ಮಾಸ್ಕ್ ಹಾಕದ ಪೊಲೀಸ್ ಸಿಬ್ಬಂದಿ ಬಳಿ ದಂಡ ವಸೂಲಿ ಮಾಡಿದ ಡಿಸಿ, ಎಸ್​ಪಿ

|

Updated on: Jun 18, 2020 | 1:21 PM

ದಾವಣಗೆರೆ: ಮಾಸ್ಕ್ ಹಾಕದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ. ಸರ್ಕಾರದ ಆದೇಶ ಸರಿಯಾಗಿ ಪಾಲಿಸದವರಿಗೆ ಪಾಲಿಸುವಂತೆ ಮಾಡುವ ನಮ್ಮ ಕೊರೊನಾ ವಾರಿಯರ್ಸ್​ ತಾವೇ ಮಾಸ್ಕ್ ಹಾಕದೆ ಸುತ್ತಾಡುತ್ತಿದ್ದಾರೆ. ಇದನ್ನು ಗಮನಿಸಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ ಪಿ ಹನುಮಂತರಾಯ, ಹರೀಶ್ ಎಂಬ ಪೊಲೀಸ್ ಸಿಬ್ಬಂದಿಗೆ ಮಹಾನಗರ ಪಾಲಿಕೆ ಮುಂದೆ ದಂಡ ವಿಧಿಸಿದ್ದಾರೆ. 200 ರೂಪಾಯಿ ದಂಡ ಕಟ್ಟಿಸಿಕೊಂಡಿದ್ದಾರೆ. ಪೊಲೀಸ್ ಪೇದೆ ದುಡ್ಡು ತೆಗೆಯಲು ತಡ ಮಾಡಿದಾಗ ತಾವೇ ತಮ್ಮ ಸಿಬ್ಬಂದಿಯ […]

ಮಾಸ್ಕ್ ಹಾಕದ ಪೊಲೀಸ್ ಸಿಬ್ಬಂದಿ ಬಳಿ ದಂಡ ವಸೂಲಿ ಮಾಡಿದ ಡಿಸಿ, ಎಸ್​ಪಿ
Follow us on

ದಾವಣಗೆರೆ: ಮಾಸ್ಕ್ ಹಾಕದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ. ಸರ್ಕಾರದ ಆದೇಶ ಸರಿಯಾಗಿ ಪಾಲಿಸದವರಿಗೆ ಪಾಲಿಸುವಂತೆ ಮಾಡುವ ನಮ್ಮ ಕೊರೊನಾ ವಾರಿಯರ್ಸ್​ ತಾವೇ ಮಾಸ್ಕ್ ಹಾಕದೆ ಸುತ್ತಾಡುತ್ತಿದ್ದಾರೆ.

ಇದನ್ನು ಗಮನಿಸಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ ಪಿ ಹನುಮಂತರಾಯ, ಹರೀಶ್ ಎಂಬ ಪೊಲೀಸ್ ಸಿಬ್ಬಂದಿಗೆ ಮಹಾನಗರ ಪಾಲಿಕೆ ಮುಂದೆ ದಂಡ ವಿಧಿಸಿದ್ದಾರೆ. 200 ರೂಪಾಯಿ ದಂಡ ಕಟ್ಟಿಸಿಕೊಂಡಿದ್ದಾರೆ.

ಪೊಲೀಸ್ ಪೇದೆ ದುಡ್ಡು ತೆಗೆಯಲು ತಡ ಮಾಡಿದಾಗ ತಾವೇ ತಮ್ಮ ಸಿಬ್ಬಂದಿಯ ದಂಡ ಕಟ್ಟಲು ಎಸ್ ಪಿ ಹನುಮಂತರಾಯ ಮುಂದಾದ್ರು. ನಂತರ ಪೊಲೀಸ್ ಸಿಬ್ಬಂದಿ ತಾವೇ ದಂಡ ಕಟ್ಟಿದ್ರು. ಈ ರೀತಿ ಕಾನೂನು ಎಲ್ಲರಿಗೂ ಒಂದೇ‌ ಎಂದು ಸಾರಿದ್ದಾರೆ. ಇಂದು ಮಾಸ್ಕ್ ಡೇ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ನಗರದಲ್ಲಿ ಮಾಸ್ಕ್ ಜಾಗೃತಿ ಮೂಡಿಸುವ ಮೂಲಕ ಆಚರಣೆ ಮಾಡಿದೆ. ಹಾಗೂ ಮಾಸ್ಕ್ ಹಾಕದ ಸಾರ್ವಜನಿಕರಿಗೆ ದಂಡ ವಿಧಿಸಿದೆ.