ರಷ್ಯಾ-ಉಕ್ರೇನ್​ ನಡುವೆ ಯುದ್ಧಾತಂಕ; ನ್ಯಾಟೋ ಬಲವರ್ಧನೆಗೆ 3000 ಯೋಧರನ್ನು ಪೂರ್ವ ಯುರೋಪ್​ಗೆ ಕಳಿಸಿದ ಯುಎಸ್​​

ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರು ತುಂಬ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಅವರು ಹಾಗೆ ನಡೆದುಕೊಳ್ಳುವವರೆಗೂ ನಾವು ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್​ಗೆ ಎಲ್ಲ ರೀತಿಯ ಬೆಂಬಲವನ್ನೂ ನೀಡುತ್ತಲೇ ಇರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ. 

ರಷ್ಯಾ-ಉಕ್ರೇನ್​ ನಡುವೆ ಯುದ್ಧಾತಂಕ; ನ್ಯಾಟೋ ಬಲವರ್ಧನೆಗೆ 3000 ಯೋಧರನ್ನು ಪೂರ್ವ ಯುರೋಪ್​ಗೆ ಕಳಿಸಿದ ಯುಎಸ್​​
ಉಕ್ರೇನ್​ ಗಡಿಯ ಸೆಟಲೈಟ್ ಚಿತ್ರ
Follow us
| Edited By: Lakshmi Hegde

Updated on:Feb 12, 2022 | 4:09 PM

ದೆಹಲಿ: ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಯುದ್ಧ ಸನ್ನಿವೇಶ ಉಂಟಾಗಿದೆ. ಯಾವುದೇ ಕ್ಷಣದಲ್ಲೂ ಆಕ್ರಮಣ ತೀವ್ರಗೊಳ್ಳಬಹುದು ಎಂಬ ಆತಂಕದ ಮಧ್ಯೆಯೇ ರಷ್ಯಾ ಇದೀಗ ತನ್ನ ಸಾವಿರಾರು ಸೈನಿಕರನ್ನು, ಫಿರಂಗಿಗಳನ್ನು, ಯೋಧರಿಗಾಗಿ ರಕ್ಷಾಕವಚಗಳನ್ನು ಉಕ್ರೇನ್​ ಗಡಿಗೆ ಕಳಿಸುತ್ತಿರುವುದು ಸೆಟಲೈಟ್​ ಫೋಟೋದಲ್ಲಿ ಕಂಡುಬಂದಿದೆ. ಒಂದೆಡೆ ರಷ್ಯಾ ತನ್ನ ಸೈನ್ಯ ಬಲ ಏರಿಸುತ್ತಿದ್ದರೆ, ಇನ್ನೊಂದೆಡೆ  ಅಮೆರಿಕ ಮತ್ತು ಮಿತ್ರರಾಷ್ಟ್ರ ಗಳು ತಮ್ಮ ಸೇನಾ ಒಕ್ಕೂಟವಾದ  ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (North Atlantic Treaty Organization- NATO )ಯ ಪಡೆಯನ್ನು ಉಕ್ರೇನ್​ಗೆ ಕಳಿಸಿ, ಸಹಕಾರ ನೀಡುತ್ತಿವೆ.

ಯುಎಸ್​ ಬುಧವಾರ ಸುಮಾರು ಮೂರು ಸಾವಿರ ಸೈನಿಕರನ್ನು ಪೂರ್ವ ಯುರೋಪ್​ಗೆ ಕಳಿಸುವ ಮೂಲಕ ನ್ಯಾಟೋ ಪಡೆಯನ್ನು ಬಲಗೊಳಿಸಿದೆ.  ಉಕ್ರೇನ್ ಬಾರ್ಡರ್​ನಲ್ಲಿ ಲಕ್ಷಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿರುವ ರಷ್ಯಾ ಅವರನ್ನು ಹಿಂಪಡೆಯಲು ಹಿಂದೇಟು ಹಾಕುತ್ತಿದೆ. ಯುಎಸ್ ಮತ್ತು ಮಿತ್ರ ರಾಷ್ಟ್ರಗಳು ಈಗಾಗಲೇ ಉಕ್ರೇನ್​​ ಸಹಾಯಕ್ಕೆ ನಿಂತಿದ್ದು, ಯಾವುದೇ ಕ್ಷಣಕ್ಕೆ ಸಿದ್ಧವಾಗುವಂತೆ ಅಮೆರಿಕ ತನ್ನ ಸುಮಾರು 8500 ಯೋಧರಿಗೆ ಹೇಳಿದೆ. ಬುಧವಾರ ಜರ್ಮನಿಯಲ್ಲಿದ್ದ ಯುಎಸ್​ನ 1000 ಯೋಧರನ್ನು ರೋಮಾನಿಯಾಕ್ಕೆ ಕಳಿಸಲಾಗಿದ್ದು ಮತ್ತು ಯುಸ್​​ನಲ್ಲಿದ್ದ 2000 ಸೈನಿಕರನ್ನು ಜರ್ಮನಿ ಮತ್ತು ಪೋಲ್ಯಾಂಡ್​ಗೆ ಕಳಿಸಲಾಗಿದೆ.  ಒಟ್ಟಾರೆ ನ್ಯಾಟೋ ಪಡೆಗಳು ಉಕ್ರೇನ್​​ಗೆ ರಕ್ಷಾ ಕವಚದಂತೆ ನಿಂತಿವೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರು ತುಂಬ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಅವರು ಹಾಗೆ ನಡೆದುಕೊಳ್ಳುವವರೆಗೂ ನಾವು ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್​ಗೆ ಎಲ್ಲ ರೀತಿಯ ಬೆಂಬಲವನ್ನೂ ನೀಡುತ್ತಲೇ ಇರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.  ಆದರೆ ಯುಎಸ್ ಹೆಚ್ಚುವರಿ ಸೈನಿಕರನ್ನು ಜಮಾವಣೆ ಮಾಡಿದ್ದಕ್ಕೆ ರಷ್ಯಾ ಕಿಡಿಕಾರಿದೆ. ಯುಎಸ್​ ವಿನಾಶಕಾರಿ ಹೆಜ್ಜೆಯನ್ನಟ್ಟಿದೆ ಎಂದು ರಷ್ಯಾ ವಿದೇಶಾಂಗ ವ್ಯವಹಾರಗಳ ಕಿರಿಯ ಸಚಿವ ಅಲೆಕ್ಸಾಂಡರ್  ಗ್ರುಷ್ಕೋ ಆರೋಪಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕ್​ಅಪ್​ನ್ನು ಹೆಚ್ಚಿಸಲು ಇಲ್ಲಿವೆ ಆರು ಉಪಯುಕ್ತ ಮಾಹಿತಿ

Published On - 11:51 am, Thu, 3 February 22

ತಾಜಾ ಸುದ್ದಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ