ನಾಲ್ಕು ಸೈನಿಕರಿಗಿಂತ ಒಂಬತ್ತು ಪಟ್ಟು ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆ ವರದಿ ಮಾಡಿದೆ.

ಆಸ್ಟ್ರೇಲಿಯಾದ ಸುದ್ದಿ ಪತ್ರಿಕೆಯೊಂದು ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಹೇಳಿದಂತೆ ನಾಲ್ಕು ಸೈನಿಕರಲ್ಲ, ಅದು  38 ಸೈನಿಕರನ್ನು ಇದು ಕಳೆದುಕೊಂಡಿದೆ ಎಂದು ವರದಿ ಮಾಡಿದೆ.  ಆಸ್ಟ್ರೇಲಿಯನ್ ಪತ್ರಿಕೆ ‘ದಿ ಕ್ಲಾಕ್ಸನ್’ ನಲ್ಲಿನ ಲೇಖನವೊಂದರ ಪ್ರಕಾರ 38 ಪಿಎಲ್ಎ ಯೋಧರು ಕತ್ತಲೆಯಲ್ಲಿ ವೇಗವಾಗಿ ಹರಿಯುವ, ಉಪ-ಶೂನ್ಯ ನದಿಯನ್ನು ದಾಟುವಾಗ ಮುಳುಗಿದ್ದಾರೆ. ಸಾಮಾಜಿಕ ಮಾಧ್ಯಮ ಸಂಶೋಧಕರ ಗುಂಪು ಸಿದ್ಧಪಡಿಸಿದ ‘ಗಾಲ್ವಾನ್ ಡಿಕೋಡೆಡ್’ (Galwan Decoded) ಎಂಬ ವರದಿಯು ಈ ಮಾಹಿತಿ ಬಹಿರಂಗ ಪಡಿಸಿದ್ದು,  ಒಂದು ವರ್ಷ ತನಿಖೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ .  ಘರ್ಷಣೆಯ ಸುತ್ತಲಿನ ಚರ್ಚೆಯನ್ನು ಮುಚ್ಚಿಹಾಕಲು ಚೀನಾ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ಪತ್ರಿಕಾ ವರದಿಯು ಹಲವಾರು Weibo ಬಳಕೆದಾರರನ್ನು ಉಲ್ಲೇಖಿಸಿದ್ದು “ಆ ರಾತ್ರಿ ವಾಂಗ್ ಜೊತೆಗೆ ಕನಿಷ್ಠ 38 ಪಿಎಲ್ ಎ ಯೋಧರು ಮುಳುಗಿದರು. ಇದರಲ್ಲಿ ವಾಂಗ್ ಸೇರಿದಂತೆ ನಾಲ್ವರು ಯೋಧರು ಮೃತಪಟ್ಟಿದ್ದಾರೆ ಎಂದಷ್ಟೇ ಚೀನಾ ಬಹಿರಂಗ ಪಡಿಸಿತ್ತು.  “ವಾಸ್ತವವಾಗಿ ಏನಾಯಿತು, ಚಕಮಕಿಗೆ ಏನು ಕಾರಣ ಎಂಬುದರ ಕುರಿತು ಬಹಳಷ್ಟು ಸಂಗತಿಗಳನ್ನು ಬೀಜಿಂಗ್ ಮರೆಮಾಡಿದೆ. ಚೀನಾ ಜಗತ್ತಿಗೆ ಹೇಳಿದ್ದು ಹೆಚ್ಚಾಗಿ ಕಟ್ಟು ಕಥೆಗಳು. ಅನೇಕ ಬ್ಲಾಗ್‌ಗಳು ಮತ್ತು ಪುಟಗಳನ್ನು ಚೀನೀ ಅಧಿಕಾರಿಗಳು ತೆಗೆದುಹಾಕಿದ್ದಾರೆ. ಆದರೆ ಚೀನಾದ ಮುಖ್ಯ ಭೂಭಾಗದ ಡಿಜಿಟಲ್ ಆರ್ಕೈವ್‌ಗಳು ವಿಭಿನ್ನ ಕಥೆಯನ್ನು ಬಹಿರಂಗಪಡಿಸುತ್ತವೆ, ”ಎಂದು ಪತ್ರಿಕೆಯ ವರದಿ ಹೇಳುತ್ತದೆ .

ಈ ವರದಿಯು ಮುಖ್ಯ ಭೂಭಾಗದ ಚೀನೀ ಬ್ಲಾಗರ್‌ಗಳೊಂದಿಗಿನ ನಡೆಸಿದ ಚರ್ಚೆಗಳು, ಮುಖ್ಯ ಭೂ-ಆಧಾರಿತ ಚೀನೀ ನಾಗರಿಕರಿಂದ ಪಡೆದ ಮಾಹಿತಿ ಮತ್ತು ಚೀನಾದ ಅಧಿಕಾರಿಗಳಿಂದ ಅಳಿಸಲ್ಪಟ್ಟ ಮಾಧ್ಯಮ ವರದಿಗಳನ್ನು ಆಧರಿಸಿದೆ.

ಇದನ್ನೂ ಓದಿ: ಗಾಲ್ವಾನ್‌ ಸಂಘರ್ಷದಲ್ಲಿ ಚೀನಾಕ್ಕೆ ಅಪಾರ ನಷ್ಟವಾಗಿತ್ತು, ಬೀಜಿಂಗ್ ಜಗತ್ತಿಗೆ ಹೇಳಿದ್ದು ಕಟ್ಟುಕತೆ: ಆಸ್ಟ್ರೇಲಿಯಾದ ಪತ್ರಿಕಾ ವರದಿ

Published On - 1:32 pm, Thu, 3 February 22

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ